ಶಿರಸಿ : ರಾತ್ರಿ ಹೊತ್ತು ನೆಟ್ವರ್ಕ್ ಹುಡುಕಿ ಗುಡ್ಡ ಏರಿ ಮೊಬೈಲ್ ನೋಡುತ್ತಿದ್ದ ಯುವಕನೊಬ್ಬನನ್ನು ಕಾಡು ಪ್ರಾಣಿ ಎಂದು ತಿಳಿದು ಬೇಟೆಗಾರನೊಬ್ಬ ಗುಂಡು ಹಾರಿಸಿ ಗಾಯಗೊಳಿಸಿದ ಘಟನೆ ಸಿದ್ದಾಪುರ ತಾಲೂಕಿನ ಕವಲಕೊಪ್ಪ ಗ್ರಾಮದ ಗೊಂಟನಾಳದಲ್ಲಿ ನಡೆದಿದೆ.
![Attack on young man in Shirsi](https://etvbharatimages.akamaized.net/etvbharat/prod-images/kn-srs-01-gundu-taguli-gaya-photo-ka10005_23052020183042_2305f_1590238842_240.jpg)
ಕುಂಬಾರಕುಳಿ ಮೂಲದ ಹಾಲಿ ಗೊಂಟನಾಳದ ನಿವಾಸಿ ಪ್ರದೀಪ್ ನಾರಾಯಣ್ ಗೌಡ (19) ಗಾಯಗೊಂಡ ಯುವಕ. ಈತ ನೆಟ್ವರ್ಕ್ ಸಂಪರ್ಕ ಅರಸಿ ಗುಡ್ಡ ಏರಿ ಕುಳಿತು ಮೊಬೈಲ್ ವೀಕ್ಷಿಸುತ್ತಿದ್ದ ಎನ್ನಲಾಗಿದೆ.
![Attack on young man in Shirsi](https://etvbharatimages.akamaized.net/etvbharat/prod-images/kn-srs-01-gundu-taguli-gaya-photo-ka10005_23052020183042_2305f_1590238842_329.jpg)
ಕಾಡು ಪ್ರಾಣಿಗಳನ್ನು ಬೇಟೆಯಾಡುವ ಚಟವುಳ್ಳ ಕವಲಕೊಪ್ಪ ಗೊಂಟನಾಳದ ರಾಮಾ ಕನ್ನಾ ನಾಯ್ಕ ಎಂಬಾತ ಗುಂಡು ಹಾರಿಸಿದ ಆರೋಪಿಯಾಗಿದ್ದಾನೆ. ಈತ ದೂರದಿಂದ ಯುವಕನನ್ನು ಯಾವುದೋ ಕಾಡು ಪ್ರಾಣಿ ಎಂದು ಭಾವಿಸಿ ಗುಂಡು ಹಾರಿಸಿದ್ದಾನೆ ಎನ್ನಲಾಗುತ್ತಿದೆ. ಇದರಿಂದ ಯುವಕ ಪ್ರದೀಪ್ ನಾರಾಯಣ್ ಗೌಡನ ಬಲ ಮೊಣಕಾಲು ಹಾಗೂ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿ ಗಾಯವಾಗಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
![Attack on young man in Shirsi](https://etvbharatimages.akamaized.net/etvbharat/prod-images/kn-srs-01-gundu-taguli-gaya-photo-ka10005_23052020183042_2305f_1590238842_1079.jpg)