ETV Bharat / state

ಆಟೋದಲ್ಲಿ ಬಿಟ್ಟು ಹೋದ ಚಿನ್ನಾಭರಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಚಾಲಕ - driver who got the bag back

ಆಟೋ ಚಾಲಕ ಬ್ಯಾಗ್ ತೆರೆದು ನೋಡಿದಾಗ ನಗದು ಮತ್ತು ಚಿನ್ನಾಭರಣ ಇದ್ದು, ಇವೆರಡರ ಮೌಲ್ಯ ಸುಮಾರು 80 ಸಾವಿರ ಎನ್ನಲಾಗಿದೆ. ನಂತರ ಆಟೋ ಚಾಲಕ ಮಹಿಳೆಯನ್ನು ಶಿರಾಲಿ ಆಟೋ ನಿಲ್ದಾಣಕ್ಕೆ ಕರೆಸಿ ಚಿನ್ನಾಭರಣ, ನಗದು ಇದ್ದ ಬ್ಯಾಗ್ ಮರಳಿ ನೀಡಿದ್ದಾರೆ.

bag that got in the auto
bag that got in the auto
author img

By

Published : Apr 6, 2021, 8:14 PM IST

ಭಟ್ಕಳ: ಆಟೋದಲ್ಲಿ ಬಿಟ್ಟು ಹೋದ 80 ಸಾವಿರದಷ್ಟು ಬೆಲೆಬಾಳುವ ಬಂಗಾರವನ್ನು ಮರಳಿ ಸಂಬಂಧಪಟ್ಟವರಿಗೆ ಮುಟ್ಟಿಸಿ ಆಟೋ ಚಾಲಕನೊರ್ವ ಪ್ರಾಮಾಣಿಕತೆ ಮೆರೆದ ಘಟನೆ ತಾಲೂಕಿ ಶಿರಾಲಿಯಲ್ಲಿ ನಡೆದಿದೆ.

ಶಿರಾಲಿ ಆಟೋ ಚಾಲಕ ಮಾದೇವ ಮುನ್ನಾ ನಾಯ್ಕ ಎಂಬಾತ ತನ್ನ ಆಟೋದಲ್ಲಿ ಮಲ್ಲಾರಿಯ ಮಹಿಳೆಯೋರ್ವಳನ್ನು ಶಿರಾಲಿಯ ಹಾದಿಮಾಸ್ತಿ ದೇವಸ್ಥಾನದಿಂದ ಕರೆದುಕೊಂಡು ಮಾವಿನಕಟ್ಟೆಯಲ್ಲಿ ಬಿಟ್ಟು ವಾಪಸ್​​ ಬರುವ ವೇಳೆ ಆಟೋದಲ್ಲಿ ಬ್ಯಾಗ್ ಇರೋದನ್ನು ಗಮನಿಸಿದ್ದಾನೆ. ಆಟೋ ಚಾಲಕ ಬ್ಯಾಗ್ ತೆರದು ನೋಡಿದಾಗ ನಗದು ಮತ್ತು ಚಿನ್ನಾಭರಣ ಇದ್ದು, ಇವೆರಡರ ಮೌಲ್ಯ ಸುಮಾರು 80 ಸಾವಿರ ಎನ್ನಲಾಗಿದೆ. ನಂತರ ಆಟೋ ಚಾಲಕ ಮಹಿಳೆಯನ್ನು ಶಿರಾಲಿ ಆಟೋ ನಿಲ್ದಾಣಕ್ಕೆ ಕರೆಸಿ ಮರಳಿ ನೀಡಿದ್ದಾನೆ.

ಈತನ ಈ ಕಾರ್ಯಕ್ಕೆ ಆಟೋ ಚಾಲಕರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.