ETV Bharat / state

ಕಾರವಾರದಲ್ಲಿ ನಾಡಬಾಂಬ್ ಇಟ್ಟು ಹಂದಿ ಹತ್ಯೆ ಪ್ರಕರಣ; ಸಜೀವ ಬಾಂಬ್ ನಿಷ್ಕ್ರಿಯಗೊಳಿಸಿದ ಬಿಡಿಡಿಎಸ್ ತಂಡ

ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದಲ್ಲಿ ಪತ್ತೆಯಾಗಿದ್ದ ಸಜೀವ ಬಾಂಬ್​ ಅನ್ನು ಬಿಡಿಡಿಎಸ್ ತಂಡ ನಿಷ್ಕ್ರಿಯಗೊಳಿಸಿದೆ.

karwar
ಸಜೀವ ನಾಡಬಾಂಬ್ ಪತ್ತೆ
author img

By

Published : Aug 6, 2023, 1:31 PM IST

Updated : Aug 6, 2023, 5:26 PM IST

ಕಾರವಾರದಲ್ಲಿ ನಾಡಬಾಂಬ್ ಇಟ್ಟು ಹಂದಿ ಹತ್ಯೆ ಪ್ರಕರಣ; ಸಜೀವ ಬಾಂಬ್ ನಿಷ್ಕ್ರಿಯಗೊಳಿಸಿದ ಬಿಡಿಡಿಎಸ್ ತಂಡ

ಕಾರವಾರ (ಉತ್ತರಕನ್ನಡ): ನಾಡಿನ ಜನರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದ ಹಂದಿಯೊಂದನ್ನು ನಾಡಬಾಂಬ್ ಇಟ್ಟು ಹತ್ಯೆಗೈದಿರುವ ಘಟನೆ ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದಲ್ಲಿ ನಡೆದಿತ್ತು. ಇದೀಗ ಅದೇ ಪ್ರದೇಶದಲ್ಲಿ ಪೊಲೀಸರು ಸಜೀವ ಬಾಂಬ್​ ಪತ್ತೆ ಮಾಡಿದ್ದು, ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಬಾಂಬ್​ ಅನ್ನು ನಿಷ್ಕ್ರಿಯಗೊಳಿಸಿದೆ.

ತಾಲೂಕಿನ ಚೆಂಡಿಯಾದ ಸ್ಮಶಾನದ ಬಳಿ ಆಗಸ್ಟ್​ 4 ರಂದು ನಾಡಬಾಂಬ್ ಸ್ಫೋಟವಾಗಿ ಹಂದಿಯೊಂದು ಸಾವನ್ನಪ್ಪಿತ್ತು. ಈ ಹಂದಿ ಗ್ರಾಮಸ್ಥರೊಂದಿಗೆ ಉತ್ತಮ ಒಡನಾಟ ಹೊಂದಿತ್ತು. ಅದರ ಸಾವಿನಿಂದ ಇಲ್ಲಿನ ಜನರು ತೀವ್ರ ದುಃಖಿತರಾಗಿದ್ದರು. ಅಲ್ಲದೆ, ತಕ್ಷಣ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಈ ಕುರಿತು ಮಾಹಿತಿ ನೀಡಿದ್ದರು.

ಇದರ ಬೆನ್ನಲ್ಲೇ ನಾಡಬಾಂಬ್​ ಸ್ಫೋಟವಾದ ಪ್ರದೇಶದಲ್ಲಿಯೇ ಮತ್ತೊಂದು ನಾಡಬಾಂಬ್​ ಇಂದು ಪತ್ತೆಯಾಗಿದೆ. ಇದೀಗ ಮಂಗಳೂರಿನಿಂದ ಆಗಮಿಸಿದ ಬಾಂಬ್​ ಪತ್ತೆ ಹಾಗೂ ನಿಷ್ಕ್ರಿಯ ದಳದ (ಬಿಡಿಡಿಎಸ್) 6 ಮಂದಿಯ ತಂಡ ಬಾಂಬ್​ ತೆರವುಗೊಳಿಸುವುದರ ಜೊತೆಗೆ ಖಾಲಿ ಜಾಗದಲ್ಲಿ ಆ ಬಾಂಬ್​ ಅನ್ನು ಸ್ಫೋಟಿಸಿ ನಿಷ್ಕ್ರೀಯಗೊಳಿಸಲಾಗಿದೆ.​

ಹಂದಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೀಫ್ರನ್ ಥಾಮಸ್ ಫರ್ನಾಂಡಿಸ್ ಎಂಬ ವ್ಯಕ್ತಿಯನ್ನು ಈಗಾಗಲೇ ಬಂಧಿಸಿದ್ದಾರೆ. ಇನ್ನು ಕೆಲವರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆಯಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇಂದು ಪತ್ತೆಯಾಗಿರುವ ಸಜೀವ ಬಾಂಬ್​ ಕೂಡ ಹಂದಿಯ ಬೇಟೆಗಾಗಿಯೇ ಇಟ್ಟಿದ್ದರು ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೋರ್ಟ್​​ನಲ್ಲಿ ಬಾಂಬ್​​ ಸ್ಫೋಟ... ಅನೇಕ ವಕೀಲರಿಗೆ ಗಾಯ, ಮೂರು ಸಜೀವ ಬಾಂಬ್​ ಪತ್ತೆ!

ಹಂದಿಯನ್ನು ಪಂಜುರ್ಲಿಯಂತೆ ಪೂಜಿಸುತ್ತಿದ್ದ ಗ್ರಾಮಸ್ಥರು: ಚೆಂಡಿಯಾ ಗ್ರಾಮಸ್ಥರು ಮಾಹಿತಿ ನೀಡಿರುವ ಪ್ರಕಾರ, ಕಳೆದ ಒಂದು ವರ್ಷದಿಂದ ಕಾಡು ಹಂದಿಗಳ ಗುಂಪು ಜನ ವಸತಿ ಪ್ರದೇಶಗಳಿಗೆ ಬರುವುದನ್ನು ಇಲ್ಲಿನ ಜನರು ಗಮನಿಸಿದ್ದರು. ಬಳಿಕ ಅದರಲ್ಲಿ ಒಂದು ಹಂದಿ ಜನರ ಸಂಪರ್ಕದಲ್ಲಿಯೇ ಇರುವುದರಿಂದ ಹಂದಿಗೆ ಹಣ್ಣು, ತರಕಾರಿ ಸೇರಿದಂತೆ ಆಹಾರ ನೀಡುತ್ತಿದ್ದರು. ಕಾಡು ಹಂದಿಯೂ ಜನರಿಗೆ ತೊಂದರೆ ಕೊಡದೇ ರಾತ್ರಿ ವೇಳೆ ಬಂದು ಆಹಾರ ತಿಂದು ಹೋಗುತ್ತಿತ್ತು. ಒಮ್ಮೊಮ್ಮೆ ಹಗಲಿನ ವೇಳೆಯಲ್ಲಿಯೂ ಬರುತ್ತಿತ್ತು. ಅದರಿಂದ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲವಂತೆ.

ಅಲ್ಲದೇ, ಇಡೀ ಊರಿನ ಜನರು ಈ ಹಂದಿಯನ್ನು ಪಂಜುರ್ಲಿ ದೈವದಂತೆ ಪೂಜಿಸುತ್ತಿದ್ದರು. ಆದರೆ ಈ ಹಂದಿಯನ್ನು ನಾಡಬಾಂಬ್​ ಇಟ್ಟು ಹತ್ಯೆ ಮಾಡಿದ್ದು, ಊರಿನ ಜನರು ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಮನೆಯ ಮಗನಂತಿದ್ದ ಹಂದಿಯನ್ನು ಹತ್ಯೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ಬಿಡಬಾರದು. ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನಾಗರಹೊಳೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಜಿಂಕೆ ಬೇಟೆ: ಮಾಂಸ ಜೋಳದ ಹೊಲದಲ್ಲಿ ಪತ್ತೆ.. ಇಬ್ಬರ ಬಂಧನ

Last Updated : Aug 6, 2023, 5:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.