ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ 14 ಮಂದಿಗೆ ಸೋಂಕು ತಗುಲಿದ ಬೆನ್ನಲ್ಲೇ ಇದೀಗ 6 ಮಂದಿ ಸೋಂಕಿನಿಂದ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಹಳಿಯಾಳ ಮೂಲದ 78 ವರ್ಷದ ವೃದ್ಧ, 72 ವರ್ಷದ ವೃದ್ಧೆ, 12 ವರ್ಷದ ಬಾಲಕಿ, ಅಂಕೋಲಾದ 27 ವರ್ಷದ ಯುವಕ, ಶಿರಸಿಯ ರಾಜೀವ್ ನಗರದ 28 ವರ್ಷದ ಯುವಕ ಹಾಗೂ 35 ವರ್ಷದ ಮಹಿಳೆ ಸೋಂಕಿನಿಂದ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.