ಭಟ್ಕಳ: ಕೊರೊನಾ ವಿರುದ್ಧ ಹೋರಾಟದಲ್ಲಿ ಪ್ರತಿಫಲಾಫೇಕ್ಷೆ ಇಲ್ಲದೆ ಇಂದಿನವರೆಗೂ ನಿರಂತರವಾಗಿ ದುಡಿಯುತ್ತಿರುವ ಸಾಮಾಜಿಕ ಕಾರ್ಯಕರ್ತ ನಿಸಾರ ಅಹ್ಮದ್ ಅವರನ್ನು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ ಮಾತನಾಡಿ, ಆರಂಭದಲ್ಲಿ ಕೊರೊನಾ ಆತಂಕವಿತ್ತು. ಅಂತಹ ಸಂದರ್ಭದಲ್ಲಿ ಸೋಂಕಿತರೊಂದಿಗೆ ನಿಂತು ಉಪಚಾರ ಮಾಡಿ ಅವರಿಗೆ ನಿಸಾರ ಅವರು ನೆರವಾಗಿದ್ದಾರೆ. ಸೋಂಕಿತರೊಂದಿಗೆ ತೆರಳಿ ಅವರಲ್ಲಿ ಆತ್ಮಸ್ಥ್ಯರ್ಯ ತುಂಬಿದ್ದಾರೆ.
ಅಂದಿನ ಸ್ಥಿತಿಯಲ್ಲಿ ಸ್ವತಃ 3 ಬಾರಿ ಇವರ ಗಂಟಲಿನ ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು,ಆದರೆ ಯಾವುದಕ್ಕೂ ಭಯಬೀಳದೆ ಸೋಂಕಿತರ ಸೇವೆಯಲ್ಲಿ ನಿರತವಾಗಿದ್ದದ್ದು ನಮಗೆಲ್ಲ ಮಾದರಿ ಎಂದು ಹೇಳಿದರು.