ETV Bharat / state

ಡಿ.5ರ ನಂತರ ಬಿಎಸ್​ವೈ ಸಿಎಂ ಆಗಿರಲ್ಲ.. ಬಿ.ಕೆ.ಹರಿಪ್ರಸಾದ್ ಭವಿಷ್ಯ - ಯಡಿಯೂರಪ್ಪ ಬಗ್ಗೆ ಬಿ‌.ಕೆ.ಹರಿಪ್ರಸಾದ್ ಹೇಳಿಕೆ

ಕರ್ನಾಟಕದಲ್ಲಿ ಉಪ ಚುನಾವಣೆ ನಂತರ ಸರ್ಕಾರ ಇರುವುದಿಲ್ಲ ಎಂದು ರಾಜ್ಯಸಭಾ ಸದಸ್ಯ, ಬಿ‌.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಯಡಿಯೂರಪ್ಪ ಬಗ್ಗೆ ಬಿ‌.ಕೆ.ಹರಿಪ್ರಸಾದ್ ಹೇಳಿಕೆ,bk hariprasad latest news
ಬಿ‌.ಕೆ.ಹರಿಪ್ರಸಾದ್
author img

By

Published : Dec 1, 2019, 7:31 PM IST

ಶಿರಸಿ: ಬಿ.ಎಸ್.ಯಡಿಯೂರಪ್ಪ ಡಿ.5ರವರೆಗೆ ಮಾತ್ರ ಮುಖ್ಯಮಂತ್ರಿ ಆಗಿರುತ್ತಾರೆ. ಅಲ್ಲಿಯವರೆಗೆ ಏನೇನು ಕ‌ನಸಿದೆಯೋ ಅದನ್ನು ನನಸು ಮಾಡಿಕೊಂಡರೆ ಬಹಳ ಒಳ್ಳೆಯದು ಎಂದು ರಾಜ್ಯಸಭಾ ಸದಸ್ಯ, ಬಿ‌.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಬಿ‌.ಕೆ.ಹರಿಪ್ರಸಾದ್, ರಾಜ್ಯಸಭಾ ಸದಸ್ಯ

ಯಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ತಮ್ಮ ಬಳಿ ಸಂಖ್ಯಾಬಲವಿದೆ ಎಂದು ಹೇಳಿ ಕಳೆದ ಬಾರಿ ಬಿದ್ದರು. ಮಹಾರಾಷ್ಟ್ರದಲ್ಲಿ ಫಡ್ನವೀಸ್​ಗೂ ಅದೇ ಆಯಿತು. ಕರ್ನಾಟಕದಲ್ಲಿಯೂ ಉಪ ಚುನಾವಣೆ ನಂತರ ಸರ್ಕಾರ ಇರುವುದಿಲ್ಲ ಎಂದರು.

ಮತ್ತೆ ಮೈತ್ರಿ ಕುರಿತು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಶರದ್ ಪವಾರ್​ರಂತೆ ದೇವೇಗೌಡರು ಹಿರಿಯರು. ಬಿಜೆಪಿಯಂತಹ ಶಕ್ತಿ ಬದಿಗಿಡಲು ಅವರು ಮುತುವರ್ಜಿ ವಹಿಸಿದರೆ ಉತ್ತಮ. ಸಿದ್ದರಾಮಯ್ಯರನ್ನ ಸೈಡ್​ಲೈನ್​ ಮಾಡಲಾಗುತ್ತಿದೆ ಎಂಬ ವಿಷಯ ಕುರಿತು ಪತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಸಮಾನವಾಗಿ ಕಾಣುವ ಪಕ್ಷ. ಸೈಡ್​ಲೈನ್​ ಮಾಡುವುದು, ತಲೆ ಮೇಲೆ ಕೂಡಿಸುವುದು ಮಾಡಲ್ಲ ಎಂದಿದ್ದಾರೆ.

ಇನ್ನು ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂಬ ಬಿಎಸ್​ವೈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಮಾನ ಮರ್ಯಾದೆ ಇದ್ದಿದ್ದರೆ ಮಾನನಷ್ಟ ಮೊಕದ್ದೆಮೆ ಹಾಕುತ್ತಿದ್ದರು. ಆದರೆ, ಅದಿಲ್ಲದವರ ಜೊತೆ ಏನು ಮಾತನಾಡುವುದು? ಈ ಹಿಂದೆ 14 ಜನ ಕಾಂಗ್ರೆಸ್ ಶಾಸಕರನ್ನು ಪ್ರಾಣಿಗಳಂತೆ ಖರೀದಿಸಿದಾಗ ಮಾನ ಮರ್ಯಾದೆ ಇರಲಿಲ್ಲವೆ? ಮಾನ ಮರ್ಯಾದೆ ಇರುವುವವರು ಯಾರೂ ಮನುಷ್ಯರನ್ನು ಖರೀದಿ ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.

Intro:ಶಿರಸಿ :
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರು ಡಿ.೫ ವ ರವರೆಗೆ ಮಾತ್ರ ಮುಖ್ಯಮಂತ್ರಿ ಆಗಿರುತ್ತಾರೆ. ಆದ ಕಾರಣ ಅಲ್ಲಿಯವರೆಗೆ ಏನೇನು ಕ‌ನಸಿದೆಯೋ ಅದನ್ನು ನನಸು ಮಾಡಿಕೊಂಡರೆ ಬಹಳ ಒಳ್ಳೆಯದು ಎಂದು ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಬಿ‌.ಕೆ.ಹರಿಪ್ರಸಾದ ವ್ಯಂಗ್ಯವಾಡಿದರು.

ಯಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನವರು ತಮ್ಮ ನಳಿ ಸಂಖ್ಯಾ ಬಲವಿದೆ ಎಂದು ಹೇಳಿ ಕಳೆದ ಬಾರಿ ಬಿದ್ದರು. ಮಹಾರಾಷ್ಟ್ರದಲ್ಲಿ ಫಡ್ನವೀಸ್ ಗೂ ಸಹ ಅದೇ ಆಯಿತು. ಕರ್ನಾಟಕದಲ್ಲಿಯೂ ಉಪ ಚುನಾವಣೆ ನಂತರ ಸರ್ಕಾ ಇರುವುದಿಲ್ಲ ಎಂದರು. ‌

ಮತ್ತೆ ಮೈತ್ರಿ ಕುರಿತು ಕಾಂಗ್ರೆಸ್ ಹೈಕಮಾಂಡ್ ತಿರ್ಮಾನ ಕೈಗೊಳ್ಳುತ್ತದೆ. ಶರದ್ ಪವಾರ್ ರಂತೆ ದೇವಗೌಡರು ಹಿರಿಯರು. ಬಿಜೆಪಿಯಂತಹ ಶಕ್ತಿ ಬದಿಗಿಡಲು ಅವರು ಮುತವರ್ಜಿ ವಹಿಸಿದರೆ ಉತ್ತಮ ಎಂದ ಅವರು, ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಸಮಾನವಾಗಿ ಕಾಣುವ ಪಕ್ಷ. ಯಾರನ್ನೂ ಸೈಡಲ್ಲಿ ಇಡುವುದು, ತಲೆ ಮೇಲೆ ಕೂಡಿಸುವುದು ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Body:ಬಿಜೆಪಿಗೆ ಮಾನ ಮರ್ಯಾದಿ ಇದ್ರೆ ಮಾನನಷ್ಟ ಮೊಕದ್ದೆಮೆ ಹಾಕುತ್ತಿದ್ದರು. ಆದರೆ ಅದಿಲ್ಲದವರ ಜೊತೆ ಏನು ಮಾತನಾಡುವುದು ? ಈ ಹಿಂದೆ ೧೪ ಜನ ಕಾಂಗ್ರೆಸ್ ಎಮ್.ಎಲ್.ಎ. ಗಳನ್ನು ಪ್ರಾಣಿಗಳಂತೆ ಖರೀದಿಸಿದಾಗ ಮಾನ ಮರ್ಯಾದಿ ಇರಲಿಲ್ಲವೇ ? ಮಾನ ಮರ್ಯಾದಿ ಇರುವುವವರು ಯಾರೂ ಮನುಷ್ಯರನ್ನು ಖರೀದಿ ಮಾಡುವುದಿಲ್ಲ ಎಂದರು.
..............
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.