ETV Bharat / state

ಕ್ವಾರಂಟೈನ್​ಲ್ಲಿದ್ದವರಲ್ಲಿ ಸೋಂಕು ಪತ್ತೆ, ಜನ ಹೆದರುವ ಅಗತ್ಯವಿಲ್ಲ: ಎಸಿ ಉಳ್ಳಾಗಡ್ಡಿ - ಕೊರೊನಾ ವೈರಸ್​

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ 9 ಕೊರೊನಾ ಪಾಸಿಟಿವ್​ ಪ್ರಕರಣಗಳು ದೃಢಪಟ್ಟಿವೆ. ಅಂತಾರಾಜ್ಯದಿಂದ ಬಂದು ಕ್ವಾರಂಟೈನ್​​ನಲ್ಲಿದ್ದ ಜನರಲ್ಲಿ ವೈರಸ್​ ಪತ್ತೆಯಾಗಿದೆ.​ ಇದರಿಂದ ತಾಲೂಕಿನ ಜನ ಆತಂಕ ಪಡುವ ಅಗತ್ಯವಿಲ್ಲ ಎಂದು ಸಹಾಯಕ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದ್ದಾರೆ.

9-more-corona-cases-found-in-sirasi
ಎಸಿ ಉಳ್ಳಾಗಡ್ಡಿ
author img

By

Published : May 22, 2020, 1:16 PM IST

ಶಿರಸಿ: ಗುರವಾರ ಒಂದೇ ದಿನದಂದು ತಾಲೂಕಿನಲ್ಲಿ 9 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಮಹಾರಾಷ್ಟ್ರ ಹಾಗೂ ದುಬೈನಿಂದ ಬಂದು ಸ್ಥಾನಿಕ ಕ್ವಾರಂಟೈನ್​ನಲ್ಲಿ ಇದ್ದವರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಹಾಯಕ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದ್ದಾರೆ.

ತಹಶಿಲ್ದಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮಹಾರಾಷ್ಟ್ರದಿಂದ 8 ಹಾಗೂ ದುಬೈನಿಂದ ಬಂದ ಒರ್ವ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದ ತಕ್ಷಣ ಕ್ವಾರಂಟೈನ್​​ ಮಾಡಲಾಗಿದೆ. ಆದ ಕಾರಣ ಉಳಿದವರಿಗೆ ಬರಬಹುದು ಎಂಬ ಆತಂಕ ಪಡುವ ಅಗತ್ಯವಿಲ್ಲ ಎಂದರು.

ಕ್ವಾರಂಟೈನ್​ಲ್ಲಿದ್ದವರಿಗೆ ಸೋಂಕು ತಗುಲಿದೆ, ಜನ ಹೆದರುವ ಅಗತ್ಯವಿಲ್ಲ

ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಆಸ್ಪತ್ರೆಗೆ ದಾಖಲಿಸುವ ಕಾರ್ಯ ನಡೆದಿದ್ದು, ತಾಲೂಕಿನಲ್ಲಿ 175 ಶಂಕಿತರ ವರದಿ ಬರಬೇಕಿದೆ ಎಂದು ತಿಳಿಸಿದರು. ತಾಲೂಕಿಗೆ ಮಹಾರಾಷ್ಟ್ರದಿಂದ 148, ಪುಣೆಯಿಂದ 43, ಅಲೇಕಾ 13, ಗುಜರಾತ್ 8, ತೆಲಂಗಾಣ 34, ರಾಜಸ್ಥಾನ ರಾಜ್ಯದಿಂದ 8 ಜನರು ಆಗಮಿಸಿದ್ದಾರೆ. ಇವರೆಲ್ಲರನ್ನೂ ಮೊರಾರ್ಜಿ ಕಲ್ಲಿ, ಪಂಚವಟಿ, ಅಲೇಖಾ ಗೇಟ್​ವೇನಲ್ಲಿ ಸ್ಥಾನಿಕ ಕ್ವಾರಂಟೈನ್​ ಮಾಡಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.