ETV Bharat / state

ಭಟ್ಕಳದಲ್ಲಿ ಟೆಂಪೋ-ಐರಾವತ ಬಸ್ ನಡುವೆ ಅಪಘಾತ.. 20ಕ್ಕೂ ಹೆಚ್ಚು ಮಂದಿಗೆ ಗಾಯ - ಅಪಘಾತ

ಭಟ್ಕಳ ತಾಲೂಕಿನ ತೆರ್ನಮಕ್ಕಿ ಚರ್ಚ್ ಸಮೀಪ ಟೆಂಪೋ- ಐರಾವತ ಬಸ್‌ ನಡುವೆ ಅಪಘಾತ ಸಂಭವಿಸಿದೆ. ಬಸ್​ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Accident between tempo and Airavat bus
ಟೆಂಪೋ-ಐರಾವತ ಬಸ್ ನಡುವೆ ಅಪಘಾತ
author img

By

Published : Oct 1, 2022, 12:12 PM IST

ಭಟ್ಕಳ(ಉತ್ತರ ಕನ್ನಡ): ತಾಲೂಕಿನ ತೆರ್ನಮಕ್ಕಿ ಚರ್ಚ್ ಸಮೀಪ ಕೆಎಸ್​ಆರ್​ಟಿಸಿ ವೋಲ್ವೋ ಬಸ್ ಹಾಗೂ ಮಹೀಂದ್ರಾ ಪ್ಯಾಸೆಂಜರ್ ಟೆಂಪೋ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

Accident between tempo and Airavat bus
ಟೆಂಪೋ- ಐರಾವತ ಬಸ್‌ ನಡುವೆ ಅಪಘಾತ

ಕಾರವಾರದಿಂದ ಮಂಗಳೂರು ಕಡೆಗೆ ಹೊರಟಿದ್ದ ಐರಾವತ ಬಸ್ ಹೊನ್ನಾವರದಿಂದ ಭಟ್ಕಳ ಕಡೆಗೆ ಬರುತ್ತಿದ್ದ ಟೆಂಪೋಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಸ್‌ನ ಮುಂಬದಿ ಸೀಟ್‌ನಲ್ಲಿ ಕುಳಿತ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Accident between tempo and Airavat bus
ಟೆಂಪೋ- ಐರಾವತ ಬಸ್‌ ನಡುವೆ ಅಪಘಾತ

ಬಸ್​ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಡಿಕ್ಕಿಯ ರಭಸಕ್ಕೆ ಬಸ್ ಮುಂಭಾಗ, ಎಡಭಾಗ ಹಾಗೂ ಟೆಂಪೋ ಹಿಂಭಾಗದಲ್ಲಿ ಭಾರಿ ಹಾನಿಯಾಗಿದೆ. ಸ್ಥಳಕ್ಕೆ ಮುರುಡೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟೆಂಪೋ- ಐರಾವತ ಬಸ್‌ ನಡುವೆ ಅಪಘಾತ

ಅಪಘಾತದ ವಿಷಯ ತಿಳಿದು ಭಟ್ಕಳ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಬಂದು ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಕೂಡ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಮಧ್ಯರಾತ್ರಿಯಲ್ಲಿ ಜನರ ಮೇಲೆ ಗುಂಡಿನ ದಾಳಿ.. ಓರ್ವ ಸಾವು, ಮೂವರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.