ETV Bharat / state

ಭಟ್ಕಳದ ಕೊರೊನಾ ವಾರಿಯರ್ಸ್‌ ಹಸಿವು ನೀಗಿಸಿದ ಪೊಲೀಸರು - ಭಟ್ಕಳ ಪೊಲೀಸ್​​ ಲೇಟೆಸ್ಟ್​ ನ್ಯೂಸ್

ಕೊರೊನಾ ನಿಯಂತ್ರಿಸುವಲ್ಲಿ ಪೊಲೀಸರ ಪಾತ್ರ ಕೂಡ ಮಹತ್ವದ್ದಾಗಿದೆ. ಸೋಂಕು ಹರಡದಂತೆ ಹಗಲಿರುಳೆನ್ನದೆ ಅವರು ದುಡಿಯುತ್ತಿದ್ದಾರೆ. ಆದರೆ ಭಟ್ಕಳ ಪೊಲೀಸರು, ಒಂದು ಹೆಜ್ಜೆ ಮುಂದೆ ಹೋಗಿದ್ದು, ತಾವೇ ಅಡುಗೆ ತಯಾರಿಸಿ ಕೊರೊನಾ ವಾರಿಯರ್ಸ್‌ ಹಸಿವು ನೀಗಿಸುತ್ತಿದ್ದಾರೆ.

Bhatkal police prepared and served food to Corona warriors
ಭಟ್ಕಳದ ಕೊರೊನಾ ವಾರಿಯರ್ಸ್‌ ಹಸಿವು ನೀಗಿಸಿದ ಪೊಲೀಸರು
author img

By

Published : May 23, 2020, 4:36 PM IST

Updated : May 23, 2020, 8:36 PM IST

ಭಟ್ಕಳ: ಕೋವಿಡ್‌-19 ಆರಂಭವಾದಾಗಿನಿಂದ ಪೊಲೀಸರು, ವೈದ್ಯರಷ್ಟೇ ಮುತುವರ್ಜಿ ವಹಿಸಿ ಕೆಲಸ ಮಾಡ್ತಿದ್ದಾರೆ. ಅನಾವಶ್ಯಕವಾಗಿ ಓಡಾಡುವವರಿಗೆ ಲಾಠಿ ರುಚಿ ನೀಡುವ ಮೂಲಕ ಸೋಂಕು ಹರಡುವಿಕೆಯನ್ನು ತಪ್ಪಿಸಲು ಹಗಳಿರುಳೆನ್ನದೆ ದುಡಿಯುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿದ್ದು, ತಾವೇ ಅಡುಗೆ ತಯಾರಿಸಿ ಕೊರೊನಾ ವಾರಿಯರ್ಸ್‌ ಹಸಿವು ನೀಗಿಸುತ್ತಿದ್ದಾರೆ.

ಭಟ್ಕಳದ ಕೊರೊನಾ ವಾರಿಯರ್ಸ್‌ ಹಸಿವು ನೀಗಿಸಿದ ಪೊಲೀಸರು

ಭಟ್ಕಳ ಪೊಲೀಸ್​​ ಠಾಣೆಯಲ್ಲಿ ಈ ಹಿಂದೆ ಇದ್ದ ಡಿವೈಎಸ್ಪಿ ಗೌತಮ್ ಕೆ.ಸಿ. ಅವರು ಸಿಬ್ಬಂದಿಗಾಗಿ ಅನ್ನ ದಾಸೋಹ ಕಾರ್ಯಕ್ರಮವನ್ನು ಮಾಡಿಕೊಂಡು ಬಂದಿದ್ದರು. ಇದೀಗ ಈ ಕಾರ್ಯವನ್ನು ಎಎಸ್ಪಿ ನಿಖಿಲ್ ಬಿ. ಅವರು ಮುಂದುವರೆಸಿಕೊಂಡು ಬಂದಿದ್ದಾರೆ. ಬೆಳಗ್ಗೆಯಿಂದ ರಾತ್ರಿಯ ತನಕ 6 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿ ಅಡುಗೆ ತಯಾರಿಸುತ್ತಾರೆ. ಖಾಕಿಯ ಅನ್ನದ ಸೇವೆಯನ್ನು ಆರೋಗ್ಯ ರಕ್ಷಣಾ ಸಿಬ್ಬಂದಿ ಕೊಂಡಾಡಿದ್ದಾರೆ.

Bhatkal police prepared and served food to Corona warriors
ಭಟ್ಕಳದ ಕೊರೊನಾ ವಾರಿಯರ್ಸ್‌ ಹಸಿವು ನೀಗಿಸಿದ ಪೊಲೀಸರು

ಆರೋಗ್ಯ ಇಲಾಖೆ ಸಿಬ್ಬಂದಿ, ತಹಶೀಲ್ದಾರ್, ಸಹಾಯಕ ಆಯುಕ್ತರ ಕಚೇರಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಕೆಎಸ್ಆರ್​​ಟಿಸಿ ಸಿಬ್ಬಂದಿ ಸೇರಿದಂತೆ ಎಲ್ಲಾ ಕೊರೊನಾ ವಾರಿಯರ್ಸ್‌ಗೆ ಕಳೆದೆರಡು ತಿಂಗಳಿನಿಂದ ದೊಡ್ಡ ಪ್ರಮಾಣದಲ್ಲಿ ಅನ್ನ ದಾಸೋಹ ನಡೆಯುತ್ತಿದೆ. ಅಡುಗೆ ತಯಾರಿಕೆಯಲ್ಲಿ ಎಎಸ್ಐ ರಾಮಚಂದ್ರ ಜಿ.ವೈದ್ಯ ಮುಂದಾಳತ್ವದಲ್ಲಿ ಮೂರು ಮಂದಿ ಹವಾಲ್ದಾರ್​ ಹಾಗೂ ಇಬ್ಬರು ಹೆಡ್ ಕಾನ್ಸ್‌ಟೇಬಲ್‌ಗಳ ತಂಡದ ಪರಿಶ್ರಮವಿದೆ.

ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟ ತಯಾರಿಸುವುದರ ಜೊತೆಗೆ ಎಲ್ಲರಿಗೂ ಖುದ್ದು ಅವರೇ ಬಡಿಸಿ ಹಸಿವನ್ನು ತಣಿಸುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ನಿತ್ಯ ನಿರಂತರ ಈ ಅನ್ನ ದಾಸೋಹವೂ ನಡೆಯುತ್ತಾ ಬಂದಿದ್ದು, ದಿನಕ್ಕೆ 300 ರಿಂದ 350 ಮಂದಿಯ ಹಸಿವು ನೀಗಿಸುತ್ತಿದ್ದಾರೆ.

ಅಡುಗೆ ತಯಾರಿಕೆಗೆ ಬೇಕಾದ ಎಲ್ಲಾ ಆಹಾರ ಸಾಮಗ್ರಿಗಳನ್ನು ತಾಲೂಕಾಡಳಿತ ವಿತರಣೆ ಮಾಡುತ್ತಿದೆ. ಮೊದಲು 60 ಕೆ.ಜಿ. ಅಕ್ಕಿ ಯಿಂದ 300 ರಿಂದ 400 ಜನರಿಗೆ ಊಟ ಸಿಗುತ್ತಿತ್ತು. ಈಗ ಕೆಲವು ಕಾರ್ಮಿಕರು, ಇಲಾಖೆ ಸಿಬ್ಬಂದಿ ಊರಿಗೆ ತೆರಳಿದ ಹಿನ್ನೆಲೆಯಲ್ಲಿ ಈ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಕೋವಿಡ್‌-19 ತಡೆಗೆ ಮುಂಚೂಣಿಯಲ್ಲಿರುವವರ ಹಸಿವನ್ನು ನೀಗಿಸುತ್ತಿರುವ ಭಟ್ಕಳ ಪೊಲೀಸರಿಗೊಂದು ಸಲಾಂ ಹೇಳೋಣ.

Last Updated : May 23, 2020, 8:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.