ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 58 ಮಂದಿ ಕೊರೊನಾದಿಂದ ಗುುಣಮುಖರಾಗಿದ್ದು, ಇದುವರೆಗೆ ಒಟ್ಟು 10,712 ಜನರು ಡಿಸ್ಚಾರ್ಜ್ ಆಗಿದ್ದಾರೆ.
ಕೊರೊನಾ ಪ್ರಕರಣಗಳ ಮಾಹಿತಿ :
ಸೋಂಕು ಪತ್ತೆಯಾದ ಪೈಕಿ ಅಂಕೋಲಾ 4, ಕುಮಟಾ 21, ಹೊನ್ನಾವರ 1, ಸಿದ್ದಾಪುರ 3, ಮುಂಡಗೋಡ 12, ಹಳಿಯಾಳ 7, ಜೊಯಿಡಾದ ನಾಲ್ವರಿಗೆ ಸೋಂಕು ದೃಢಪಡುವ ಮೂಲಕ ಒಟ್ಟು 52 ಜನರಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 12,070 ಕ್ಕೆ ಏರಿಕೆಯಾಗಿದೆ.
ಗುಣಮುಖ :
ಇನ್ನು ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಕಾರವಾರದ 18, ಕುಮಟಾ 9, ಹೊನ್ನಾವರ 5, ಶಿರಸಿ 10, ಯಲ್ಲಾಪುರ 12 ಹಾಗೂ ಹಳಿಯಾಳದ 4 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮೃತ ಪ್ರಕರಣಗಳ ವಿವರ :
ಇದುವರೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸುಮಾರು 159 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಜಿಲ್ಲೆಯಲ್ಲಿ 1,199 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.