ಭಟ್ಕಳ: ತಾಲೂಕಿನ ಬೇಣಂದೂರ ಗ್ರಾಮದ ಎಳ್ಬಾರು ಎಂಬಲ್ಲಿ ವ್ಯಕ್ತಿವೋರ್ವ ಗೇರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತ ವ್ಯಕ್ತಿ ಗಣಪತಿ ನಾರಾಯಣ ನಾಯ್ಕ(36) ಎಂದು ತಿಳಿದು ಬಂದಿದೆ. ಈತ ವಿಪರೀತ ಕುಡಿತದ ಚಟದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಎನ್ನಲಾಗ್ತಿದೆ. ಶನಿವಾರ ತನ್ನ ಮನೆಯ ಪಕ್ಕದಲ್ಲಿರುವ ಗೇರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ವಿಷಯ ಪೊಲೀಸರ ಗಮನಕ್ಕೆ ಬಾರದೆ ಶವದ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದರು. ಈ ವಿಷಯ ಪಕ್ಕದ ಗ್ರಾಮದ ಬೀಟ್ ಪೊಲೀಸರ ಗಮನಕ್ಕೆ ಬಂದ ಬಳಿಕ ಅವರು ಮೇಲಾಧಿಕಾರಿಗಳ ಗಮನಕ್ಕೆ ತಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯ ಈ ಕುರಿತು ಮೃತ ವ್ಯಕ್ತಿಯ ಸಹೋದರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.