ETV Bharat / state

ಅನಂತಕುಮಾರ್​​​ ಹೆಗಡೆಗೆ ಅಪರಿಚಿತ ವ್ಯಕ್ತಿಯಿಂದ ಕೊಲೆ ಬೆದರಿಕೆ

author img

By

Published : Apr 21, 2019, 7:45 AM IST

ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ಅನಂತಕುಮಾರ್​​​ ಹೆಗಡೆಗೆ ಅಪರಿಚಿತ ವ್ಯಕ್ತಿವೋರ್ವ ಕೊಲೆ ಬೆದರಿಕೆ ಹಾಕಿದ್ದಾನೆ. ಇಂಟರ್​ನೆಟ್ ಕಾಲ್ ಮೂಲಕ ಕೊಲೆ ಬೆದರಿಕೆ ಹಾಕಿದ್ದು, ಈ ಸೂಕ್ತ ತನಿಖೆ ನಡೆಸಿ ಭದ್ರತೆ ನೀಡುವಂತೆ ಹೆಗಡೆ ಅವರ ಆಪ್ತ ಕಾರ್ಯದರ್ಶಿ ಶಿರಸಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಅನಂತಕುಮಾರ್​​​ ಹೆಗಡೆ

ಶಿರಸಿ : ಕೇಂದ್ರ ಸಚಿವ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್​​​ ಹೆಗಡೆಗೆ ಅಪರಿಚಿತ ವ್ಯಕ್ತಿವೋರ್ವ ಇಂಟರ್ ನೆಟ್ ಕಾಲ್ ಮೂಲಕ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಭದ್ರತೆ ನೀಡುವಂತೆ ಹೆಗಡೆ ಅವರ ಆಪ್ತ ಕಾರ್ಯದರ್ಶಿ ಶಿರಸಿಯಲ್ಲಿ ದೂರು ನೀಡಿದ್ದಾರೆ.

ಮಧ್ಯರಾತ್ರಿ 12-30ಕ್ಕೆ ಅನಂತಕುಮಾರ್​​​ ಹೆಗಡೆ ಮನೆಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಲ್ಲದೆ, ಅವಾಚ್ಯ ಪದಗಳಿಂದ ದುಷ್ಕರ್ಮಿ ನಿಂದಿಸಿದ್ದಾನೆ ಎಂದು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಹೆಗಡೆ ಅವರ ಆಪ್ತ ಕಾರ್ಯದರ್ಶಿ ಸುರೇಶ್​​​ ದೂರು ದಾಖಲಿಸಿದ್ದಾರೆ.

2233 ನಂಬರ್ ಮೂಲಕ ಮನೆಗೆ ಕರೆ ಮಾಡಲಾಗಿದೆ. ಅನಂತಕುಮಾರ್​ ಪತ್ನಿ ಶ್ರೀರೂಪಾ ಈ ಕರೆ ಸ್ವೀಕರಿಸಿದ್ದು, ಒಂದು ಬಾರಿ ತಪ್ಪಿಸಿಕೊಂಡಿದ್ದೀರ. ಮತ್ತೆ ಮಿಸ್ ಆಗುವುದಿಲ್ಲ. ನಿಮಗೆ ಭದ್ರತೆ ನೀಡಿದ ಸೆಕ್ಯುರಿಟಿಯವರನ್ನೂ ಬಿಡುವುದಿಲ್ಲ. ಯಾವ ಪೊಲೀಸ್​ಗೆ ಬೇಕಾದ್ರು ಹೇಳಿಕೊಳ್ಳಿ. ನಮಗೆ ಏನೂ ಮಾಡಲಾಗುವುದಿಲ್ಲ ಎಂದು ಅವಾಚ್ಯ ಶಬ್ದದಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಪೆಬ್ರವರಿ 10 ರಂದು ಸಹ ಅಪರಿಚಿತ ವ್ಯಕ್ತಿವೋರ್ವ ಇದೇ ರೀತಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ.

Intro:ಶಿರಸಿ :
ಕೇಂದ್ರ ಸಚಿವ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆಗೆ ಅಪರಿಚಿತ ವ್ಯಕ್ತಿಯೊಬ್ಬ ಇಂಟರ್ ನೆಟ್ ಕಾಲ್ ಮೂಲಕ ಕೊಲೆ ಬೆದರಿಕೆ ಹಾಕಿದ್ದು, ಸೂಕ್ತ ತನಿಖೆ ನಡೆಸಿ ಭದ್ರತೆ ನೀಡುವಂತೆ ಆಪ್ತ ಕಾರ್ಯದರ್ಶಿ ಶಿರಸಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Body:ಕಳೆದ ರಾತ್ರಿ ೧೨-೩೦ ಕ್ಕೆ ಅನಂತಕುಮಾರ ಹೆಗಡೆ ಮನೆಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ಧದಿಂದ ನಿಂದನೆ ಮಾಡಲಾಗಿದೆ ಎಂದು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಆಪ್ತ ಕಾರ್ಯದರ್ಶಿ ಸುರೇಶ್ ರಿಂದ ದೂರು ದಾಖಲಿಸಿದ್ದಾರೆ.‌Conclusion:೨೨೩೩ ನಂಬರ್ ಮೂಲಕ ಮನೆಗೆ ಕರೆ ಮಾಡಲಾಗಿದೆ. ಹೆಗಡೆ ಪತ್ನಿ ಶ್ರೀರೂಪಾ ಕರೆ ಸ್ವೀಕರಿಸಿದ್ದು,
ಒಂದುಸಾರಿ ತಪ್ಪಿಸಿಕೊಂಡಿದ್ದೀರ ಮತ್ತೆ ಮಿಸ್ ಆಗುವುದಿಲ್ಲ. ನಿಮಗೆ ಭದ್ರತೆ ನೀಡಿದ ಸಕ್ಯುರಿಟಿಯವರನ್ನೂ ಬಿಡುವುದಿಲ್ಲ.
ಯಾವ ಪೊಲೀಸ್ ನಾಯಿಗೂ ಹೇಳಿಕೊಳ್ಳಿ ನಮಗೆ ಏನೂ ಮಾಡಲಾಗುವುದಿಲ್ಲ ಎಂದು ಅವಾಚ್ಚ್ಯ ಶಬ್ದದಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಳೆದ ಪೆಭ್ರವರಿ ೧೦ ರಂದು ಸಹ ಅಪರಿಚಿತ ವ್ಯಕ್ತಿ ಯೊರ್ವ ಇದೇ ರೀತಿ ವ್ಯಕ್ತಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ.
.......
ಸಂದೇಶ ಭಟ್ ಶಿರಸಿ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.