ETV Bharat / state

ಮೀಟರ್​​​ ಬಡ್ಡಿ ಸಾಲಕ್ಕೆ ಬೇಸತ್ತು ಶರಾವತಿ ನದಿಗೆ ಜಿಗಿದ ಅಂಗನವಾಡಿ ಕಾರ್ಯಕರ್ತೆ: ಮೃತದೇಹ ಪತ್ತೆ

author img

By

Published : Oct 12, 2019, 5:57 PM IST

Updated : Oct 12, 2019, 7:38 PM IST

ಮೀಟರ್​​ ಬಡ್ಡಿ ಸಾಲದ ಕಿರುಕುಳಕ್ಕೆ ನಲುಗಿ ಅಂಗನವಾಡಿ ಕಾರ್ಯಕರ್ತೆ ರೈಲ್ವೆ ಸೇತುವೆಯಿಂದ ಶರಾವತಿ ನದಿಗೆ ಜಿಗಿದು ಸಾವನ್ನಪ್ಪಿದ ಘಟನೆ ಹೊನ್ನಾವರ ತಾಲೂಕಿನ ಕಾಸರಕೋಡ ಕಳಸನಮೋಟೆಯಲ್ಲಿ ನಡೆದಿದೆ.

ಅಂಗನವಾಡಿ ಕಾರ್ಯಕರ್ತೆಯ ಮೃತ ದೇಹ ಮತ್ತೆ

ಹೊನ್ನಾವರ: ಮೀಟರ್​ ಬಡ್ಡಿ ಸಾಲದ ಕಿರುಕುಳಕ್ಕೆ ನಲುಗಿ ಅಂಗನವಾಡಿ ಕಾರ್ಯಕರ್ತೆ ರೈಲ್ವೆ ಸೇತುವೆಯಿಂದ ಶರಾವತಿ ನದಿಗೆ ಜಿಗಿದು ನೀರು ಪಾಲಾದ ಘಟನೆ ಹೊನ್ನಾವರ ತಾಲೂಕಿನ ಕಾಸರಕೋಡ ಕಳಸನಮೋಟೆಯಲ್ಲಿ ನಡೆದಿದೆ.

ಅಂಗನವಾಡಿ ಕಾರ್ಯಕರ್ತೆಯ ಮೃತದೇಹ ಪತ್ತೆ

ನೇತ್ರಾವತಿ ಪ್ರಭಾಕರ ಅಂಬಿಗ ನದಿಗೆ ಹಾರಿ ಸಾವನ್ನಪ್ಪಿದ ಮಹಿಳೆ ಎನ್ನಲಾಗಿದೆ. ಈಕೆ ಕಳಸನಮೋಟೆ ಅಂಬಿಗರಕೇರಿಯ ಅಂಗನವಾಡಿಯಲ್ಲಿ ನಿನ್ನೆ ಮಧ್ಯಾಹ್ನ 11 ಗಂಟೆಯವರೆಗೆ ಕರ್ತವ್ಯದಲ್ಲಿದ್ದು, ನಂತರ ನದಿಗೆ ಹಾರಿದ್ದಾರೆ ಎನ್ನಲಾಗಿದೆ. ಕಾಸರಗೋಡ ಗ್ರಾಮ ಪಂಚಾಯತಿ ಸದಸ್ಯೆಯೊಬ್ಬರ ಬಳಿ ನೇತ್ರಾವತಿ ಬಡ್ಡಿಗೆ ಹಣ ಪಡೆದಿದ್ದರಂತೆ. ಸರಿಯಾಗಿ ಬಡ್ಡಿ ಕೊಡದೇ ಇದ್ದ ಕಾರಣ ಗ್ರಾಪಂ ಸದಸ್ಯೆಯ ಕಡೆಯವರು ಗುರುವಾರ ರಾತ್ರಿ ಮನೆಗೆ ಮತ್ತು ಶುಕ್ರವಾರ ಅಂಗನವಾಡಿ ಕೇಂದ್ರಕ್ಕೆ ಬಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಕಾರಣದಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮನೆಯವರು ದೂರಿದ್ದಾರೆ.

ಪೊಲೀಸ್ ಹಾಗೂ ಅಗ್ನಿಶಾಮಕ ದಳ, ಸ್ಥಳೀಯ ಮೀನುಗಾರರು ಹುಡುಕಾಟ ನಡೆಸಿದ್ದು, ಇಂದು ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಹೊನ್ನಾವರ ಠಾಣೆಯ ಸಿಪಿಐ ವಸಂತ ಆಚಾರಿ, ಪಿಎಸ್‍ಐ ಸಾವಿತ್ರಿ ನಾಯಕ ಹಾಗೂ ಮಂಕಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Intro:ಹೊನ್ನಾವರ:ಬಡ್ಡಿ ಸಾಲದ ಕಿರುಕುಳಕ್ಕೆ ನಲುಗಿದ ವಿವಾಹಿತ ಅಂಗನವಾಡಿ ಕಾರ್ಯಕರ್ತೆ ರೈಲ್ವೆ ಸೇತುವೆಯಿಂದ ಶರಾವತಿ ನದಿಗೆ ಜಿಗಿದು ನೀರುಪಾಲಾದ ಘಟನೆ ತಾಲೂಕಿನ ಕಾಸರಕೋಡದ ಕಳಸನಮೋಟೆಯಲ್ಲಿ ಶುಕ್ರವಾರ ನಡೆದಿದೆ.Body:ಹೊನ್ನಾವರ:ಬಡ್ಡಿ ಸಾಲದ ಕಿರುಕುಳಕ್ಕೆ ನಲುಗಿದ ವಿವಾಹಿತ ಅಂಗನವಾಡಿ ಕಾರ್ಯಕರ್ತೆ ರೈಲ್ವೆ ಸೇತುವೆಯಿಂದ ಶರಾವತಿ ನದಿಗೆ ಜಿಗಿದು ನೀರುಪಾಲಾದ ಘಟನೆ ತಾಲೂಕಿನ ಕಾಸರಕೋಡದ ಕಳಸನಮೋಟೆಯಲ್ಲಿ ಶುಕ್ರವಾರ ನಡೆದಿದೆ.

ನದಿಗೆ ಹಾರಿದ ಮಹಿಳೆ ನೇತ್ರಾವತಿ ಪ್ರಭಾಕರ ಅಂಬಿಗ. ಈಕೆ ಕಳಸನಮೋಟೆ ಅಂಬಿಗರಕೇರಿಯ ಅಂಗನವಾಡಿಯಲ್ಲಿ ಶುಕ್ರವಾರ ಮಧ್ಯಾಹ್ನ 11 ಗಂಟೆಯ ವರೆಗೆ ಕರ್ತವ್ಯದಲ್ಲಿದ್ದ ನಂತರ ನದಿಗೆ ಹಾರಿ ಕಣ್ಮಮರೆಯಾಗಿದ್ದಾಳೆ ಎನ್ನಲಾಗಿದೆ. ಶುಕ್ರವಾರ ರಾತ್ರಿಯ ವರೆಗೆ ಶೋಧ ಕಾರ್ಯ ನಡೆದಿದೆ.

ಕಾಸರಗೋಡು ಗ್ರಾಮ ಪಂಚಾಯತಿ ಸದಸ್ಯೆಯೊಬ್ಬರ ಬಳಿ ಬಡ್ಡಿಗೆ ಹಣ ಪಡೆದಿದ್ದು ಅದನ್ನು ಸರಿಯಾಗಿ ಕೊಡದೇ ಇದ್ದ ಕಾರಣ ಗ್ರಾ.ಪಂ ಸದಸ್ಯೆಯ ಕಡೆಯವರು ಗುರುವಾರ ರಾತ್ರಿ ಮನೆಗೆ ಮತ್ತು ಶುಕ್ರವಾರ ಅಂಗನವಾಡಿ ಕೇಂದ್ರಕ್ಕೆ ಬಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.ಈ ಕಾರಣದಿಂದ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾಗಲು ಕಾರಣ ಎಂದು ಮನೆಯವರು ದೂರಿದ್ದಾರೆ. ಪೋಲಿಸ್ ಹಾಗೂ ಅಗ್ನಿಶಾಮಕದಳ, ಸ್ಥಳಿಯ ಮೀನುಗಾರರು ಹುಡುಕಾಟ ನಡೆಸುತ್ತಿದ್ದು ರಾತ್ರಿಯ ವರೆಗೂ ದೇಹ ಪತ್ತೆಯಾಗಿಲ್ಲ. ಹೊನ್ನಾವರ ಠಾಣೆಯ ಸಿಪಿಐ ವಸಂತ ಆಚಾರಿ, ಪಿಎಸ್‍ಐ ಸಾವಿತ್ರಿ ನಾಯಕ ಹಾಗೂ ಮಂಕಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಶೋಧಕಾರ್ಯಕ್ಕೆ ಮುಂದಾದ ಪತಿ: ತನ್ನ ಪತ್ನಿ ಶರಾವತಿ ನದಿಗೆ ಹಾರಿದ ಸುದ್ದಿ ತಿಳಿದ ತಕ್ಷಣ ದೋಣಿ ಸಮೇತ ನದಿಯಲ್ಲಿ ಕಣ್ಮರೆಯಾದ ಪತ್ನಿಗಾಗಿ ಪತಿ ಪ್ರಭಾಕರ ಅಂಬಿಗ ದುಖಃದ ಮಡುವಿನಲ್ಲು ಒಬ್ಬಂಟಿಯಾಗಿ ಹುಡುಕಾಟ ನಡೆಸುತ್ತಿರುವ ದ್ರಶ್ಯ ಮನಕಲಕುವಂತಿತ್ತು.<

ಕಳೆದ ಕೆಲ ದಿನದ ಹಿಂದೆ ಗ್ರಾ.ಪಂ.ಸದಸ್ಯೆಯೊಬ್ಬಳ ಬಳಿ ಸಾಲ ಮಾಡಿದ್ದು ಒಂದು ವಾರದಿಂದ ಮನೆಗೆ ಬಂದು ಸಾಲ ಬಡ್ಡಿ ತೀರಿಸುವಂತೆ ಹೇಳುತ್ತಿದ್ದರು. ಗುರುವಾರ ಬಂದು ಜೀವ ಬೆದರಿಕೆ ಹಾಕಿರುವುದಲ್ಲದೆ ಇಂದು ಅಂಗನವಾಡಿಗೆ ಬಂದು ಹಲ್ಲೆ ಮಾಡಿ, ಅವಾಚ್ಯ ಶಬ್ದದಿಂದ ನಿಂದಿಸಿರುವುದಲ್ಲದೇ ಸಾಲ ಬಡ್ಡಿ ನೀಡುವಂತೆ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತು ಶರಾವತಿ ನದಿಗೆ ಹಾರಿದ್ದಾರೆ ಎಂದು ನೇತ್ರಾವತಿ ಅವರ ಪತಿ ಪ್ರಭಾಕರ ಅಂಬಿಗ ದೂರಿದ್ದಾರೆ.
Conclusion:ಉದಯ ನಾಯ್ಕ ಭಟ್ಕಳ
Last Updated : Oct 12, 2019, 7:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.