ETV Bharat / state

ಅಳ್ವೇಕೋಡಿ ಬಂದರ್ ಡ್ರಜ್ಜಿಂಗ್ ಕಾಮಗಾರಿ ಶೀಘ್ರ ಆರಂಭಕ್ಕೆ ಮನವಿ

ಅಳ್ವೇಕೋಡಿ ಬಂದರ್ ಡ್ರಜ್ಜಿಂಗ್ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸುವಂತೆ ಶ್ರೀ ದುರ್ಗಾಪರಮೇಶ್ವರಿ ಟ್ರಾವೆಲ್ ಬೋಟ್ ಹಾಗೂ ತೆಂಗಿನಗುಂಡಿ ಮೀನುಗಾರರ ಒಕ್ಕೂಟದ ವತಿಯಿಂದ ಶಾಸಕ ಸುನೀಲ್​ ನಾಯ್ಕ ಅವರಿಗೆ ಮನವಿ ಮಾಡಿಕೊಂಡರು.

appeal to start The Alvekodi Bandar Drudging Works
ಅಳ್ವೆಕೋಡಿ ಬಂದರ್ ಡ್ರಜ್ಜಿಂಗ್ ಕಾಮಗಾರಿ ಶೀಘ್ರ ಆರಂಭಕ್ಕೆ ಮನವಿ
author img

By

Published : Sep 13, 2020, 7:43 AM IST

ಭಟ್ಕಳ: ತಾಲೂಕಿನ ಅಳ್ವೇಕೋಡಿ ಬಂದರ್ ಡ್ರಜ್ಜಿಂಗ್ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸುವಂತೆ ಶ್ರೀ ದುರ್ಗಾಪರಮೇಶ್ವರಿ ಟ್ರಾವೆಲ್ ಬೋಟ್ ಹಾಗೂ ತೆಂಗಿನಗುಂಡಿ ಮೀನುಗಾರರ ಒಕ್ಕೂಟದವರು ಶಾಸಕ ಸುನೀಲ್ ನಾಯ್ಕ ಅವರಿಗೆ ಮನವಿ ಮಾಡಿದ್ದಾರೆ.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಸುನೀಲ್​ ನಾಯ್ಕ, ಈಗಾಗಲೇ ತಾಲೂಕಿನ ಅಳ್ವೇಕೋಡಿ, ತೆಂಗಿನಗುಂಡಿ, ಬಂದರ್ ಬ್ರೇಕ್ ವಾಟರ್ ಕಾಮಗಾರಿಗೆ ಸಂಸದ ಅನಂತಕುಮಾರ ಹೆಗಡೆ ಅವರ ಸಹಕಾರದಿಂದ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ 86 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಯು ನಡೆಯುತ್ತಿದೆ. ಕಳೆದ ಬಜೆಟ್ ಅಧಿವೇಶನದಲ್ಲಿ ಅಳ್ವೇಕೋಡಿ ಬಂದರ್ ಡ್ರಜ್ಜಿಂಗ್ ಕಾಮಗಾರಿಗೆ 5 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಆದರೆ 86 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಬ್ರೇಕ್ ವಾಟರ್ ಕಾಮಗಾರಿಯು ಸಂಪೂರ್ಣಗೊಳ್ಳದೆ ಡ್ರಜ್ಜಿಂಗ್ ಕಾಮಗಾರಿ ಪ್ರಾರಂಭಿಸುವುದು ಕಷ್ಟಸಾಧ್ಯವಾಗಿದೆ ಎಂದರು.

ಅಳ್ವೆಕೋಡಿ ಬಂದರ್ ಡ್ರಜ್ಜಿಂಗ್ ಕಾಮಗಾರಿ ಶೀಘ್ರ ಆರಂಭಕ್ಕೆ ಮನವಿ

ಬ್ರೇಕ್ ವಾಟರ್​ ಕಾಮಗಾರಿಯನ್ನು ನಿಧಾನಗತಿಯಲ್ಲಿ ನಡೆಸುತ್ತಿರುವ ಬಗ್ಗೆ ಶಾಸಕರಲ್ಲಿ ಮೀನುಗಾರರು ದೂರು ನೀಡಿ, ಕಾಮಗಾರಿ ಶೀಘ್ರದಲ್ಲಿ ನಡೆದಲ್ಲಿ ಮೀನುಗಾರರಿಗೆ ಅನೂಕೂಲವಾಗಲಿದೆ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಡ್ರಜ್ಜಿಂಗ್ ಇಲ್ಲದೇ ಮೀನುಗಾರರು ಸಂಕಷ್ಟ ಅನುಭವಿಸುತ್ತಿದ್ದು, ಮೀನುಗಾರಿಕಾ ಸಚಿವರು ಸ್ಥಳ ಪರಿಶೀಲನೆ ಮಾಡಬೇಕಾಗಿದೆ. ಶೀಘ್ರದಲ್ಲಿ ಈ ಕಾಮಗಾರಿ ಆರಂಭವಾಗಲಿದೆ, ಮೀನುಗಾರಿಕಾ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಸ್ಥಳೀಯ ಮೀನುಗಾರರ ಸಮ್ಮುಖದಲ್ಲಿ ಬ್ರೇಕ್ ವಾಟರ್ ಹಾಗೂ ಡ್ರಜ್ಜಿಂಗ್ ಕಾಮಗಾರಿಯ ಆರಂಭಕ್ಕೆ ಅದರ ಗುತ್ತಿಗೆದಾರರನ್ನು ಕರೆಸಿ ಸಚಿವರಿಂದಲೇ ಗುತ್ತಿಗೆದಾರರಿಗೆ ಕಾಮಗಾರಿಯನ್ನು ವೇಗದಲ್ಲಿ ಮುಗಿಸುವಂತೆ ಸೂಚನೆ ನೀಡಿಸಲಿದ್ದೇವೆ. ಈ ಬಗ್ಗೆ ಸಚಿವರ ಭೇಟಿಗೆ ಸಂಪರ್ಕಿಸಿದ್ದು, ಸೆಪ್ಟೆಂಬರ್ 19ರೊಳಗಾಗಿ ಭೇಟಿ ನೀಡುವ ಸಾಧ್ಯತೆಯ ಬಗ್ಗೆ ಮೀನುಗಾರಿಗೆ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಕಳೆದ ಬಾರಿ ನೀರಿನ ಪ್ರಮಾಣ ಏರಿಕೆಯಾಗಿ ಬೋಟ್‍ಗಳಿಗೆ ಹಾನಿಯಾದ ಭಟ್ಕಳ ಬಂದರ್​ನ 74 ಬೋಟ್‍ಗಳಿಗೆ ಪರಿಹಾರ ಮಾಡಿಸಿಕೊಡಲಾಗಿದ್ದು, ಮುಂದೆಯೂ ಸಹ ಬೋಟ್​ಗಳಿಗೆ ಹಾನಿಯಾದಲ್ಲಿ ನನ್ನನ್ನು ಸಂಪರ್ಕಿಸಿ ಎಂದು ಭರವಸೆ ನೀಡಿದರು.

ಈ ವೇಳೆ, ಬಜೆಟ್ ಅಧಿವೇಶನದಲ್ಲಿ ಅಳ್ವೇಕೋಡಿ ಬಂದರ್ ಡ್ರಜ್ಜಿಂಗ್ ಕಾಮಗಾರಿಗೆ 5 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿಸಿದ ಹಿನ್ನೆಲೆ ಶಾಸಕ ಸುನೀಲ್​ ನಾಯ್ಕ ಅವರನ್ನು ಮೀನುಗಾರರ ಒಕ್ಕೂಟದಿಂದ ಸನ್ಮಾನಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.