ETV Bharat / state

ತಾಯಿ ಎದುರೇ ಎಮ್ಮೆಕರು ನುಂಗಿದ ಹೆಬ್ಬಾವು... ಕರುಳು ಹಿಂಡುವಂತಿದೆ ದೃಶ್ಯ

9 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವೊಂದು ಒಂದು ದಿನದ ಹಿಂದೆ ಜನಿಸಿದ ಎಮ್ಮೆಕರುವನ್ನು ಭಕ್ಷಿಸಲು ದಿನವಿಡೀ ಯತ್ನಿಸಿದ್ದು, ತಾಯಿ ಎಮ್ಮೆ ಅಸಹಾಯಕವಾಗಿ ನಿಂತ ದೃಶ್ಯ ಕರುಳು ಹಿಂಡುವಂತಿತ್ತು.

ತಾಯಿಯ ಎದುರೇ ಎಮ್ಮೆಕರು ನುಂಗಿದ ಹೆಬ್ಬಾವು
author img

By

Published : Sep 16, 2019, 11:36 PM IST

ಕಾರವಾರ: 9 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವೊಂದು ಒಂದು ದಿನದ ಹಿಂದೆಯಷ್ಟೇ ಜನಿಸಿದ್ದ ಎಮ್ಮೆಕರುವನ್ನು ಕೊಂದು, ಅದನ್ನು ಭಕ್ಷಿಸಲು ದಿನವಿಡಿ ವಿಫಲ ಯತ್ನ ನಡೆಸಿರುವ ಘಟನೆ ಇಲ್ಲಿನ ಸೋನಾರವಾಡದಲ್ಲಿ ನಡೆದಿದೆ.

ತಾಯಿಯ ಎದುರೇ ಎಮ್ಮೆಕರು ನುಂಗಿದ ಹೆಬ್ಬಾವು

ಸೋನಾರವಾಡದ ಬಳಿ ಪಾಳು ಬಿದ್ದ ಗದ್ದೆ ಬಯಲಿನಲ್ಲಿ ಎಮ್ಮೆಯೊಂದು ಒಂದು ದಿನದ ಹಿಂದೆ ಜನಿಸಿದ್ದ ಕರುವಿನೊಂದಿಗೆ ಮೇಯಲು ತೆರಳಿತ್ತು. ಈ ವೇಳೆ ಹೆಬ್ಬಾವು ಕರುವಿನ ಮೇಲೆ ದಾಳಿ ಮಾಡಿದ್ದು, ಬೆಳಗ್ಗೆಯಿಂದಲೂ ನೀರು ತುಂಬಿದ ಗದ್ದೆಯಲ್ಲಿ ಕರು ಹೆಬ್ಬಾವಿನ ಬಾಯಿಗೆ ಸಿಲುಕಿ ಒದ್ದಾಡುತ್ತಿತ್ತು. ಎಮ್ಮೆ ಕೂಡ ತನ್ನ ಕರುವನ್ನು ಉಳುಸಿಕೊಳ್ಳಲು ಪ್ರಯತ್ನಿಸಿತ್ತು. ಆದರೆ ಇದನ್ನು ದೂರದಿಂದಲೇ ನೋಡಿದ್ದ ಸ್ಥಳೀಯರು ಎಮ್ಮೆಕರುವನ್ನು ರಕ್ಷಣೆಗೆ ಧಾವಿಸಿರಲಿಲ್ಲ.

ಕೊನೆಗೆ ಸಂಜೆಯಾದರೂ ಎಮ್ಮೆ ಅಲ್ಲಿಯೇ ನಿಂತಿರುವುದನ್ನು ಗಮನಿಸಿ ಕೆಲವರು ಹೋಗಿ ನೋಡಿದಾಗ ಅಷ್ಟರಲ್ಲಿ ಕರು ಸಾವನ್ನಪ್ಪಿತ್ತು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆಗ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕರುವಿನ ತಲೆ ನುಂಗಿದ್ದ ಹೆಬ್ಬಾವನ್ನು ಬೆರ್ಪಡಿಸಿ ಸೆರೆ ಹಿಡಿದಿದ್ದಾರೆ. ಹಾವನ್ನು ಕಾಡಿಗೆ ಬಿಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಆಗ ತಾನೆ ಜನಿಸಿದ ಕರುವನ್ನು ಕಳೆದುಕೊಂಡ ತಾಯಿ ಎಮ್ಮೆಯ ಮೂಖ ರೋಧನೆ ನೆರೆದವರ ಕರಳು ಹಿಂಡುವಂತಿತ್ತು.

Intro:Body:ಎಮ್ಮೆ ಎದುರೇ ದಿನದ ಹಿಂದೆ ಜನಿಸಿದ ಎಮ್ಮೆಕರು ನುಂಗಿದ ಹೆಬ್ಬಾವು... ದೃಶ್ಯ ಕರುಳು ಹಿಂಡುತ್ತಿದೆ

ಕಾರವಾರ: ೯ ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವೊಂದು ದಿನದ ಹಿಂದೆ ಜನಿಸಿದ ಎಮ್ಮೆಕರುವನ್ನು ಕೊಂದು ಭಕ್ಷಿಸಲು ದಿನವಿಡಿ ವಿಫಲಯತ್ನ ನಡೆಸಿರುವ ಘಟನೆ ಕಾರವಾರದ ಸೋನಾರವಾಡದಲ್ಲಿ ಇಂದು ನಡೆದಿದೆ.
ಸೋನಾವಾಡದ ಬಳಿ ಪಾಳು ಬಿಟ್ಟ ಗದ್ದೆ ಬಯಲಿನಲ್ಲಿ ಎಮ್ಮೆಯೊಂದು ದಿನದ ಹಿಂದೆ ಜನಿಸಿದ ಕರುವಿನೊಂದಿಗೆ ಮೇಯಲು ತೆರಳಿತ್ತು. ಈ ವೇಳೆ ಸುಮಾರು ೯ ಅಡಿ ಉದ್ದದ ಹೆಬ್ಬಾವು ಕರುವಿನ ಮೇಲೆ ದಾಳಿ ಮಾಡಿದ್ದು, ಬೆಳಿಗ್ಗೆಯಿಂದಲೂ ನೀರು ತುಂಬಿದ ಗದ್ದೆಯಲ್ಲಿ ಕರು ಒದ್ದಾಡುತ್ತಿತ್ತು. ಎಮ್ಮೆ ಕೂಡ ತನ್ನ ಕರುವನ್ನು ಉಳುಸಿಕೊಳ್ಳಲು ವಿಫಲ ಯತ್ನ ನಡೆಸಿದೆ. ಆದರೆ ಇದನ್ನು ದೂರದಿಂದಲೇ ನೋಡಿದ ಅಲ್ಲಿನ ಕೆಲ ಮನೆಯವರು ನಿರ್ಲಕ್ಷಿಸಿದ್ದರು.
ಕೊನೆಗೆ ಸಂಜೆಯಾದರೂ ಎಮ್ಮೆ ಅಲ್ಲಿಯೇ ನಿಂತಿರುವುದನ್ನು ಗಮನಿಸಿ ಹೋಗಿ ನೋಡಿದಾಗ ಹೆಬ್ಬಾವು ಕರುವನ್ನು ನುಂಗಿರುವುದು ಗಮನಕ್ಕೆ ಬಂದಿದೆ. ಹೆಬ್ಬಾವಿನಿಂದ ತಪ್ಪಿಸಿಕೊಳ್ಳಲು ಕರುವು ಗದ್ದೆಯಲ್ಲಿ ಉರುಳಾಡಿದೆ. ಎಮ್ಮೆ ಕೂಡ ಬುಡಿಸಲು ಪ್ರಯತ್ನ ನಡೆಸಿತ್ತಾದರೂ ಕರು ಸಾವನ್ನಪ್ಪಿತ್ತು.
ಈ ಬಗ್ಗೆ ವಿಷಯ ತಿಳಿದ ಜನರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ವಿಷಯ ತಿಳಿಸಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕರುವಿನ ತಲೆ ನುಂಗಿದ ಹೆಬ್ಬಾವನ್ನು ಬೆರ್ಪಡಿಸಿ ಹಿಡಿದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಹಾವನ್ನು ಕಾಡಿಗೆ ಬಿಡುವುದಾಗಿ ತಿಳಿಸಿದ್ದಾರೆ.
ಆದರೆ ಆಗ ತಾನೆ ಜನಿಸಿದ ತನ್ನ ಕರುವನ್ನು ಕಳೆದುಕೊಂಡ ಎಮ್ಮೆಯು ದಿನವಿಡಿ ಮುಖ ರೋಧನೆ ವ್ಯಕ್ತಪಡಿಸುತ್ತಿರುವುದು ನೆರೆದವರ ಕರಳು ಹಿಂಡುವಂತಿತ್ತು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.