ಕಾರವಾರ: ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿದ್ದು, ಡೀಸೆಲ್ ತುಂಬಿದ್ದ ಟ್ಯಾಂಕ್ಗೆ ಬೆಂಕಿ ತಗುಲಿದ ಪರಿಣಾಮ ಧಗಧಗನೆ ಹೊತ್ತಿ ಉರಿದಿದೆ.
ಭಟ್ಕಳ ತಾಲೂಕಿನ ಮುರುಡೇಶ್ವರ ಸೂಳೆಬೀಳುವಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ದುರ್ಘಟನೆ ನಡೆದಿದ್ದು, ಘರ್ಷಣೆಯ ರಭಸಕ್ಕೆ ಎರಡೂ ಲಾರಿಗಳಿಗೂ ಬೆಂಕಿ ಆವರಿಸಿಕೊಂಡಿದೆ. ಈ ವೇಳೆ ಅದೃಷ್ಟವಾಶಾತ್ ಲಾರಿಯಲ್ಲಿದ್ದ ಚಾಲಕರು ಹಾಗೂ ಕ್ಲೀನಲ್ ಅಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇವರು ಸ್ಥಳಕ್ಕೆ ಆಗಮಿಸಿವು ಮುನ್ನ ಲಾರಿಯ ಬಹುಬಾಗ ಸುಟ್ಟು ಕರಕಲಾಗಿವೆ.