ಶಿರಸಿ: ಅತಿಕ್ರಮಣವಾಗಿರುವ ಮನೆ ಖಾಲಿ ಮಾಡಿಸಲು ಹೋದ ಸಂದರ್ಭದಲ್ಲಿ ಅರಣ್ಯ ಅಧಿಕಾರಿಯ ಕೈ ಬೆರಳು ಕಟ್ ಮಾಡಿದ ಘಟನೆ ಸಿದ್ದಾಪುರದ ಗವಿನಗುಡ್ಡದಲ್ಲಿ ನಡೆದಿದೆ.
ವಿ ಟಿ ನಾಯ್ಕ ಗಾಯಗೊಂಡ ಅರಣ್ಯ ಇಲಾಖೆ ಅಧಿಕಾರಿ. ಮಹಾಬಲೇಶ್ವರ ಚಂದು ಮರಾಠಿ ಹಲ್ಲೆ ನಡೆಸಿದ ಆರೋಪಿಯಾಗಿದ್ದು, ಇವರು ಹೊಸದಾಗಿ ನಿರ್ಮಾಣ ಮಾಡಿಕೊಂಡಿದ್ದ ಮನೆಯನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಸೂಚನೆ ನೀಡಿದ್ದರು.
ಇಂದು ಇದೇ ವಿಚಾರವಾಗಿ ಗಲಾಟೆ ನಡೆದಿದೆ. ಈ ವೇಳೆ ಅರಣ್ಯ ಅಧಿಕಾರಿಯ ಕೈ ಬೆರಳನ್ನು ಮಹಾಬಲೇಶ್ವರ ಕತ್ತರಿಸಿದ್ದಾನೆ. ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಹಕ್ಕಿ ಪಿಕ್ಕಿ ಕ್ಯಾಂಪ್ ಒತ್ತುವರಿ ತೆರವು.. ಜೆಸಿಬಿಗೆ ಅಡ್ಡ ನಿಂತು ಕುಟುಂಬಸ್ಥರ ಪ್ರತಿಭಟನೆ