ಭಟ್ಕಳ : ಮುಸ್ಲಿಂ ಯೂಥ್ ಫೆಡರೇಶನ್ 'ಔಝ್ ಪ್ರೊ ಕಬಡ್ಡಿ ಸೀಸನ್ 2' ಫೈನಲ್ ಪಂದ್ಯದಲ್ಲಿ ಟೀಮ್ ಪಟೇಲ್ ವಾರಿಯರ್ಸ್ ತಂಡವನ್ನು ಸೋಲಿಸಿ ಬಾಯಿಜಾನ್ ತಂಡವು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅರ್ಜುನ ಪ್ರಶಸ್ತಿ ಪುರಸ್ಕೃತ ಯೋಧರ ಮುಖ್ಯ ತರಬೇತುದಾರ ಬಿ.ಸಿ.ರಮೇಶ್ ಮಾತನಾಡಿ, ಭಟ್ಕಳ ತಾಲೂಕಿನಲ್ಲಿ ಕ್ರೀಡಾ ಹಾಸ್ಟೆಲ್ ನಿರ್ಮಾಣ ಮಾಡಲು ಬಿಎಂವೈಎಫ್ ಸಂಸ್ಥೆಯಿಂದ ಸರ್ಕಾರಕ್ಕೆ ಮನವಿ ಮಾಡಬೇಕು. ಭಟ್ಕಳದಲ್ಲಿ 15 ದಿನಗಳ ಕಬಡ್ಡಿ ಕೋಚಿಂಗ್ ಕ್ಯಾಂಪ್ ನಡೆಸುವುದಾಗಿ ಭರವಸೆ ನೀಡಿದರು. ಭಟ್ಕಳದ ಆಟಗಾರರಲ್ಲಿ ಪ್ರತಿಭೆಯಿದೆ, ಅವರಿಗೆ ಉತ್ತಮ ತರಬೇತಿ ನೀಡುವ ಅವಶ್ಯಕತೆಯಿದೆ. ಕೆಲವು ಆಟಗಾರರು ಇರಾನ್ ಕಬಡ್ಡಿ ಆಟಗಾರರಂತೆ ಕಾಣುತ್ತಾರೆ ಎಂದರು.
ಇದನ್ನೂ ಓದಿ : ಪೊಲೀಸರ ವಾರ್ಷಿಕ ಕ್ರೀಡಾಕೂಟ: ಕರ್ತವ್ಯದ ಒತ್ತಡ ಮರೆತು ರಿಲ್ಯಾಕ್ಸ್ ಆದ ಖಾಕಿ ಪಡೆ
ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯದಲ್ಲಿ ವಿಜೇತರಾದ ಬಾಯಿಜಾನ್ ತಂಡಕ್ಕೆ ಟ್ರೋಫಿಯೊಂದಿಗೆ 75,000 ರೂ. ನಗದು ಹಾಗೂ ರನ್ನರ್ ಅಪ್ ಆದ ಪಟೇಲ್ ವಾರಿಯರ್ಸ್ ತಂಡಕ್ಕೆ ಟ್ರೋಪಿಯೊಂದಿಗೆ 40,000 ರೂ. ನೀಡಲಾಯಿತು. ಮೂರನೇ ಸ್ಥಾನ ಪಡೆದ ಖಲೀಫಾ ಪಾಲ್ಟಾನ್ ತಂಡಕ್ಕೆ ಟ್ರೋಫಿಯೊಂದಿಗೆ 10,000 ರೂ. ನೀಡಲಾಯಿತು.
ಬಾಯಿಜಾನ್ ತಂಡದ ಅರವಿಂದ್ ಸಿದ್ದಿಗೆ ಮ್ಯಾನ್ ಆಫ್ ದಿ ಫೈನಲ್ ಪ್ರಶಸ್ತಿ, ಖಲೀಫಾ ಪಾಲ್ಟನ್ ತಂಡದ ಸಾಹಿಲ್ ಅಮ್ರಿಗೆ ಟೂರ್ನಿಯ ಅತ್ಯುತ್ತಮ ಕ್ಯಾಚರ್ ಪಟೇಲ್ ವಾರಿಯರ್ಸ್‌ನ ರವಿಗೆ ಟೂರ್ನಿಯ ಅತ್ಯುತ್ತಮ ರೈಡರ್, ಬಾಯಿಜಾನ್ ತಂಡದ ರತನ್‌ಗೆ ಟೂರ್ನಮೆಂಟ್‌ನ ಆಟಗಾರ ಪ್ರಶಸ್ತಿಯನ್ನು ವಿತರಿಸಲಾಯಿತು.