ETV Bharat / state

ಬೈಕ್​ಗೆ ನಾಯಿ ಅಡ್ಡ ಬಂದು ಅಪಘಾತ: ಸವಾರ ಸಾವು, ಇನ್ನೋರ್ವ ಗಂಭೀರ - ಬೈಕ್​ ಅಪಘಾತ

ವೇಗವಾಗಿ ಚಲಿಸುತ್ತಿದ್ದ ಬೈಕ್​ಗೆ ನಾಯಿ ಅಡ್ಡ ಬಂದ ಪರಿಣಾಮ‌ ಬೈಕ್​ ಪಲ್ಟಿಯಾಗಿ ಸವಾರ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಕುಮಟಾ ತಾಲೂಕಿನ ಬಾಡದ ಸಿಂಡಿಕೇಟ್ ಬ್ಯಾಂಕ್ ಬಳಿ ನಡೆದಿದೆ.

ಬೈಕ್​ಗೆ ಅಪಘಾತ ಸವಾರ ಸಾವು
author img

By

Published : May 28, 2019, 4:44 AM IST

ಕಾರವಾರ: ವೇಗವಾಗಿ ಚಲಿಸುತ್ತಿದ್ದ ಬೈಕ್​ಗೆ ನಾಯಿ ಅಡ್ಡ ಬಂದ ಪರಿಣಾಮ‌ ಬೈಕ್​ ಪಲ್ಟಿಯಾಗಿ ಸವಾರ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಕುಮಟಾ ತಾಲೂಕಿನ ಬಾಡದ ಸಿಂಡಿಕೇಟ್ ಬ್ಯಾಂಕ್ ಬಳಿ ನಡೆದಿದೆ.

ಮೃತನನ್ನು ಕುಮಟಾದ ಹೊಲನಗದ್ದೆ ನಿವಾಸಿ ಅರವಿಂದ ರಮಾತಾಂತ ಹರಿಕಂತ್ರ (26) ಎಂದು ಗುರುತಿಸಲಾಗಿದೆ. ಹಿಂಬದಿ ಸವಾರ ಸಿದ್ದಾಪುರದ ಮಂಜುನಾಥ ಎಂದು ಗುರುತಿಸಲಾಗಿದ್ದು, ಮಂಜುನಾಥ ಗಂಭೀರ ಗಾಯಗೊಂಡಿದ್ದಾನೆ.

ಬೈಕ್ ಅಪಘಾತದಲ್ಲಿ ಸವಾರ ಸಾವು
ಕುಮಟಾ ಪಟ್ಟಣದಿಂದ ಅಘನಾಶಿನಿಗೆ ತೆರಳುವಾಗ ಘಟನೆ ನಡೆದಿದೆ. ತಕ್ಷಣ ಸ್ಥಳೀಯರು ಎತ್ತಿ ಉಪಚರಿಸಿ 108ಕ್ಕೆ ಕರೆ ಮಾಡಿದ್ದಾರೆ. ಆದರೆ ಆಂಬುಲೆನ್ಸ್ ಬರುವರೆಗೆ ಇಬ್ಬರ ಸ್ಥಿತಿ ಗಂಭೀರ ಮಟ್ಟಕ್ಕೆ ತಲುಪಿದ್ದು, ಕುಮಟಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ ಆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಾಧ್ಯವಾಗದ ಪರಿಣಾಮ ಮಣಿಪಾಲಕ್ಕೆ ಕರೆದುಕೊಂಡು ಹೋಗುವಾಗ ಭಟ್ಕಳದ ಬಳಿ ಸವಾರ ಸಾವನ್ನಪ್ಪಿದ್ದಾನೆ. ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:KN_KWR_03_27_Accident ONE DEATH_7202800
ಬೈಕ್ ಗೆ ಅಡ್ಡಬಂದ ನಾಯಿ...ಸವಾರ ಸಾವು, ಇನ್ನೊರ್ವ ಗಂಭೀರ
ಕಾರವಾರ: ವೇಗವಾಗಿ ಚಲಿಸುತ್ತಿದ್ದ ಬೈಕ್ ಗೆ ನಾಯಿ ಅಡ್ಡಬಂದ ಪರಿಣಾಮ‌ ಬಿದ್ದು, ಮುಂಬದಿ ಸವಾರ ಸಾವನ್ನಪ್ಪಿ, ಇನ್ನೊರ್ವ ಗಂಭೀರ ಗಾಯಗೊಂಡಿರುವ ಘಟನೆ ಕುಮಟಾ ತಾಲ್ಲೂಕಿನ ಬಾಡದ ಸಿಂಡಿಕೇಟ್ ಬ್ಯಾಂಕ್ ಬಳಿ ಇಂದು ನಡೆದಿದೆ.
ಮೃತಪಟ್ಟವನನ್ನು ಕುಮಟಾದ ಹೊಲನಗದ್ದೆ ನಿವಾಸಿ ಅರವಿಂದ ರಮಾತಾಂತ ಹರಿಕಂತ್ರ (೨೬) ಎಂದು ಗುರುತಿಸಲಾಗಿದೆ. ಹಿಂಬದಿ ಸವಾರ ಸಿದ್ದಾಪುರದ ಮಂಜುನಾಥ ಗಂಭೀರ ಗಾಯಗೊಂಡಿದ್ದಾನೆ.
ಕುಮಟಾ ಪಟ್ಟಣದಿಂದ ಅಘನಾಶಿನಿಗೆ ತೆರಳುವಾಗ ಘಟನೆ ನಡೆದಿದೆ. ತಕ್ಷಣ ಸ್ಥಳೀಯರು ಎತ್ತಿ ಉಪಚರಿಸಿ ೧೦೮ ಕ್ಕೆ ಕರೆಮಾಡಿದ್ದರು. ಆದರೆ ಅಂಬುಲೆನ್ಸ್ ಬರುವರೆಗೂ ಇಬ್ಬರು ಒದ್ದಾಡುತಿದ್ದರು. ಅಲ್ಲದೆ ಮುಂಬದಿ ಸವಾರ ಗಂಭೀರ ಗಾಯಗೊಂಡಿದ್ದರಿಂದ ರಕ್ತಸ್ರಾವವಾಗಿತ್ತು. ಕೊನೆಗೆ ಕುಮಟಾ ಆಸ್ಪತ್ರೆಗೆ ಕರೆದಿಕೊಂಡು ಹೋಗಲಾಯಿತಾದರು ಸಾಧ್ಯವಾಗದೆ ಮಣಿಪಾಲಕ್ಕೆ ಕರೆದುಕೊಂಡು ಹೋಗುವಾಗ ಭಟ್ಕಳದ ಬಳಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Body:KConclusion:K
ETV Bharat Logo

Copyright © 2025 Ushodaya Enterprises Pvt. Ltd., All Rights Reserved.