ಭಟ್ಕಳ: 19 ವರ್ಷದಿಂದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಬಾಡಿಗೆ ಕಟ್ಟಡದ ಕಾರಣ ಭಟ್ಕಳ ನ್ಯಾಯಾಲಯ B.E ಕಚೇರಿಯನ್ನು ಜಪ್ತಿ ಮಾಡಲು ಆದೇಶ ಹೊರಡಿಸಿತ್ತು. ಈ ಹಿನ್ನೆಲೆ ಇಂದು ನ್ಯಾಯಾಲಯದ ಸಿಬ್ಬಂದಿ ಬಿಇಒ ಕಚೇರಿಯ ಉಪಕರಣಗಳನ್ನು ವಶಕ್ಕೆ ಪಡೆದರು.
ಭಟ್ಕಳದ ಮುಗ್ದಂ ಕಾಲೋನಿಯಲ್ಲಿ ಇರುವ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ 40 ವರ್ಷದಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಈ ಕಟ್ಟಡವು ಜಮಾತೆ ಮುಸ್ಲೀಂಮಿನ್ ಅಡಿ ನಿರ್ಮಾಣವಾಗಿದೆ. ಸುಮಾರು 20 ವರ್ಷದಿಂದ ಶಿಕ್ಷಣಾಧಿಕಾರಿ ಕಟ್ಟಡದ ಬಾಡಿಗೆ ಕಟ್ಟದ ಕಾರಣ (ಸುಮಾರು 1,49,000 ಕಟ್ಟಬೇಕಾದ ಬಾಡಿಗೆ ಹಣ) ಜಮಾತೆ ಮುಸ್ಲೀಂಮಿನ್ ಆಫ್ ಮುಗ್ದಂ ಕಾಲೋನಿಯ ಕಾರ್ಯದರ್ಶಿ 2005 ರಲ್ಲಿ ಭಟ್ಕಳ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಅದರಂತೆ ಪ್ರಕರಣ ನಂ: 56/2019 ನ್ಯಾಯಾಲಯದಲ್ಲಿ ದಾವೆ ದಾಖಲಾಗಿದ್ದು, ಪ್ರಕರಣದ ವಿಚಾರಣೆ ನಡೆಸಿದ ಭಟ್ಕಳ ನ್ಯಾಯಾಲಯವೂ ಸೆಪ್ಟೆಂಬರ್ 14 ರಂದು ಬಿಇಒ ಕಚೇರಿಯಲ್ಲಿನ ಉಪಕರಣಗಳು ಜಪ್ತಿ ಮಾಡುವಂತೆ ಆದೇಶ ಹೊರಡಿಸಿತ್ತು. ಆದೇಶದ ಮೆರೆಗೆ ಇಂದು ತಾಲೂಕಿನ ಜೆಎಮ್ಎಫ್ಸಿ ನ್ಯಾಯಾಲಯದ ಬೆಲೀಫ್ರಾದ ಗಣಪತಿ ಅವರು ಬಿಇಒ ಕಚೇರಿಗೆ ಬಂದು ನ್ಯಾಯಾಲಯದ ವಾರಂಟ್ ಹೊರಡಿಸಿ ಜಪ್ತಿ ನಿಯಮ ಜಾರಿಗೆ ಮಾಡಿ ವಸ್ತುಗಳನ್ನು ಜಪ್ತಿ ಮಾಡಿಕೊಂಡರು.
ಜಪ್ತ ಮಾಡಲಾದ ಬಿಇಒ ಕಚೇರಿ ಉಪಕರಣಗಳು: ಕಂಪ್ಯೂಟರ್- 9, ಫೈಬರ್ ಚೇರ್ -66, ಕುರ್ಚಿ -26, ಟೇಬಲ್ -26, ವಾಹನ – 1 ಹಾಗೂ ಮೆಟಲ್ ಟೇಬಲ್ -2.
ಪ್ರಕರಣ ಹಿನ್ನೆಲೆ: ಸರಕಾರಿ ಉರ್ದು ಪ್ರಾಥಮಿಕ ಶಾಲೆಯನ್ನು 1972 ರಲ್ಲಿ ಜಮಾತುಲ್ ಮುಸ್ಲಿಮಿನ್ ಮುಗ್ದುಮ್ ಕಾಲೋನಿ ಅವರು ನಿರ್ಮಾಣ ಮಾಡಿ ರೂ. 111 ಕ್ಕೆ ತಿಂಗಳ ಬಾಡಿಗೆ ನಿಗದಿ ಮಾಡಲಾಗಿದ್ದು, ಬಳಿಕ 1983 - 84ರಲ್ಲಿ ಕಟ್ಟಡವನ್ನು ಮತ್ತೆ ವಿಸ್ತರಣೆ ಮಾಡಿ ರೂ. 100 ಬಾಡಿಗೆ ನಿಗದಿಸಿ ರೂ. 332 ಬಾಡಿಗೆ ನೀಡಿ ಒಪ್ಪಂದ ಮಾಡಿ ಮುಂದುವರೆಸಿದರು. ಇದೇ ವೇಳೆ ಸ್ವಲ್ಪ ವರ್ಷದ ವರೆಗೆ ಬಾಡಿಗೆ ನೀಡುತ್ತಾ ಬಂದಿದ್ದು, ನಂತರದಲ್ಲಿ ಬಾಡಿಗೆ ನೀಡದ ಹಿನ್ನೆಲೆ 2005ರಲ್ಲಿ ವರ್ಷಕ್ಕೆ ರೂ.8916 ಬಾಡಿಗೆ ಹಣ ನೀಡಬೇಕೆಂದು ನ್ಯಾಯಾಲಯದಲ್ಲಿ ದಾವೆ ಹಾಕಲಾಯಿತು.