ಶಿರಸಿ: ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಬ್ಯಾಗ್ನಲ್ಲಿದ್ದ 5.50 ಲಕ್ಷ ರೂ. ಹಣ ಕದ್ದಿರುವ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದಾಪುರ ತಾಲೂಕಿನ ನೆಲೆಮಾಂವಿನ ರಘುಪತಿ ಕೃಷ್ಣ ಭಟ್ ಅವರು ಹಣ ಕಳೆದುಕೊಂಡ ವ್ಯಕ್ತಿ. ಇವರು ತಮ್ಮ ಸ್ನೇಹಿತ ಗಣಪತಿ ಭಟ್ ಅವರೊಂದಿಗೆ ಮಂಗಳವಾರ ರಾತ್ರಿ ಕಾನಸೂರಿನಿಂದ ಬೆಂಗಳೂರಿಗೆ ಬಸ್ ಮೂಲಕ (ಕೆ.ಎ.31-ಎಫ್-1633) ವೈಯಕ್ತಿಕ ಕೆಲಸಕ್ಕಾಗಿ ಹೋಗುತ್ತಿರುವಾಗ ಈ ಘಟನೆ ಜರುಗಿದೆ.
ತಮ್ಮ ಬ್ಯಾಗ್ನಲ್ಲಿದ್ದ ಒಟ್ಟು 5.೫೦ ಸಾವಿರ ರೂ. ಹಣ ಯಾರೋ ಕದ್ದಿದ್ದಾರೆ ಎಂದು ರಘುಪತಿ ಭಟ್ ಗುರುವಾರ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಪಿಐ ಪ್ರಕಾಶ ತನಿಖೆ ಕೈಗೊಂಡಿದ್ದಾರೆ.
ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ 5.50 ಲಕ್ಷ ರೂ. ಎಗರಿಸಿದ ಕಳ್ಳರು !
ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ 5.50 ಲಕ್ಷ ರೂ. ಹಣವನ್ನು ದುಷ್ಕರ್ಮಿಗಳು ಕದ್ದಿರುವ ಘಟನೆ ನಡೆದಿದೆ.