ETV Bharat / state

ಹೊನ್ನಾವರ ಬಳಿ ಸಮುದ್ರದಲ್ಲಿ ಬೋಟ್ ಮುಳುಗಡೆ: 15 ಮಂದಿ ಮೀನುಗಾರರ ರಕ್ಷಣೆ - Boat drowning in Honnavar

ತಾಂತ್ರಿಕ ದೋಷದಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿದ್ದು, 15ಕ್ಕೂ ಹೆಚ್ಚು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

15 fishermen rescue
ಹೊನ್ನಾವರದಲ್ಲಿ ಬೋಟ್ ಮುಳುಗಡೆ: 15 ಮಂದಿ ಮೀನುಗಾರರ ರಕ್ಷಣೆ
author img

By

Published : Sep 10, 2020, 9:27 AM IST

Updated : Sep 10, 2020, 10:13 AM IST

ಕಾರವಾರ: ತಾಂತ್ರಿಕ ದೋಷದಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿ 15ಕ್ಕೂ ಹೆಚ್ಚು ಮೀನುಗಾರರನ್ನು ರಕ್ಷಣೆ ಮಾಡಿರುವ ಘಟನೆ ಹೊನ್ನಾವರದ ಅಳಿವೆ ಬಳಿ ಅರಬ್ಬಿ ಸಮುದ್ರದಲ್ಲಿ ನಡೆದಿದೆ.

ಹೊನ್ನಾವರ ಬಳಿ ಸಮುದ್ರದಲ್ಲಿ ಬೋಟ್ ಮುಳುಗಡೆ: 15 ಮಂದಿ ಮೀನುಗಾರರ ರಕ್ಷಣೆ

ಫೆಲಿಕ್ಸ್ ಲೂಫಿಸ್ಸೇಂಟ್ ಎಂಬುವವರ ಮಾಲೀಕತ್ವದ ಸೆಂಟ್ ಅಂತೋನಿ ಎಂಬ ಬೋಟ್ ಮೀನುಗಾರಿಕೆಗೆ ತೆರಳಿದ್ದಾಗ ಬೋಟ್​​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅಲೆಗಳ ರಭಸಕ್ಕೆ ಮುಳುಗಡೆಯಾಗಿದೆ ಎನ್ನಲಾಗಿದೆ. ತಕ್ಷಣ ಬೋಟ್​​ನಲ್ಲಿದ್ದ ಸುಮಾರು 15 ಮೀನುಗಾರರನ್ನು ಇತರೆ ಬೋಟ್​ಗಳ ಮೀನುಗಾರರು ರಕ್ಷಣೆ ಮಾಡಿದ್ದಾರೆ.

ಬೋಟ್​ನಲ್ಲಿ ಬಲೆ ಸೇರಿದಂತೆ ಇನ್ನಿತರ ಪರಿಕರಗಳು ಸಮುದ್ರಪಾಲಾಗಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ.

Last Updated : Sep 10, 2020, 10:13 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.