ETV Bharat / state

ಪ್ರಯಾಣಿಕರ ಗಮನಕ್ಕೆ.. ಬೆಂಗಳೂರು - ಕಾರವಾರ ರೈಲು ಸೇವೆ ಆಗಸ್ಟ್ 16 ರಿಂದ ಪುನಾರಂಭ

author img

By

Published : Aug 13, 2021, 8:00 PM IST

ಸದ್ಯ ಬೆಂಗಳೂರು - ಕಾರವಾರ (YPR-KAWR-06211/12) ಬೆಳಗಿನ ರೈಲು ಇದೇ ಆಗಸ್ಟ್ 16 ರಿಂದ ಹೊಸ ವಿಸ್ಟಾಡೋಮ್ ಕೋಚಿನೊಂದಿಗೆ ಪುನಾರಂಭಗೊಳ್ಳಲಿದೆ. ಕೋವಿಡ್ ಕಾರಣದಿಂದ ಬೆಂಗಳೂರು - ಕಾರವಾರಕ್ಕೆ ಬೆಳಗಿನ ರೈಲು ಸಂಚಾರವನ್ನು ಮಂಗಳೂರಿನಿಂದ ಕಾರವಾರದ ತನಕ ರೈಲ್ವೆ ಇಲಾಖೆ ಸ್ಥಗಿತಗೊಳಿಸಿತ್ತು.

Bangalore-Karwar railway service to resume on August 16
ಬೆಂಗಳೂರು-ಕಾರವಾರ ರೈಲು ಸೇವೆ ಆಗಸ್ಟ್ 16ರಿಂದ ಪುನರಾಂಭ

ಬೆಂಗಳೂರು: ಕೊರೊನಾ ಹಿನ್ನೆಲೆ ಸಾರಿಗೆ ಸೇವೆಗಳಿಗೆ ಭಾರಿ ಹೊಡೆತ ನೀಡಿತ್ತು‌. ಅದರಲ್ಲೂ ಬೃಹತ್ ಪ್ರಯಾಣಿಕರನ್ನ ಹೊಂದಿರುವ ರೈಲ್ವೆ ಇಲಾಖೆಯು ಕೋವಿಡ್ ಕಾರಣದಿಂದ ಭಾಗಶಃ ಸಂಚಾರ ಮೊಟಕುಗೊಳಿಸಿತ್ತು. ಲಾಕ್​ಡೌನ್ ಕಾರಣಕ್ಕೆ ಹಲವು ರೈಲುಗಳ ಓಡಾಟಕ್ಕೆ ಬ್ರೇಕ್ ಹಾಕಲಾಗಿತ್ತು.

ಸದ್ಯ ಬೆಂಗಳೂರು - ಕಾರವಾರ (YPR-KAWR-06211/12) ಬೆಳಗಿನ ರೈಲು ಇದೇ ಆಗಸ್ಟ್ 16 ರಿಂದ ಹೊಸ ವಿಸ್ಟಾಡೋಮ್ ಕೋಚಿನೊಂದಿಗೆ ಪುನಾರಂಭಗೊಳ್ಳಲಿದೆ. ಈ ಕುರಿತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದ್ದಾರೆ.

ಕೋವಿಡ್ ಕಾರಣದಿಂದ ಬೆಂಗಳೂರು - ಕಾರವಾರಕ್ಕೆ ಬೆಳಗಿನ ರೈಲು ಸಂಚಾರವನ್ನು ಮಂಗಳೂರಿನಿಂದ ಕಾರವಾರದ ತನಕ ರೈಲ್ವೆ ಇಲಾಖೆ ಸ್ಥಗಿತಗೊಳಿಸಿತ್ತು. ಈ ಸಂಬಂಧ ಆಯಾ ಭಾಗದ ಪ್ರಯಾಣಿಕರು, ಸಾರ್ವಜನಿಕರು ರೈಲನ್ನು ಪುನಾರಂಭಿಸುವಂತೆ ಒತ್ತಾಯ ಕೇಳಿಬಂದಿತ್ತು.

ಈ ನಿಟ್ಟಿನಲ್ಲಿ ತಕ್ಷಣ ಎಚ್ಚೆತ್ತ ಸಂಸದೆ ಶೋಭಾ ಕರಂದ್ಲಾಜೆ, ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಕಾರವಾರ - ಬೆಂಗಳೂರು ಹಗಲು ರೈಲನ್ನು ಪುನಾರಂಭಿಸುವಂತೆ ಮನವಿ ಮಾಡಿದರು. ಇದೀಗ ಸಚಿವರ ಮನವಿಯನ್ನು ಒಪ್ಪಿ, ರೈಲ್ವೆ ಇಲಾಖೆ ಕಾರವಾರ - ಬೆಂಗಳೂರು ಬೆಳಗಿನ ರೈಲನ್ನು ಪುನಾರಂಭಿಸಲು ರೈಲ್ವೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ‌.

ಈ ಕಾರಣದಿಂದ ನೈಋತ್ಯ ರೈಲ್ವೆಯಿಂದ ಬೆಂಗಳೂರು - ಕಾರವಾರ ರೈಲನ್ನು ಪುನಾರಂಭಿಸುತ್ತಿದೆ. ಇದೇ ವೇಳೆ, ಒಂದು ಹೊಸ ವಿಸ್ಟಾಡೋಮ್ ಕೋಚ್ ಕೂಡ ಈ ರೈಲಿಗೆ ಜೊತೆಗೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.