ಕಾರವಾರ : ಮಹಾರಾಷ್ಟ್ರ ರಾಜಕಾರಣದ ಬಿಕ್ಕಟ್ಟಿಗೆ ಬಿಜೆಪಿ ಕಾರಣವಲ್ಲ. ಶಿವಸೇನೆ ಅಧಿಕಾರಕ್ಕೋಸ್ಕರ ಠಾಕ್ರೆ ಪುತ್ರ ಯಾವ ರೀತಿ ಅನಾಹುತ ಮಾಡಿದ್ದಾರೆಂಬುದು ಇದೀಗ ಜಗತ್ತಿಗೆ ಗೊತ್ತಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕಾರವಾರದಲ್ಲಿ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಶಿವಸೇನೆ ಯಾವ ಮಾನದಂಡವನ್ನು ಇಟ್ಕೊಂಡು ಮೈತ್ರಿ ಮಾಡಿಕೊಂಡರೋ ಗೊತ್ತಿಲ್ಲ. ಆದರೆ ಇದೀಗ ತಮಗೆ ಬಿಜೆಪಿ ಒಂದೇ ಸಮನ್ವಯ ಹೊಂದುವ ಪಕ್ಷ ಎಂದು ಶಿಂದೆ ಹೇಳಿದ್ದಾರೆ. ಮೈತ್ರಿ ಗೊಂದಲದಿಂದ ಈ ರೀತಿ ಮಹಾರಾಷ್ಟ್ರದಲ್ಲಿ ಬೆಳವಣಿಗೆಗಳಾಗಿವೆ. ಬಿಜೆಪಿ ಜೊತೆ ಕೈ ಜೋಡಿಸಿದರೆ ಸೂಕ್ತ ಎಂದು ಬಂಡಾಯ ಶಾಸಕರು ನಿರ್ಧಾರ ತೆಗೆದುಕೊಂಡಿದ್ದಾರೆ. ಆರೋಗ್ಯಕರ ವಾತಾವರಣಕ್ಕೆ ನಮ್ಮವರು ಕೂಡ ಬೆಂಬಲ ನೀಡುತ್ತಿದ್ದಾರೆ ಎಂದರು.
ಮಾಜಿ ಡಿಸಿಎಂ ಪರಮೇಶ್ವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯುವ ಪ್ರಯತ್ನವನ್ನು ಬಿಜೆಪಿ ಮಾಡಿಲ್ಲ. ಸಿಂದೆಯವರು ಆಡಳಿತಾತ್ಮಕ, ಭಾವನಾತ್ಮಕ ಮತ್ತು ವೈಚಾರಿಕ ವಿಚಾರಕ್ಕೆ ಶಕ್ತಿ ಬರುತ್ತೆ ಎಂಬ ಕಾರಣಕ್ಕೆ ಬಂಡಾಯ ಎದ್ದು ಬಂದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಪುಸ್ತಕ ಹರಿದು ಹಾಕುವ ಸಂಸ್ಕೃತಿಯನ್ನು ಡಿ.ಕೆ. ಶಿವಕುಮಾರ್ ಹುಟ್ಟುಹಾಕಿದ್ದಾರೆ : ಸಚಿವ ನಾಗೇಶ್