ETV Bharat / state

ಅಂಕೋಲಾದಲ್ಲಿ ಬೃಹತ್‌ ಗಾತ್ರದ 'ಅಟ್ಲಾಸ್ ಮಾಥ್' ಪತಂಗ ಪತ್ತೆ-ವಿಡಿಯೋ - ಉತ್ತರ ಕನ್ನಡ

ಭಾರತದಲ್ಲಿಯೇ ಅತಿ ದೊಡ್ಡ, ಅಪರೂಪದ 'ಅಟ್ಲಾಸ್ ಮಾಥ್' ಎಂಬ ಪತಂಗ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಕಂಡುಬಂದಿದೆ.

Atlas Moth
ಅಟ್ಲಾಸ್ ಮಾಥ್
author img

By ETV Bharat Karnataka Team

Published : Sep 10, 2023, 9:22 AM IST

'ಅಟ್ಲಾಸ್ ಮಾಥ್' ಬಗ್ಗೆ ಮಾಹಿತಿ ನೀಡಿದ ಅರಣ್ಯ ರಕ್ಷಕ ಗೋಪಾಲ ನಾಯ್ಕ

ಕಾರವಾರ (ಉತ್ತರ ಕನ್ನಡ): ಅಂಗೈಗಿಂತಲೂ ದೊಡ್ಡದಾದ, ಭಾರತದಲ್ಲೇ ದೈತ್ಯ ಎನ್ನಲಾದ ಅಪರೂಪದ ಪತಂಗವೊಂದು ಅಂಕೋಲಾದಲ್ಲಿ ಪತ್ತೆಯಾಗಿದೆ. ತಾಲೂಕಿನ ಆಸ್ಲಗದ್ದೆಯ ಜ್ಯೋತಿ ನಾಯ್ಕ್ ಎನ್ನುವವರ ಮನೆ ಅಂಗಳದ ಎದುರು ಕಂಡುಬಂದ ಪತಂಗವನ್ನು ಪಕ್ಷಿಗಳು ಕುಕ್ಕಲು ಮುಂದಾದಾಗ ಸ್ಥಳೀಯ ಗೋವಿಂದ ನಾಯ್ಕ ಎಂಬವರು ಗಮನಿಸಿ, ರಕ್ಷಿಸಿದ್ದಾರೆ.

"ಸಾಮಾನ್ಯವಾಗಿ ಹಲವರು ಇದನ್ನು ಚಿಟ್ಟೆ ಅಥವಾ ಪಾತರಗಿತ್ತಿ ಎಂದು ಭಾವಿಸುತ್ತಾರೆ. ಅಸಲಿಗೆ ಇದು ಚಿಟ್ಟೆ ಅಥವಾ ಪಾತರಗಿತ್ತಿ ಆಗಿರದೇ, ದೈತ್ಯಾಕಾರದ ಪತಂಗವಾಗಿದೆ. ಅಟ್ಲಾಸ್ ಮಾಥ್ ಅಥವಾ ಮೋತ್ ಎನ್ನಲಾಗುವ ಇದರ ವೈಜ್ಞಾನಿಕ ಹೆಸರು 'ಅಟಾಕಸ್ ಅಟ್ಲಾಸ್'. ಇದರ ಜೀವಿತಾವಧಿ ಕೇವಲ ಒಂದು ವಾರ ಎನ್ನುವುದು ಮತ್ತೊಂದು ವಿಶೇಷತೆ" ಎಂದು ಅರಣ್ಯ ರಕ್ಷಕ ಗೋಪಾಲ ನಾಯ್ಕ ಮಾಹಿತಿ ನೀಡಿದರು.

ಇದನ್ನೂ ಓದಿ: ಉಡುಪಿಯಲ್ಲಿ ಅಪರೂಪದ ದೈತ್ಯಾಕಾರದ ಅಲ್ಪಾಯುಷ್ಯದ ಪತಂಗ ಪತ್ತೆ!

ಅಂಗನವಾಡಿ ಸಮೀಪ ಬೃಹತ್ ಹೆಬ್ಬಾವು ಪತ್ತೆ: ಅಂಗನವಾಡಿ ಕೇಂದ್ರವೊಂದರ ಬಳಿ ಬೃಹತ್ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿದ್ದು, ಸ್ಥಳೀಯರೇ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಘಟನೆ ಅಂಕೋಲಾ ತಾಲೂಕಿನ ಬೆಳಾಂಬಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬೇರಹಿತ್ಲ ಗ್ರಾಮದಲ್ಲಿ ನಡೆದಿದೆ.

python
ಅಂಗನವಾಡಿ ಬಳಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆ

ಅಂಗನವಾಡಿ ಹಿಂಬದಿ ಹೆಬ್ಬಾವು ಪತ್ತೆಯಾಗಿದೆ. ಮಕ್ಕಳು, ಮತ್ತಿತರರು ಓಡಾಡುವ ಪ್ರದೇಶವಾದ್ದರಿಂದ ಸಹಜವಾಗಿ ಅಂಗನವಾಡಿ ಸುತ್ತಮುತ್ತಲ ಪ್ರದೇಶದ ಜನರು ಆತಂಕಗೊಂಡಿದ್ದರು. ಈ ವೇಳೆ ಸ್ಥಳೀಯರೇ ಧೈರ್ಯ ಮಾಡಿ ಹಾವು ಹಿಡಿಯುವ ಸಾಹಸಕ್ಕೆ ಮುಂದಾಗಿದ್ದಾರೆ. ಸ್ಥಳೀಯರಾದ ಮಾರುತಿ ಮಡಿವಾಳ, ದೇವೇಂದ್ರ , ಅಶೋಕ, ಹರೀಶ್, ಶಿವಾನಂದ, ಮಹೇಶ್, ಚಂದ್ರಶೇಖರ ಮಡಿವಾಳ ಮತ್ತಿತರರು ಹೆಬ್ಬಾವು ಹಿಡಿದು ಗ್ರಾಮಸ್ಥರ ಆತಂಕ ದೂರ ಮಾಡಿದರು. ಸುಮಾರು 10 ಅಡಿ ಉದ್ದದ ಹೆಬ್ಬಾವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಹಂಪಿಯಲ್ಲಿ ಅಪರೂಪದ ಬಿಳಿ ಮಣ್ಣು ಮುಕ್ಕ ಹಾವು ಪತ್ತೆ: ವಿಶ್ವವಿಖ್ಯಾತ ಹಂಪಿಯ ವಿಜಯ ವಿಠ್ಠಲ ದೇಗುಲದ ಆವರಣದಲ್ಲಿ ಇತ್ತೀಚೆಗೆ ಅಪರೂಪದ ಬಿಳಿ ಮಣ್ಣು ಮುಕ್ಕ ಹಾವು ಪತ್ತೆಯಾಗಿತ್ತು. ಇದನ್ನು ಕಂಡು ಭದ್ರತಾ ಸಿಬ್ಬಂದಿ ಹಾಗೂ ಪ್ರವಾಸಿಗರು ಭಯಗೊಂಡಿದ್ದರು. ಹಾವು ಯಾವ ಪ್ರಭೇದದ್ದು ಎಂದು ಗುರುತಿಸಲಾಗದೇ ಗೊಂದಲಕ್ಕೀಡಾಗಿದ್ದರು. ವಿಷಯ ತಿಳಿದ ಕಮಲಾಪುರದ ಉರಗ ರಕ್ಷಕ ಜಿ.ಬಿ.ಮಲ್ಲಿಕಾರ್ಜುನ ಸ್ಥಳಕ್ಕೆ ಬಂದು ಹಾವು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದರು. ಇದು ಸಾಮಾನ್ಯ ಜಾತಿಯ ಮಣ್ಣುಮುಕ್ಕ ಹಾವು. ಚರ್ಮಕ್ಕೆ ಬಣ್ಣ ನೀಡುವ ವರ್ಣ ದ್ರವ್ಯ ಗ್ರಂಥಿ ಅಂದರೆ ಮೆಲಾಲಿನ್ ಅಥವಾ ಪಿಗ್ಮೆಂಟ್ ಕೊರತೆಯಿಂದ ಚರ್ಮಕ್ಕೆ ಬಣ್ಣ ಬಾರದೇ ಬಿಳಿ ಬಣ್ಣದಲ್ಲಿರುತ್ತದೆ. ಇದನ್ನು ಅಲ್ಬಿನೋ ಸ್ನೇಕ್ಸ್ ಎಂದು ಕೂಡಾ ಕರೆಯುತ್ತಾರೆ ಎಂದು ಅವರು ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಹಂಪಿಯಲ್ಲಿ ಅಪರೂಪದ ಬಿಳಿ ಮಣ್ಣು ಮುಕ್ಕ ಹಾವು ಪತ್ತೆ: ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.