ETV Bharat / state

ಭಟ್ಕಳ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳು ಬಿಸಿಎಂ ಹಾಸ್ಟೆಲ್​ಗೆ ಶಿಪ್ಟ್​

ಈಗಾಗಲೇ ಭಟ್ಕಳದ ಬಿ.ಸಿ.ಎಮ್. ಹಾಸ್ಟೆಲ್​ನಲ್ಲಿ ಒಳರೋಗಿಗಳಿಗೆ 30 ಬೆಡ್​ಗಳನ್ನು ಸಿದ್ಧಪಡಿಸಲಾಗಿದ್ದು, ಈಗ ಸದ್ಯಕ್ಕೆ 21 ರೋಗಿಗಳನ್ನು ಸ್ಥಳಾಂತರಿಸಿ ಅವರಿಗೆ ಆಸ್ಪತ್ರೆಯಲ್ಲಿನ ಎಲ್ಲಾ ವ್ಯವಸ್ಥೆ ಉಪಚಾರವನ್ನು ಮುಂದುವರೆಸಲಾಗುವುದು ಎಂದು ಶಾಸಕ ಸುನೀಲ್ ನಾಯಕ್​ ಹೇಳಿದ್ದಾರೆ.

Bhatkal
Bhatkal
author img

By

Published : Apr 25, 2021, 8:41 PM IST

ಭಟ್ಕಳ(ಉ.ಕನ್ನಡ): ಕೋವಿಡ್ ಎರಡನೇ ಅಲೆ ಹೆಚ್ಚಾದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಭಟ್ಕಳದ ತಾಲೂಕಾಸ್ಪತ್ರೆಯಲ್ಲಿನ ಒಳರೋಗಿಗಳನ್ನು (ಕೋವಿಡ್ ರಹಿತ) ಶಾಸಕ ಸುನೀಲ ನಾಯ್ಕ ಹಾಗೂ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ನೇತೃತ್ವದಲ್ಲಿ ಇಲ್ಲಿನ ಆಸ್ಪತ್ರೆ ಎದುರಿನ ನೂತನ ಬಿಸಿಎಮ್ ಹಾಸ್ಟೆಲ್​ಗೆ ಸ್ಥಳಾಂತರಿಸಿ ಒಳರೋಗಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಮನವರಿಕೆ ಮಾಡಲಾಯಿತು.

ಈ ಬಗ್ಗೆ ಮಾಧ್ಯಮಕ್ಕೆ ಶಾಸಕ ಸುನೀಲ ನಾಯ್ಕ ಪ್ರತಿಕ್ರಿಯಿಸಿದ್ದು, ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಹಾಗೂ ಆಸ್ಪತ್ರೆ ವೈದ್ಯರನ್ನೊಳಗೊಂಡಂತೆ ನನ್ನ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ಒಳ ರೋಗಿಗಳಿಗೆ ಕೋವಿಡ್​ನಿಂದ ಯಾವುದೇ ಸಮಸ್ಯೆಯಾಗಬಾರದು ಹಾಗೂ ಕೋವಿಡ್ ಸೋಂಕಿತರಿಗೆ ಸೂಕ್ತ ಬೆಡ್, ಆಕ್ಸಿಜನ್ ಜೊತೆಗೆ ಕೋಣೆಯ ಅವಶ್ಯಕತೆ ಇದ್ದ ಹಿನ್ನೆಲೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಳೆದ ವರ್ಷದ ಕೋವಿಡ್ ವೇಳೆ ಸ್ವಲ್ಪ ಮಟ್ಟಿಗೆ ಸಮಸ್ಯೆಯಾಗಿತ್ತು. ಅದರ ಹಿನ್ನೆಲೆ ಈ ಬಾರಿ ಮುನ್ನೆಚ್ಚರಿಕೆ ಕ್ರಮ ಅನುಸರಿಸುವ ಕಾರಣ ಮೊದಲೇ (ಕೋವಿಡ್ ರಹಿತ) ಆಸ್ಪತ್ರೆಯ ಒಳರೋಗಿಗಳಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ನೂತನ ಬಿ.ಸಿ.ಎಮ್ ಹಾಸ್ಟೆಲ್​ಗೆ ಸ್ಥಳಾಂತರಿಸಲಾಗಿದೆ ಎಂದರು.

ಈಗಾಗಲೇ ಬಿ.ಸಿ.ಎಮ್. ಹಾಸ್ಟೆಲ್​ನಲ್ಲಿ ಒಳರೋಗಿಗಳಿಗೆ 30 ಬೆಡ್ ಸಿದ್ಧಪಡಿಸಲಾಗಿದ್ದು, ಈಗ ಸದ್ಯಕ್ಕೆ 21 ರೋಗಿಗಳನ್ನು ಸ್ಥಳಾಂತರಿಸಿ ಅವರಿಗೆ ಆಸ್ಪತ್ರೆಯಲ್ಲಿನ ಎಲ್ಲಾ ವ್ಯವಸ್ಥೆ ಉಪಚಾರವನ್ನು ಮುಂದುವರೆಸಲಾಗುವುದು. ಒಳರೋಗಿಗಳು ಈ ಬಗ್ಗೆ ಯಾವುದೇ ಭಯ ಗೊಂದಲಕ್ಕೆ ಒಳಪಡುವ ಅವಶ್ಯಕತೆಯಿಲ್ಲ. ಅನಿವಾರ್ಯವಿದ್ದರೆ ಇನ್ನೂ 30 ಬೆಡ್​ಗಳನ್ನು ಹಾಕುವ ವ್ಯವಸ್ಥೆ ಸಹ ಇದ್ದು, ಒಳರೋಗಿಗಳಲ್ಲಿ ಗರ್ಭಿಣಿಯರು, ವಯಸ್ಸಾದವರು, ಅಪಘಾತಕ್ಕೊಳಗಾದವರು ಇದ್ದು ಅವರೆಲ್ಲರ ಕ್ಷೇಮ ಸಹ ಮುಖ್ಯವಾಗಿದೆ ಎಂದು ಹೇಳಿದರು.

ಈ ಬಾರಿ ಕೋವಿಡ್ ಸೋಂಕಿತ ಹೆಚ್ಚಿನವರು ಆಕ್ಸಿಜನ್ ಅವಶ್ಯಕತೆ ಇದ್ದವರಾಗಿದ್ದು, ಎರಡನೇ ಅಲೆಯೂ ಉಸಿರಾಟಕ್ಕೆ ಸಮಸ್ಯೆ ನೀಡುತ್ತಿರುವುದು ಬೆಂಗಳೂರು, ಮೈಸೂರು, ತುಮಕೂರಿನಲ್ಲಿನ ಪ್ರಕರಣದಿಂದ ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಕೋವಿಡ್ ಸೋಂಕಿತರ ಆರೋಗ್ಯ ರಕ್ಷಣೆ ಅವರಿಗೆ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಒಳರೋಗಿಯ ಸ್ಥಳಾಂತರ ಅಗತ್ಯವಾಗಿದೆ. ಭಟ್ಕಳದಲ್ಲಿ ಜನರು ಕೋವಿಡ್ ಬಗ್ಗೆ ಭಯ ಪಡುವ ಅವಶ್ಯಕತೆಯಿಲ್ಲ. ಕೋವಿಡ್ ನಿಯಮ ಪಾಲಿಸಿ ಜನರು ಮಾಸ್ಕ್​ ಕಡ್ಡಾಯ ಹಾಕಿ, ಯಾವುದೇ ಭಯಪಡುವ ಅವಶ್ಯಕತೆ ಇಲ್ಲ. ಏನಾದರು ಕೋವಿಡ್ ಹಿನ್ನೆಲೆ ತುರ್ತು ಸಂದರ್ಭ, ಅಗತ್ಯ ವೇಳೆಯಲ್ಲಿ ಸಮಸ್ಯೆ ಉಂಟಾದಲ್ಲಿ ಪರಿಹಾರಕ್ಕೆ, ಸಹಾಯಕ್ಕೆ ನನ್ನ ಮೂರು ಆಪ್ತ ಕಾರ್ಯದರ್ಶಿಗಳು ಸಹಿತ ನನ್ನ‌ ದೂರವಾಣಿ ನಂಬರ್​ ಸಹ ಪ್ರಕಟಣೆ ಮೂಲಕ‌ ತಿಳಿಸಲಾಗಿದ್ದು, ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು.

ನಂತರ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್​ ಮಾತನಾಡಿ, ಕೆಲ ತಿಂಗಳುಗಳ ಕಾಲ ಕೋವಿಡ್ ಪ್ರಕರಣ ಕಡಿಮೆಯಿದ್ದ ಹಿನ್ನೆಲೆ ಒಳರೋಗಿಗಳ ಸಂಖ್ಯೆ ಹೆಚ್ಚಿದ್ದವು. ಇದರಿಂದ ಕೇವಲ 16 ಬೆಡ್​ಗಳುಳ್ಳ ವಾರ್ಡನ್ನು ಮಾತ್ರ ಮೀಸಲಿಡಲಾಗಿತ್ತು. ಈ ಹಿಂದೆ ಉಳಿದ ಸೇವೆಯನ್ನು ಬಂದ್ ಮಾಡಿ‌ ಕೇವಲ‌ ಕೋವಿಡ್ ಪ್ರಕರಣ ಮಾತ್ರ ನೋಡುತ್ತಿದ್ದೆವು. ಅದು ಈ ಬಾರಿ ಮಾಡಲು ಸಾಧ್ಯವಿಲ್ಲ. ಇವೆಲ್ಲವನ್ನು ಶಾಸಕರಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ಆದರೆ ಈಗ ಎರಡನೇ ಅಲೆಯ ವೇಗ ಹೆಚ್ಚಾಗಿದ್ದು, ಸದ್ಯಕ್ಕೆ 11 ಪ್ರಕರಣಗಳಿದ್ದು, ದಿನೇ ದಿನೆ ಪ್ರಕರಣ ಏರಿಕೆಯಾದಲ್ಲಿ‌ ಆಸ್ಪತ್ರೆಗಳಿಗೆ ಬೆಡ್​ಗಳ ಬೇಡಿಕೆ ಇರಲಿದೆ. ಬೆಂಗಳೂರಿನಲ್ಲಿ ಬೆಡ್ ಕೊರತೆಯಿಂದ ಶನಿವಾರದಂದು ತಡರಾತ್ರಿ ಭಟ್ಕಳ ಸರಕಾರಿ ಆಸ್ಪತ್ರೆಗೆ ಬಂದಿದ್ದು, ಎಲ್ಲದಕ್ಕೂ ನಾವು ಸಿದ್ಧರಾಗಿರಬೇಕು.‌ ಈ ಹಿನ್ನೆಲೆ‌ ಇಲ್ಲಿನ ಒಳರೋಗಿಗಳನ್ನು ಹಾಸ್ಟೆಲ್​ಗೆ ಸ್ಥಳಾಂತರಿಸಲಾಗಿದೆ. ಸದ್ಯ ಅಲ್ಲಿ ಆಸ್ಪತ್ರೆಯ ಸ್ಟಾಫ್​ ನರ್ಸ್​ಗಳು 24 ಗಂಟೆಯೂ ರೋಗಿಗಳನ್ನು ನೋಡಿಕೊಳ್ಳಲಿದ್ದು, ವೈದ್ಯರು ಸಹ ಸಮಯಕ್ಕೆ ಸರಿಯಾಗಿ ರೋಗಿಗಳನ್ನು ಪರೀಕ್ಷಿಸಲಿದ್ದಾರೆ. ಆಸ್ಪತ್ರೆಯ ಒಂದು ಅಂಗವಾಗಿ ಹಾಸ್ಟೆಲ್‌ ಕೆಲಸ ಮಾಡಲಿದೆ ಎಂದರು.

ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಸ್ಥಳಾಂತರದ ಬಗ್ಗೆ ಮನವರಿಕೆ ಮಾಡಿ ರೋಗಿಗಳಿಗೆ ಮಾಹಿತಿ ನೀಡಿ ಒಟ್ಟು 21 ಒಳರೋಗಿಗಳನ್ನು ಬಿ.ಸಿ.ಎಮ್. ಹಾಸ್ಟೆಲ್​ಗೆ ಆ್ಯಂಬುಲೆನ್ಸ್​ ಮೂಲಕ ಸ್ಥಳಾಂತರಿಸಲಾಯಿತು. ‌ಇದೇ ವೇಳೆ ಶಾಸಕ ಸುನೀಲ‌್ ನಾಯ್ಕ, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರು ಬಿ.ಸಿ.ಎಮ್.‌ ಹಾಸ್ಟೆಲ್​ಗೆ ತೆರಳಿ ಒಳರೋಗಿಗಳನ್ನು ಆಹ್ವಾನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.