ETV Bharat / state

ಗಂಗಾವಳಿ ನದಿ ಮಧ್ಯೆ ಸಿಲುಕಿಕೊಂಡ ದೋಣಿ: ತಪ್ಪಿದ ಭಾರಿ ಅನಾಹುತ

ಗಂಗಾವಳಿ ನದಿ ಮಧ್ಯೆ ಸಿಲುಕಿದ ದೋಣಿಯನ್ನು ಬೇರೊಂದು ದೋಣಿ ಸಹಾಯದಿಂದ ಹಗ್ಗ ಕಟ್ಟಿ ಎಳೆದು ದಡಕ್ಕೆ ಸೇರಿಸಿರುವ ಘಟನೆ ನಡೆದಿದೆ.

kn_kwr_0
ನದಿ ಮಧ್ಯೆ ಸಿಲುಕಿದ ಬೋಟ್​
author img

By

Published : Oct 14, 2022, 8:55 PM IST

Updated : Oct 14, 2022, 9:02 PM IST

ಕಾರವಾರ(ಉತ್ತರ ಕನ್ನಡ): ಸೇತುವೆ ನಿರ್ಮಾಣಕ್ಕೆ ಹಾಕಲಾಗಿದ್ದ ಮಣ್ಣನ್ನು ಸಂಪೂರ್ಣವಾಗಿ ತೆರವುಗೊಳಿಸದೆ ಹಾಗೆ ಬಿಟ್ಟ ಕಾರಣ ಜನರು ಸಂಚರಿಸುತ್ತಿದ್ದ ಯಾಂತ್ರೀಕೃತ ದೋಣಿ ಮಣ್ಣಿಗೆ ಸಿಲುಕಿ, ನದಿ ಮಧ್ಯೆ ನಿಂತು ಕೆಲಕಾಲ ಆತಂಕ ಸೃಷ್ಟಿದ ಘಟನೆ ಅಂಕೋಲಾ ತಾಲೂಕಿನ ಮಂಜಗುಣಿ ಬಳಿ ಗಂಗಾವಳಿ ನದಿಯಲ್ಲಿ ನಡೆದಿದೆ.

ಗಂಗಾವಳಿ ನದಿ ದಾಟುವಾಗ ನದಿಗೆ ಹಾಕಲಾಗಿದ್ದ ಮಣ್ಣಿನಲ್ಲಿ ದೋಣಿ ಸಿಲುಕಿಕೊಂಡಿದ್ದು, ದೋಣಿ ಹತ್ತಿದ್ದ 20 ಜನರು ಕೆಲಕಾಲ ಆತಂಕಕ್ಕೊಳಗಾಗಿದ್ದರು. ತುಂಬಿ ಹರಿಯುತ್ತಿದ್ದ ನದಿಯಲ್ಲಿ ದೋಣಿ ಹಿಂದೆಯೂ ಚಲಿಸದೆ ಮುಂದೆಯೂ ಹೋಗದೆ ನಿಂತಿದ್ದಾಗ ಇದನ್ನು ಕಂಡ ಸ್ಥಳೀಯರು ಮತ್ತೊಂದು ದೋಣಿಯ ಸಹಾಯದಿಂದ ಹಗ್ಗ ಕಟ್ಟಿ ಎಳೆದು ದಡಕ್ಕೆ ತಂದು 20 ಜನರ ರಕ್ಷಣೆ ಮಾಡಿದ್ದಾರೆ. ಸೇತುವೆ ಫಿಲ್ಲರ್ ಮಾಡುವಾಗ ಮಣ್ಣನ್ನು ಹಾಗೇ ಬಿಟ್ಟಿದ್ದರಿಂದ ಹೀಗಾಗಿದೆ. ಕೂಡಲೇ ನದಿಗೆ ಹಾಕಲಾದ ಸಾವಿರಾರು ಲೋಡ್ ಮಣ್ಣನ್ನು ತೆರವುಗೊಳಿಸಬೇಕು. ಜೊತೆಗೆ ಸೇತುವೆ ಕಾಮಗಾರಿಯು ಆದಷ್ಟು ಬೇಗ ಮುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನದಿ ಮಧ್ಯೆ ಸಿಲುಕಿದ ಬೋಟ್​

2018ರಲ್ಲಿ ಅಂದಿನ ಶಾಸಕರಾಗಿದ್ದ ಸತೀಶ್​​ ಸೈಲ್ ಅವರು 30 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ರೂಪಾಲಿ ನಾಯ್ಕ್​​ ಶಾಸಕರಾದ ಬಳೀಕ ಕಾಮಗಾರಿ ಆರಂಭಗೊಂಡಿತ್ತು. ಈ ಕಾಮಗಾರಿಗಾಗಿ ಗಂಗಾವಳಿ ನದಿಗೆ ಮಣ್ಣು ಹಾಕಿ ಪಿಲ್ಲರ್ ಮಾಡಲಾಗಿತ್ತು. ಆದರೆ ಪಿಲ್ಲರ್ ಕಾಮಗಾರಿ ಮುಗಿದರೂ ಕೂಡ ಮಣ್ಣು ತೆಗೆದಿಲ್ಲ. ಇದರಿಂದ ಗಂಗಾವಳಿ ನದಿಗೆ ಸತತ ಮೂರು ವರ್ಷ ನೆರೆ ಉಂಟಾಗಿ ಸಾಕಷ್ಟು ಆಸ್ತಿಪಾಸ್ತಿಗಳು ಹಾನಿಗೊಳಗಾಗಿದೆ. ಜೊತೆಗೆ ಶಿರೂರಿನಲ್ಲಿ ದೋಣಿ ಮಗುಚಿ ಇಬ್ಬರು ಸಾವನ್ನಪ್ಪಿದ್ದರು.

ಇದನ್ನೂ ಓದಿ: ನೈಜೀರಿಯಾದಲ್ಲಿ ದೋಣಿ ಮುಳುಗಿ 76 ಮಂದಿ ದಾರುಣ ಸಾವು

Last Updated : Oct 14, 2022, 9:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.