ಕಾರವಾರ: ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಗ್ಗೆಯಿಂದಲೂ ಮತದಾನ ಚುರುಕಾಗಿದ್ದು, ಯಲ್ಲಾಪುರ ಮತಗಟ್ಟೆ ಸಂಖ್ಯೆ 38 ರಲ್ಲಿ 82 ವರ್ಷದ ವೃದ್ಧೆವೋರ್ವರು ತಮ್ಮ ಹಕ್ಕು ಚಲಾಯಿಸಿದರು.
ಪಟ್ಟಣದ ನರೋನಾ ಶಿಪ್ರಿಯಾನ (82) ಗಾಲಿ ಕುರ್ಚಿಯಲ್ಲಿ ಮನೆಯವರ ನೆರವಿನೊಂದಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.