ETV Bharat / state

ರೂಮಿನ ಪಕ್ಕವೇ ಬಾಂಬ್ ಸದ್ದು: ತಂದೆಗೆ ವಿಡಿಯೋ ಕಾಲ್​ ಮಾಡಿದ ಉಕ್ರೇನ್​ನಲ್ಲಿ ಸಿಲುಕಿದ ಕಾರವಾರದ ಯುವತಿ - ಉಕ್ರೇನ್​ನಲ್ಲಿ ಸಿಲುಕಿದ ಕಾರವಾರದ ಯುವತಿ

ಯುದ್ಧಪೀಡಿತ ಉಕ್ರೇನ್​ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿನಿಯೊಬ್ಬರು ತಮ್ಮ ತಂದೆಗೆ ವಿಡಿಯೋ ಕರೆ ಮಾಡಿ ತಾವು ತಂಗಿರುವ ಪ್ರದೇಶದ ಪಕ್ಕದಲ್ಲೇ ಬಾಂಬ್​ ಸದ್ದು ಕೇಳಿ ಬಂದಿದೆ ಎಂದು ತಿಳಿಸಿದ್ದಾಳೆ.

young-woman
ಕಾರವಾರದ ಯುವತಿ
author img

By

Published : Feb 26, 2022, 7:23 PM IST

Updated : Feb 26, 2022, 7:49 PM IST

ಕಾರವಾರ: ಯುದ್ಧಪೀಡಿತ ಉಕ್ರೇನ್​ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿನಿಯೊಬ್ಬರು ತಮ್ಮ ತಂದೆಗೆ ವಿಡಿಯೋ ಕರೆ ಮಾಡಿ ತಾವು ತಂಗಿರುವ ಪ್ರದೇಶದ ಪಕ್ಕದಲ್ಲೇ ಬಾಂಬ್​ ಸದ್ದು ಕೇಳಿ ಬಂದಿದೆ ಎಂದು ತಿಳಿಸಿದ್ದಾಳೆ.

ಮುಂಡಗೋಡ ಮೂಲದ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಪಕೀರಪ್ಪ ಹೊಸಮನಿ ಅವರ ಪುತ್ರಿ ಉಕ್ರೇನ್​ನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದು, ಇದೀಗ ರಷ್ಯಾ- ಉಕ್ರೇನ್ ನಡುವಿನ ಯುದ್ಧದಿಂದಾಗಿ ಆತಂಕಕ್ಕೊಳಗಾಗಿದ್ದಾರೆ. ಭಾರತಕ್ಕೆ ಮರಳಲು ಸಾಧ್ಯವಾಗದೇ ಉಕ್ರೇನ್​ನಲ್ಲಿ ಸಿಲುಕಿರುವ ವಿದ್ಯಾರ್ಥಿನಿ ಸ್ನೇಹಾ ಫಕೀರಪ್ಪ ಅವರಿಗೆ ವಿಡಿಯೋ ಕಾಲ್ ಮೂಲಕ ಪರಿಸ್ಥಿತಿ ವಿವರಿಸಿದ್ದಾಳೆ.

ತಂದೆಗೆ ವಿಡಿಯೋ ಕಾಲ್​ ಮಾಡಿದ ಉಕ್ರೇನ್​ನಲ್ಲಿ ಸಿಲುಕಿದ ಕಾರವಾರದ ಯುವತಿ

ನಾವು ತಂಗಿರುವ ಪ್ರದೇಶದ ಪಕ್ಕವೇ ಬಾಂಬ್ ಸ್ಫೋಟವಾಗಿದೆ. ಅಪ್ಪಾ ಭಯವಾಗುತ್ತಿದೆ. ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ಸದ್ಯಕ್ಕೆ ರೂಮಿನಲ್ಲೇ ಉಳಿದುಕೊಂಡಿದ್ದೇವೆ. ಇಲ್ಲಿಂದ ಹೊರಗೆ ಬರಬೇಡಿ, ಸೇಫ್​ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇದುವರೆಗೂ ಬಂಕರ್‌ನಲ್ಲಿ ಉಳಿದುಕೊಂಡಿದ್ದೆವು. ಉಸಿರಾಟಕ್ಕೆ ತೊಂದರೆ ಉಂಟಾಗಿ ಮತ್ತೆ ನಮ್ಮ ರೂಮಿಗೆ ವಾಪಸ್​ ಬಂದಿದ್ದೇವೆ ಎಂದು ತಿಳಿಸಿದ್ದಾಳೆ. ಮಗಳ ಮಾತು ಕೇಳಿ ಪಾಲಕರು ಭಯಗೊಂಡಿದ್ದಾರೆ.

ಓದಿ: ರಷ್ಯಾ ದಾಳಿ ಮಧ್ಯೆ ಆಶ್ರಯತಾಣದಲ್ಲಿ ಮಗುವಿಗೆ ಜನ್ಮ ನೀಡಿದ ಉಕ್ರೇನ್​ ಮಹಿಳೆ!

Last Updated : Feb 26, 2022, 7:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.