ಕಾರವಾರ(ಉತ್ತರಕನ್ನಡ): ಸ್ವಿಚ್ ಬೋರ್ಡ್ಗೆ ಹಾಕಿದ್ದ ಮೊಬೈಲ್ ಚಾರ್ಜರ್ ವೈರ್ಗೆ ಬಾಯಿ ಹಾಕಿದ ಪರಿಣಾಮ ವಿದ್ಯುತ್ ಪ್ರವಹಿಸಿ 8 ತಿಂಗಳ ಮಗು ಸಾವನ್ನಪ್ಪಿದ ಘಟನೆ ಕಾರವಾರ ತಾಲೂಕಿನ ಸಿದ್ದರದಲ್ಲಿ ಬುಧವಾರ ನಡೆದಿದೆ. ಸಿದ್ದರದ ಸಂತೋಷ ಕಲ್ಗುಟಕರ್ ಹಾಗೂ ಸಂಜನಾ ಕಲ್ಗುಟಕರ್ ದಂಪತಿಗೆ ಸೇರಿದ 8 ತಿಂಗಳ ಹೆಣ್ಣು ಮಗು ಸಾನಿಧ್ಯ ಕಲ್ಗುಟಕರ್ ಮೃತಪಟ್ಟಿದೆ. 14 ವರ್ಷದ ಬಳಿಕ ದಂಪತಿಗೆ ಈ ಮಗು ಜನಿಸಿತ್ತು. ಕರುಳ ಕುಡಿ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಳಗ್ಗೆ ಮನೆಯಲ್ಲಿದ್ದ ವೇಳೆ ಕರೆಂಟ್ ಹೋಗಿದ್ದರಿಂದ ತಾಯಿ ಸಂಜನಾ ಚಾರ್ಜ್‌ಗೆ ಇಟ್ಟಿದ್ದ ಮೊಬೈಲ್‌ನ್ನು ತೆಗೆದಿದ್ದರು. ಈ ವೇಳೆ ಅವರು ಚಾರ್ಜರ್ ಬಂದ್ ಮಾಡುವುದನ್ನು ಮರೆತಿದ್ದರು. ಮಗು ಅಲ್ಲಿಯೇ ಆಟವಾಡಿಕೊಂಡಿದ್ದು, ಚಾರ್ಜರ್‌ನ ಕೆಬಲ್ ನೆಲಕ್ಕೆ ಬಿದ್ದುಕೊಂಡಿತ್ತು. ಈ ವೇಳೆ ಕರೆಂಟ್ ಮತ್ತೆ ಬಂದಿದ್ದು, ಕೈಯಲ್ಲಿ ಹಿಡಿದಿದ್ದ ಕೆಬಲ್ನ್ನು ಮಗು ಬಾಯಿಗೆ ಹಾಕಿದೆ. ಕೂಡಲೇ ಶಾಕ್ ತಗುಲಿ ಮಗು ಸ್ಥಳದಲ್ಲೇ ಅಸ್ವಸ್ಥಗೊಂಡು ಬಿದ್ದಿದೆ ಎನ್ನಲಾಗಿದೆ.
ತಕ್ಷಣ ತಾಯಿ ಸಂಜನಾ ಮನೆಯವರ ಸಹಾಯದಿಂದ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಯಾವುದೇ ಪ್ರಯೋಜನವಾಗದೆ ಮಗು ಕೊನೆಯುಸಿರೆಳೆದಿದೆ. ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ತಂದೆ ಕೂಡ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಮೃತ ಮಗುವಿನ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು, ಮೃತದೇಹ ಗ್ರಾಮಕ್ಕೆ ಬರುತ್ತಿದ್ದಂತೆ ಆಕ್ರಂದನ ಮುಗಿಲು ಮುಟ್ಟಿತ್ತು.
ಇಂದು ದೊಡ್ಡ ಮಗಳ ಬರ್ತ್ ಡೇ: ಸಂತೋಷ್ ಹಾಗೂ ಸಂಜನಾ ದಂಪತಿಗೆ ಇಬ್ಬರು ಮಕ್ಕಳಿದ್ದು, ಇಂದು ಮೊದಲನೆ ಮಗಳ ಹುಟ್ಟುಹಬ್ಬವಿತ್ತು. ತಂದೆ ಹೆಸ್ಕಾಂನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಸಂಜೆ ದೊಡ್ಡ ಮಗಳ ಬರ್ತ್ ಡೇ ಆಚರಿಸಲು ಬೇಗ ವಾಪಸ್ ಬರಬೇಕೆಂದು ಬೆಳಗ್ಗೆ ತುಸು ಬೇಗ ಕೆಲಸಕ್ಕೆ ತೆರಳಿದ್ದರು. ಹೀಗಾಗಿ ತಾಯಿ ಸಣ್ಣ ಮಗುವನ್ನು ರೂಮಿನಲ್ಲಿ ಬಿಟ್ಟು ಕೆಲಸ ಮಾಡಿಕೊಳ್ಳುತ್ತಿದ್ದರು. ಇತ್ತ ದೊಡ್ಡ ಮಗಳು ಕೂಡ ಶಾಲೆಗೆ ತೆರಳಲೆಂದು ಸಿದ್ಧವಾಗುತ್ತಿದ್ದಳು. ಈ ವೇಳೆ ದುರ್ಘಟನೆ ಸಂಭವಿಸಿದೆ.
ಮಕ್ಕಳ ಬಗ್ಗೆ ಹೆಚ್ಚು ಜಾಗೃತಿಗೆ ವೈದ್ಯರ ಸಲಹೆ: ಈ ಬಗ್ಗೆ ಪ್ರತಿಕ್ರಿಯಿಸಿದ ಕ್ರೀಮ್ಸ್ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ರಾಜಕುಮಾರ್ ಮರೋಳ್, ಮಗು ಬರುವಾಗಲೇ ಸಾವನ್ನಪ್ಪಿತ್ತು. ಆದ್ದರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪಾಲಕರನ್ನು ಕೇಳಿದಾಗ ಮಗು ಮೊಬೈಲ್ ಚಾರ್ಜರ್ ಬಾಯಿಗೆ ಹಾಕಿದ್ದರಿಂದ ಈ ರೀತಿ ಆಗಿದೆ ಎಂದಿದ್ದಾರೆ. ಮಕ್ಕಳಿಗೆ ಸಣ್ಣ ಪ್ರಮಾಣದಲ್ಲಿ ವಿದ್ಯುತ್ ಪ್ರವಹಿಸಿದರೂ ಈ ರೀತಿಯಾಗುವ ಸಾಧ್ಯತೆ ಇದೆ. ಅಲ್ಲದೆ, ಮಕ್ಕಳ ವಿಷಯಲ್ಲಿ ಎಲ್ಲ ಪಾಲಕರೂ ಅತಿ ಹೆಚ್ಚು ಜಾಗೃತೆ ವಹಿಸಬೇಕು. ಮಕ್ಕಳು 6 ತಿಂಗಳಾದ ಬಳಿಕ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳಲು ಆರಂಭಿಸುತ್ತವೆ. ಈ ವೇಳೆ ಆ ಮಕ್ಕಳು ಸಿಕ್ಕಿದ್ದೆಲ್ಲವನ್ನು ಬಾಯಿಗೆ ಹಾಕಿಕೊಳ್ಳುತ್ತವೆ. ಪಾಲಕರಾದವರು ಈ ಸಂದರ್ಭದಲ್ಲಿ ಜಾಗೃತರಾಗಬೇಕು. ಯಾವುದೇ ಸಣ್ಣ ವಸ್ತುಗಳನ್ನೂ ಮಗುವಿಗೆ ನೀಡಬಾರದು. ನೀಡಿದರೂ ಜೊತೆಯಲ್ಲಿಯೇ ಇದ್ದು ನೋಡುತ್ತಿರಬೇಕು. ಮಕ್ಕಳ ವಿಷಯದಲ್ಲಿ ಸಣ್ಣ ನಿರ್ಲಕ್ಷ್ಯ ಕೂಡ ಪ್ರಾಣಕ್ಕೆ ಕಂಠಕವಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.