ಭಟ್ಕಳ : ಗೋವಾದಲ್ಲಿ ನಾಪತ್ತೆಯಾದ ವ್ಯಕ್ತಿಯೋರ್ವರು ತಿಂಗಳ ಬಳಿಕ ಪಟ್ಟಣದಲ್ಲಿ ಪತ್ತೆಯಾಗಿದ್ದು, ಭಟ್ಕಳ ಪೊಲೀಸರು ಗೋವಾದ ಕಾಣಕೋಣದಲ್ಲಿರುವ ಅವರ ಸಂಬಂಧಿಕರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಗೋವಾದ ಕಾಣಕೋಣ ನಿವಾಸಿ ವಿಜಯ ರಾಮಚಂದ್ರ ಮಲಿಯಾರ ಗೋವಾದಲ್ಲಿ ಕಳೆದ ಸೆ.19ರಂದು ನಾಪತ್ತೆಯಾಗಿದ್ದರು. ಇವರು ಕೊಂಕಣ ರೈಲ್ವೆ ಸಿಬ್ಬಂದಿಯಾಗಿದ್ದು, ಈ ಕುರಿತು ಅವರ ಪತ್ನಿ ವಿನಯಾ ಎಂ. ಗೋವಾದ ಕಾಣಕೋಣ ಪೊಲೀಸರಿಗೆ ದೂರು ನೀಡಿದ್ದರು.
ಗೋವಾದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಭಟ್ಕಳದಲ್ಲಿ ಮಾನಸಿಕ ಅಸ್ವಸ್ಥಗೊಂಡು ತಿರುಗಾಡುತ್ತಿದ್ದರು. ಪಟ್ಟಣದ ಟಿಎಫ್‍ಸಿ ಹೊಟೇಲ್ ಬಳಿ ಅಸ್ವಸ್ಥಗೊಂಡು ಬಿದ್ದಿದ್ದರು. ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ಗೋವಾದ ನಾಪತ್ತೆ ಪ್ರಕರಣ ಹಿಂಬಾಲಿಸಿದ ಭಟ್ಕಳ ಪೊಲೀಸರು ಸಂಬಂಧಿಕರ ಪತ್ತೆ ಹಚ್ಚಿದ್ದಾರೆ. ಬಳಿಕ ಅವರ ಸಂಬಂಧಿಕರಿಗೆ ಕರೆಯಿಸಿ ಅವರಿಗೆ ಒಪ್ಪಿಸಿದ್ದಾರೆ. ಈ ವೇಳೆ ಎ.ಎಸ್.ಐಗಳಾದ ರಾಮಚಂದ್ರ ವೈದ್ಯ, ರವಿ ನಾಯ್ಕ ಹವಾಲ್ದಾರ ನಾರಾಯಣ ನಾಯ್ಕ್ ಇತರರು ಇದ್ದರು.