ಶಿರಸಿ: ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಪ್ರಸಿದ್ಧ ಧರ್ಮಾ ಜಲಾಶಯಕ್ಕೆ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ರಾಜ್ಯ ಕಿರಿಯರ ಕಬಡ್ಡಿ ತಂಡದ ಆಟಗರಾನಾಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮುಂಡಗೋಡ ತಾಲೂಕು ಮಳಗಿ ಗ್ರಾಮದ ಶಶಾಂಕ ರವಿ ನಾಯ್ಕ (16) ಮೃತ ಬಾಲಕ. ಬಾಲಕ ಮೃತನಾಗುತ್ತಿದ್ದಂತೆ ಸ್ನೇಹಿತರು ಹೆದರಿ ಅಲ್ಲಿಂದ ಓಡಿಹೋಗಿದ್ದು, ಯಾರಿಗೂ ಈ ವಿಷಯ ತಿಳಿಸಿಲ್ಲ. ಇದರಿಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಭಾನುವಾರ ಘಟನೆ ನಡೆದಿದ್ದು, ಇಂದು ಬೆಳಗ್ಗೆ ವಿಯಷ ಬೆಳಕಿಗೆ ಬಂದಿದೆ. ತಕ್ಷಣವೇ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿ, ಪೊಲೀಸರ ಸಹಕಾರದೊಂದಿಗೆ ಮೃತದೇಹವನ್ನು ಜಲಾಶಯದಿಂದ ಹೊರತೆಗೆದಿದ್ದಾರೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.