ETV Bharat / state

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ: ಯುಪಿಯಿಂದ ಭಟ್ಕಳಕ್ಕೆ ಮರಳಿದ ವಿದ್ಯಾರ್ಥಿಗಳು - ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ

ಉತ್ತರ ಪ್ರದೇಶ ಲಖನೌನ ಖಾಸಗಿ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯಲ್ಲಿ ದೇಶದ ವಿವಿಧ ಭಾಗಗಳ ಸಾವಿರಾರು ಇಸ್ಲಾಂ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಸಾಕಷ್ಟು ಗೊಂದಲ ಉಂಟಾಗಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಭಟ್ಕಳಕ್ಕೆ ಬಂದಿದ್ದಾರೆ.

ಯುಪಿಯಿಂದ ಭಟ್ಕಳಕ್ಕೆ ಮರಳಿದ ವಿದ್ಯಾರ್ಥಿಗಳು
Bhatkal Students Returning from UP
author img

By

Published : Dec 20, 2019, 7:34 PM IST

ಭಟ್ಕಳ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಸಾಕಷ್ಟು ಗೊಂದಲ ಉಂಟಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ ಉತ್ತರ ಪ್ರದೇಶದ ಲಖನೌದ ನದ್ವಾ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ನಗರಕ್ಕೆ ಮರಳಿದ್ದಾರೆ.

ಯುಪಿಯಿಂದ ಭಟ್ಕಳಕ್ಕೆ ಮರಳಿದ ವಿದ್ಯಾರ್ಥಿಗಳು

ಉತ್ತರ ಪ್ರದೇಶ ಲಖನೌನ ಖಾಸಗಿ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯಲ್ಲಿ ದೇಶದ ವಿವಿಧ ಭಾಗಗಳ ಸಾವಿರಾರು ಇಸ್ಲಾಂ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಭಟ್ಕಳದಿಂದಲೂ ಸಹ ನೂರಾರು ವಿದ್ಯಾರ್ಥಿಗಳು ಎರಡು ವರ್ಷ ಉನ್ನತ ಶಿಕ್ಷಣಕ್ಕಾಗಿ ನದ್ವಾ ಕಾಲೇಜಿಗೆ ದಾಖಲಾಗಿದ್ದರು. ಆದ್ರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಲಖನೌನಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ಸುಮಾರು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿರುವ ಲಖನೌ, ದಾರುಲ್, ಉಲೂಮ್, ನದ್ವಾತುಲ್ ಆವರಣದಲ್ಲಿ ಕಲ್ಲು ತೂರಾಟ ನಡೆಯುತ್ತಿದೆ. ಇದರಿಂದ ಭಟ್ಕಳ ಮೂಲದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. 2020ರ ಜನವರಿ 5ರವರೆಗೆ ಲಖನೌದ ಕಾಲೇಜಿಗೆ ರಜೆ ಘೋಷಿಸಲಾಗಿರುವ ಹಿನ್ನೆಲೆಯಲ್ಲಿ ಭಟ್ಕಳದ ನೂರಾರು ವಿದ್ಯಾರ್ಥಿಗಳು ರೈಲಿನ ಮೂಲಕ ಇಂದು ನಗರ ತಲುಪಿದ್ದಾರೆ.

ನಗರಕ್ಕೆ ಆಗಮಿಸಿದ ಮೌಲಾನಾ ಸಿದ್ದೀಕ್ ಗಜಾಲಿ ಮಾಧ್ಯಮಗಳೊಂದಿಗೆ ಮಾತನಾಡಿ, ವಿದ್ಯಾಭ್ಯಾಸದ ಹಿನ್ನೆಲೆ ದೂರದ ಉತ್ತರ ಪ್ರದೇಶದ ಲಖನೌದಲ್ಲಿ ಅಧ್ಯಯನ ಮಾಡುತ್ತಿದ್ದೇವೆ. ಆದರೆ ಸದ್ಯಕ್ಕೆ ಅಲ್ಲಿನ ಪರಿಸ್ಥಿತಿ ಆತಂಕಕಾರಿಯಾಗಿದೆ. ದೇಶದಲ್ಲಿನ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುವುದು ನಮ್ಮ ಹಕ್ಕಾಗಿದ್ದು, ಅಲ್ಲಿನ ಪರಿಸ್ಥಿತಿ ಸಹಜ ಸ್ಥಿತಿಗೆ ಮರುಕಳಿಸಿದ ಮೇಲೆ ವಾಪಸ್​ ತೆರಳಲಿದ್ದೇವೆ ಎಂದರು.

Intro:ಭಟ್ಕಳ: ದೇಶಾದ್ಯಂತ ಸದ್ಯ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಸಾಕಷ್ಟು ಗೊಂದಲ ಉಂಟಾಗಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ
ನಡೆಯುತ್ತಿದ್ದು, ಉತ್ತರ ಪ್ರದೇಶದ ಲಖ್ವೌದಲ್ಲಿ ಹಿಂಸಾರೂಪ ಪಡೆದಿದ ಹಿನ್ನೆಲೆ ಲಕ್ನೋನ ನದ್ವಾ ಕಾಲೇಜಿನ ವಿದ್ಯಾರ್ಥಿಗಳು ಗುರುವಾರದಂದು ತಡರಾತ್ರಿ ರೈಲ್ವೆಯ ಮೂಲಕ ವಾಪಸ್ಸು ಭಟ್ಕಳಕ್ಕೆ ಮರಳಿದ್ದು, ಉಪನ್ಯಾಸಕರು ಸಹ ಊರಿನ ಹಾದಿ ಹಿಡಿದಿದ್ದಾರೆ.

Body:ದಾರುಲ್ ಉಲುಮ್ ನದ್ವತುಲ್ ಉಲಾಮದಲ್ಲಿ ವಾಸ್ಯಂಗ ಮಾಡುತ್ತಿರುವ ಉತ್ತರ ಪ್ರದೇಶ ಲಖ್ವೌನಲ್ಲಿನ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯಾಗಿದೆ. ದೇಶದ ವಿವಿಧ ಭಾಗಗಳ ಹಾಗೂ ವಿವಿಧ ದೇಶಗಳ ಸಾವಿರಾರು ಇಸ್ಲಾಂ ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಭಟ್ಕಳದಿಂದಲೂ ಸಹ ನೂರಾರು ವಿದ್ಯಾರ್ಥಿಗಳು ಎರಡು ವರ್ಷ ಉನ್ನತ ಶಿಕ್ಷಣಕ್ಕಾಗಿ ನದ್ವಾ ಕಾಲೇಜಿಗೆ ದಾಖಲಾಗಿದ್ದರು.
ಕೇಂದ್ರ ಸರಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಲಖ್ವನಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಪರಿಸ್ಥಿತಿ ತೀವ್ರ ಸ್ವರೂಪಕ್ಕೆ ಹೋಗಿದೆ. ಮಧ್ಯಾವಧಿಯ ರಜೆಯ ನಂತರ ನವೆಂಬರ 20 ರಿಂದ ಲಕ್ನೋ ನದ್ವಾ ತರಗತಿ ಆರಂಭವಾಗಿದ್ದು, ಇದೀಗ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ಆರಂಭಗೊಂಡಿದ್ದು, ಕೈ ಮೀರಿ ಹೋದ ಪರಿಸ್ಥಿತಿಯಿಂದ ವಾಹನ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಸುಮಾರು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿರುವ ಲಕ್ನೋ, ದಾರುಲ್, ಉಲುಮ್, ನದ್ವಾತುಲ್, ಆವರಣದಲ್ಲಿ ಕಲ್ಲು ತೂರಾಟ ನಡೆಯುತ್ತಿದೆ. ಇದರಿಂದ ಭಟ್ಕಳ ಮೂಲದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಮದರಸ ಆವರಣದಲ್ಲಿ ಪೊಲೀಸರ ಓಡಾಟದಿಂದ ಕಂಗೆಟ್ಟಿರುವ ಇವರೆಲ್ಲರೂ ಊರ ದಾರಿ ಹಿಡಿದು ಮನೆ ತಲುಪಿದ್ದಾರೆ.ಇದರಿಂದ 2020ರ ಜನವರಿ 5ರ ವರೆಗೆ ಕಾಲೇಜಿಗೆ ರಜೆ ಘೋಷಿಸಲಾಗಿದೆ.ಈ ಹಿನ್ನೆಲೆಯಲ್ಲಿ ಭಟ್ಕಳದ ನೂರಾರು ವಿದ್ಯಾರ್ಥಿಗಳು ಗುರುವಾರದಂದು ರಾತ್ರಿ ರೈಲಿನ ಮೂಲಕ ಭಟ್ಕಳ ತಲುಪಿದ್ದಾರೆ.

ಮೌಲಾನಾ ಸಿದ್ದಿಕ್ ಗಜಾಲಿ ಮಾತನಾಡಿ ದಾರುಲ್ ಉಲುಮ್ ನದ್ವತುಲ್ ಉಲಾಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ’‘ವಿದ್ಯಾಭ್ಯಾಸದ ಹಿನ್ನೆಲೆ ದೂರದ ಉತ್ತರ ಪ್ರದೇಶ ಲಖ್ವನಲ್ಲಿ ಶಿಕ್ಷಣ ಮಾಡುತ್ತಿದ್ದೇವೆ. ಆದರೆ ಸದ್ಯಕ್ಕೆ ಅಲ್ಲಿನ ಪರಿಸ್ಥಿತಿ ಭಯ ಹಾಗೂ ಆತಂಕಕಾರಿಯಾಗಿದೆ. ದೇಶದಲ್ಲಿನ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುವುದು ನಮ್ಮ ಹಕ್ಕಾಗಿದ್ದು, ಅಲ್ಲಿನ ಪರಿಸ್ಥಿತಿ ಮರುಕಳಿಸಿದ ಮೇಲೆ ವಾಪಸ್ಸು ತೆರಳಲಿದ್ದೇವೆ.
ಬೈಟ್: ಮೌಲಾನ ಸಿದ್ದಿಕ್ ಗಜಾಲಿConclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.