ETV Bharat / state

ಬಿಜೆಪಿಗರಿಗೂ ಅನಂತಕುಮಾರ್​​​ ಹೆಗಡೆ ಬೇಕಾಗಿಲ್ಲ: ಆನಂದ್​​ ಅಸ್ನೋಟಿಕರ್​​​

ಅನಂತಕುಮಾರ್ ಹೆಗಡೆ ಬಿಜೆಪಿಯ ಯಾವ ನಾಯಕರಿಗೂ ಬೇಕಾಗಿಲ್ಲ. ಎಲ್ಲರೂ ಕೈಬಿಟ್ಟಿದ್ದರಿಂದ ಒಬ್ಬಂಟಿಗರಾಗಿ ತಿರುಗಾಟ ನಡೆಸುತ್ತಿದ್ದಾರೆ ಎಂದು ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ್ ಅಸ್ನೋಟಿಕರ್
author img

By

Published : Mar 30, 2019, 4:39 PM IST

ಕಾರವಾರ: ಐದು ಬಾರಿ ಸಂಸದರಾದರೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸ್ಪಂದಿಸದ ಅನಂತಕುಮಾರ್ ಹೆಗಡೆಗೆ ಈ ಬಾರಿ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಹೇಳಿದರು.

ಏ. 4ರಂದು ನಡೆಯಲಿರುವ ಸಮಾವೇಶದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗಿಯಾಗುವ ಹಿನ್ನೆಲೆ ಇಂದು ಸಲ್ಲಿಸಬೇಕಾಗಿದ್ದ ನಾಮಪತ್ರ ದಿನಾಂಕವನ್ನು ಮುಂದೂಡಿ ಪುರೋಹಿತರ ಸಲಹೆಯಂತೆ ನಾಮಪತ್ರಕ್ಕೆ ಸಹಿ ಹಾಕಿ ಮನೆಯಲ್ಲಿಯೇ ಇರಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಅನಂತಕುಮಾರ್ ಹೆಗಡೆ ಯಾರಿಗೂ ಹೊಲಿಕೆ ಮಾಡಲಾಗದ ಸಂಸದ. 22 ವರ್ಷಗಳ ಕಾಲ ಸಂಸದರಾದರೂ ಒಂದು ಬಾರಿಯೂ ಕೆಡಿಪಿ‌ ಸಭೆಗೆ ಹಾಜರಾಗಿಲ್ಲ. ಕೈಗಾ ಸೀಬರ್ಡ್​ನಂತಹ ಬೃಹತ್ ಯೋಜನೆಗಳಿದ್ದರೂ ಜನರಿಗೆ ಉಪಯೋಗವಾಗುವಂತೆ ಯಾವುದೇ ಕೆಲಸ ಮಾಡಿಲ್ಲ. ಇಂಥವರಿಗೆ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ ಎಂದು ಹೇಳಿದರು.

ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ್ ಅಸ್ನೋಟಿಕರ್

ಐದು ಬಾರಿ ಸಂಸದರಾಗಿರುವ ಅನಂತಕುಮಾರ್ ಹೆಗಡೆ ಮೊದಲ ಬಾರಿ ಮಾತ್ರ ತಮ್ಮ ಶಕ್ತಿಯ ಮೇಲೆ ಗೆದ್ದಿದ್ದಾರೆ. ಉಳಿದೆಲ್ಲ ಗೆಲುವುಗಳು ಬೇರೆಯವರ ಅಲೆಯಲ್ಲಿಯೇ. ಏನು ಕೆಲಸ ಮಾಡದ ಅನಂತಕುಮಾರ್ ಎಲ್ಲಿಯೇ ಹೊದರು ಜನರು ಅವರನ್ನು ಪ್ರಶ್ನಿಸುತ್ತಿದ್ದಾರೆ ಎಂದರು.

ಅನಂತಕುಮಾರ್ ಹೆಗಡೆ ಬಿಜೆಪಿಯ ಯಾವ ನಾಯಕರಿಗೂ ಬೇಕಾಗಿಲ್ಲ. ಎಲ್ಲರೂ ಕೈಬಿಟ್ಟಿದ್ದರಿಂದ ಒಬ್ಬಂಟಿಗರಾಗಿ ತಿರುಗಾಟ ನಡೆಸುತ್ತಿದ್ದಾರೆ. ಅಲ್ಲದೆ ಜಿಲ್ಲೆಯ ಬಿಜೆಪಿ ನಾಯಕರು ಕೂಡ ಅನಂತಕುಮಾರ್ ವಿರುದ್ಧ ಸಾಕಷ್ಟು ಅಸಾಮಾಧಾನಗಳಿದ್ದು, ತಮ್ಮೊಂದಿಗೆ ಒಡನಾಟದಲ್ಲಿದ್ದಾರೆ. ಎಲ್ಲರೂ ಸೇರಿ ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

Intro:ಬಿಜೆಪಿಗರಿಗೂ ಅನಂತಕುಮಾರ್ ಬೇಕಾಗಿಲ್ಲ..! ಆನಂದ್ ಅಸ್ನೋಟಿಕರ್ ಹೇಳಿಕೆ
ಕಾರವಾರ: ಐದು ಬಾರಿ ಸಂಸದರಾದರೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸ್ಪಂಧಿಸದ ಅನಂತಕುಮಾರ್ ಹೆಗಡೆಗೆ ಈ ಬಾರಿ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ಕಾಂಗ್ರೆಸ್ ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಹೇಳಿದರು.
ಏ.೪ ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕ್ಷೇತ್ರಕ್ಕೆ ಬಂದು ಸಮಾವೇಶದಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ಇಂದು ಸಲ್ಲಿಸಬೇಕಾಗಿದ್ದ ನಾಮಪತ್ರ ದಿನಾಂಕವನ್ನು ಮುಂದೂಡಿದ ಅವರು, ಪುರೋಹಿತರ ಸಲಹೆಯಂತೆ ನಾಮಪತ್ರಕ್ಕೆ ಸಹಿ ಹಾಕಿ ಮನೆಯಲ್ಲಿಯೇ ಇರಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಅನಂತಕುಮಾರ್ ಹೆಗಡೆ ಯಾರಿಗೂ ಹೊಲಿಕೆ ಮಾಡಲಾಗದ ಸಂಸದ. ೨೨ ವರ್ಷಗಳ ಕಾಲ ಸಂಸದರಾದರೂ ಒಂದು ಬಾರಿಯೂ ಕೆಡಿಪಿ‌ ಸಭೆಗೆ ಹಾಜರಾಗಿಲ್ಲ. ಜಿಲ್ಲೆಯಲ್ಲಿ ಕೈಗಾ ಸೀಬರ್ಡ್ ನಂತಹ ಬೃಹತ್ ಯೋಜನೆಗಳಿದ್ದರೂ ಜಿಲ್ಲೆಯ ಜನರಿಗೆ ಉಪಯೋಗವಾಗುವಂತೆ ಯಾವುದೇ ಕೆಲಸ ಮಾಡಿಲ್ಲ. ಇಂಥವರಿಗೆ ಈ ಬಾರಿ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ ಎಂದು ಹೇಳಿದರು.
ಐದು ಬಾರಿ ಸಂಸದರಾಗಿರುವ ಅನಂತಕುಮಾರ್ ಮೊದಲ ಬಾರಿ ಮಾತ್ರ ತಮ್ಮ ಶಕ್ತಿಯ ಮೇಲೆ ಗೆದ್ದಿದ್ದಾರೆ. ಉಳಿದೆಲ್ಲ ಗೆಲುವುಗಳು ಬೇರೆಯವರ ಅಲೆಯಲ್ಲಿಯೇ ಗೆದ್ದಿದ್ದಾರೆ. ಆದ್ದರಿಂದ ಏನು ಕೇಲಸ ಮಾಡದ ಅನಂತ್ ಕುಮಾರ್ ಹೆಗಡೆಯವರನ್ನು ಎಲ್ಲಿಯೇ ಹೊದರು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು.
ಮುಸ್ಲಿಂರ ವಿರುದ್ಧ ಮಾತನಾಡುವ ಅನಂತ್ ಕುಮಾರ್ ಹೆಗಡೆ ಅದೇ ಮುಸ್ಲೀ ದೇಶದ ಜೊತೆಯಲ್ಲಿಯೇ ತಮ್ಮ ವ್ಯವಹಾರ ನಡೆಸುತ್ತಿದ್ದಾರೆ. ಅಲ್ಲದೇ ರಾಜಕೀಯಕ್ಕಾಗಿ ರೌಡಿ ಶೀಟ್ ನಲ್ಲಿರುವ ಪಯಾಜ್ ಎಂಬುವವನನ್ನು ದೇವಸ್ಥಾನಕ್ಕೆ ಕರೆದೊಯ್ದು ತೀರ್ಥ ಪ್ರಸಾದ ನೀಡಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಅನಂತಕುಮಾರ್ ಹೆಗಡೆ ಬಿಜೆಪಿಯ ಯಾವ ನಾಯಕರಿಗೂ ಬೇಕಾಗಿಲ್ಲ. ಅವರನ್ನು ನಾಯಕರುಗಳು ಕೈಬಿಟ್ಟಿದ್ದರಿಂದ ಇದೀಗ ಒಬ್ಬಂಟಿಗರಾಗಿ ತಿರುಗಾಟ ನಡೆಸುತ್ತಿದ್ದಾರೆ. ಅಲ್ಲದೆ ಜಿಲ್ಲೆಯ ಬಿಜೆಪಿ ನಾಯಕರುಗಳಿಗೂ ಕೂಡ ಅನಂತಕುಮಾರ್ ವಿರುದ್ಧ ಸಾಕಷ್ಟು ಅಸಾಮಾಧಾನಗಳಿದ್ದು, ತಮ್ಮೊಂದಿಗೆ ಒಡನಾಟದಲ್ಲಿದ್ದಾರೆ. ಎಲ್ಲರೂ ಸೇರಿ ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಉತ್ತರಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲವೂ ಬಗೆಹರಿದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ನೇತೃತ್ವದಲ್ಲಿಯೇ ಚುನಾವಣೆ ನಡೆಯುತ್ತದೆ. ಅಲ್ಲದೆ ಬಿಜೆಪಿಯ ಬೆಂಬಲ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿರುವುದರಿಂದ ಸುಮಾರು ೩ ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ಹೇಳಿದರು.

Body:ಕ

Conclusion:ಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.