ETV Bharat / state

ಅಡಿಕೆ ಖರೀದಿಸಿ ಹಣ ಕೊಡದೆ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್ - Sirsi police latest news

ಶಿರಸಿ ನಗರದಲ್ಲಿ ಅಡಿಕೆ ಖರೀದಿಸಿ, ಅಲ್ಪ ಪ್ರಮಾಣದ ಹಣ ಕೊಟ್ಟು ನಂತರ ಉಳಿದ ಹಣ ಕೊಡುತ್ತೇನೆ ಎಂದು ಹೇಳಿ ವಂಚಿಸಿದ ಆರೋಪಿಯನ್ನು ಶಿರಸಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

Arrest
Arrest
author img

By

Published : Oct 24, 2020, 10:09 AM IST

ಶಿರಸಿ : ನಗರದಲ್ಲಿ ಅಡಿಕೆ ಖರೀದಿಸಿ ಕಾಲು ಭಾಗ ಮಾತ್ರ ಹಣ ಕೊಟ್ಟು ಉಳಿದ ಹಣ ನಂತರ ನೀಡುತ್ತೇನೆ ಎಂದು ಹೇಳಿ ತಲೆಮರೆಸಿಕೊಂಡಿದ್ದ ವ್ಯಕ್ತಿಯೋರ್ವನನ್ನು ಶಿರಸಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಯಶವಂತಪುರದ ಮೈಲಾರಿ ಆಗ್ರೋ ಪ್ರೊಡಕ್ಟಿವ್ ಮ್ಯಾನೇಜಿಂಗ್ ಡೈರೆಕ್ಟರ್ ಮಹೇಶ ಬಂಧಿತ ಆರೋಪಿ. ಈತ ಶಿರಸಿ ನಗರದಲ್ಲಿ ಅಡಿಕೆ ಖರೀದಿಸಿ, ಅಲ್ಪ ಪ್ರಮಾಣದ ಹಣ ಕೊಟ್ಟು ಉಳಿದ ಹಣ ಕೊಡುತ್ತೇನೆ ಎಂದು ಹೇಳಿ ಅಡಿಕೆ ಕೊಂಡೊಯ್ದು ನಂತರ ಪರಾರಿಯಾಗಿದ್ದ.

ಈ ಕುರಿತು ನಗರ ಮತ್ತು ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದ ಪೊಲೀಸರು ಬೆಂಗಳೂರಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಈತ ಎರಡು ವರ್ಷದಿಂದ ಅಡಿಕೆ ಖರೀದಿಸಿ ಹಣ ಕೊಡದೆ ತಲೆಮರೆಸಿಕೊಂಡಿದ್ದ. ಜೊತೆಗೆ ಚೆಕ್‌ಬೌನ್ಸ್ ಪ್ರಕರಣ ಸಹ ಶಿರಸಿ ನ್ಯಾಯಾಲಯದಲ್ಲಿದ್ದು, ಹಲವು ಬಾರಿ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.