ಭಟ್ಕಳ : ಡಿಎನ್ಎ ಆಧಾರಿತ ಎನ್ಆರ್ಸಿ ಮಾಡಬೇಕು ಎಂದು ಬಹುಜನ ಕ್ರಾಂತಿ ಮೋರ್ಚಾ ಸಂಘಟನೆ ದೇಶದಾದ್ಯಂತ ಜ.29ರಂದು ಬಂದ್ಗೆ ಕರೆ ನೀಡಿದೆ. ಭಟ್ಕಳದಲ್ಲಿ ಇದನ್ನು ಯಶಸ್ವಿಗೊಳಿಸಬೇಕೆಂದು ಬಹುಜನ ಕ್ರಾಂತಿ ಮೋರ್ಚಾದ ಮುಖಂಡ ಆದಂ ಪಣಂಬೂರು ಕರೆ ನೀಡಿದರು.
ಹೊಟೇಲ್ ಶ್ರೀನಿವಾಸ ಡಿಲಕ್ಸ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಹುಜನ ಕ್ರಾಂತಿ ಮೋರ್ಚಾ ಮೂರು ಹಂತದಲ್ಲಿ ರಾಷ್ಟ್ರವ್ಯಾಪಿ ಆಂದೋಲನ ನಡೆಸಲಿದ್ದು ಬುಧವಾರ ನಡೆಯುತ್ತಿರುವುದು ಮೂರನೇ ಹಂತದ ಹೋರಾಟ, ನಾವು ಡಿಎನ್ಎ ಆಧಾರಿತ ಎನ್ಆರ್ಸಿ ಮಾಡಬೇಕೆಂದು ಆಗ್ರಹಿಸುತ್ತೇವೆ. ದೇಶದ ಮೂಲ ನಿವಾಸಿಗಳು ಯಾರೆಂದು ಆಗ ತಿಳಿದು ಬರುತ್ತದೆ. ಇದರಿಂದಾಗಿ ಇಡೀ ದೇಶದ ಮುಂದೆ ವಿದೇಶಿಯರು ಯಾರು ಎಂಬುದು ತಿಳಿದು ಬರುತ್ತದೆ ಎಂದರು. ಇದೇ ಸಂದರ್ಭದಲ್ಲಿ ಭಾರತ ಬಂದ್ಗೆ ಸಂಬಂಧಿಸಿದ ಪೋಸ್ಟರ್ ಸಹ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶೌಕತ್ ಕತೀಬ್, ಯೂನೂಸ್ ರುಕ್ನುದ್ದೀನ್, ಮುನೀರ್ ಎಂ.ಹೆಚ್. ವಸೀಮ್ ಮನೆಗಾರ ಮುಂತಾದವರು ಉಪಸ್ಥಿತರಿದ್ದರು.