ಕಾರವಾರ (ಉ.ಕ): ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು, ಕಾಳಿ ಸೇತುವೆಯ ಮೇಲೆ ಸೈಕಲ್ ಹಾಗೂ ಚಪ್ಪಲಿ ಬಿಟ್ಟು ವ್ಯಕ್ತಿನೋರ್ವ ನಾಪತ್ತೆಯಾಗಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ತಾಲೂಕಿನ ಗಿಂಡಿವಾಡದ ನಿವಾಸಿ ಮಂಜುನಾಥ ಆನಂದು ನಾಯ್ಕ ಕಾಣೆಯಾದ ವ್ಯಕ್ತಿ. ಆಟೋ ಚಾಲಕನಾಗಿದ್ದ ಈತ ಮಂಗಳವಾರ ಮನೆಯ ಬೆಡ್ ರೂಮಿನಲ್ಲಿ, ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದು ಎಲ್ಲರ ಹತ್ತಿರ ಕ್ಷಮೆಯಾಚಿಸಿದ್ದಾನೆ. ಅಲ್ಲದೆ, ಮನೆಯಿಂದ ಸೈಕಲ್ ತೆಗೆದುಕೊಂಡು ಹೋದವ ಮತ್ತೆ ಮನೆಗೆ ಮರಳಿ ಬಂದಿಲ್ಲ.
ಸದಾಶಿಗಡದ ಕಾಳಿ ಸೇತುವೆ ಬಳಿ ಈತನ ಸೈಕಲ್ ಹಾಗೂ ಚಪ್ಪಲಿ ಪತ್ತೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ . ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.