ETV Bharat / state

ಗುತ್ತಿಗೆದಾರನಿಂದ ಲಂಚ ಸ್ವೀಕಾರ: ಎಸಿಬಿ ದಾಳಿ ನಡೆಸಿ ಇಬ್ಬರ ಬಂಧನ - ACB latest News

ಗುತ್ತಿಗೆದಾರನಿಗೆ ಬಿಲ್ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಿದ್ದು, ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

sirsi
ಲಂಚ ಸ್ವೀಕಾರ
author img

By

Published : Sep 7, 2021, 7:28 AM IST

ಶಿರಸಿ: ಕಟ್ಟಡ ನಿರ್ಮಿಸಿದ್ದ ಗುತ್ತಿಗೆದಾರನಿಗೆ ಬಿಲ್ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಶಿರಸಿ ನಗರದ ಜಿಲ್ಲಾ ಪಂಚಾಯತ್​ನಲ್ಲಿ ನಡೆದಿದೆ.

ಶಿರಸಿ ಜಿಲ್ಲಾ ಪಂಚಾಯತ್​ನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯದುನಂದನ್ ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸದಲ್ಲಿದ್ದ ಸುಬ್ರಹ್ಮಣ್ಯ ಬಂಧಿತ ಆರೋಪಿಗಳು. ಶಿವಮೊಗ್ಗದ ಸುನಿಲ್ ಎಂಬ ಗುತ್ತಿಗೆದಾರನಿಂದ 12 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ.

ಗುತ್ತಿಗೆದಾರನಿಗೆ 4 ಲಕ್ಷ ರೂ.ಗಳ ಬಿಲ್ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆದಿದೆ. ಘಟನೆಯಲ್ಲಿ ಜಿಲ್ಲಾ ಪಂಚಾಯತ್​ ಕಾರ್ಯನಿರ್ವಾಹಕ ಅಭಿಯಂತರರ ಕೈವಾಡ ಇರಬಹುದು ಎಂಬ ಶಂಕೆಯನ್ನು ಎಸಿಬಿ ವ್ಯಕ್ತಪಡಿಸಿದ್ದು, ಅವರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಡಿಎಸ್​ಪಿ ವಿರೇಶ್​ ನೇತೃತ್ವದಲ್ಲಿ ದಾಳಿ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.