ETV Bharat / state

ಗೋಕರ್ಣ ಮುರುಡೇಶ್ವರದಲ್ಲಿ ಅಲೆಗೆ ಕೊಚ್ಚಿ ಹೋಗುತ್ತಿದ್ದ 4 ಮಕ್ಕಳು: ಲೈಫ್ ಗಾರ್ಡ್ಸ್​ನಿಂದ ಮರುಜೀವ!

ಕಡಲ ತೀರಕ್ಕೆ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ - ಲೈಫ್ ಗಾರ್ಡ್ ಮಾತು ನಿರ್ಲಕ್ಷಿಸುವ ಪ್ರವಾಸಿಗರು - ಅಲೆ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗರ ರಕ್ಷಣೆ

4-children-who-were-drowned-in-the-wave-in-gokarna-murudeshwar-revived-by-life-guards
ಗೋಕರ್ಣ ಮುರುಡೇಶ್ವರದಲ್ಲಿ ಅಲೆಗೆ ಕೊಚ್ಚಿ ಹೋಗುತ್ತಿದ್ದ 4 ಮಕ್ಕಳು: ಲೈಫ್ ಗಾರ್ಡ್ಸ್​ನಿಂದ ಮರುಜೀವ!
author img

By

Published : Jan 14, 2023, 7:34 PM IST

ಕಾರವಾರ: ಪ್ರವಾಸಕ್ಕೆ ಬಂದು ಸಮುದ್ರದಲ್ಲಿ ಈಜಾಡುತ್ತಿದ್ದ ಮೂವರು ಮಕ್ಕಳು ಅಲೆ ರಭಸಕ್ಕೆ ಕೊಚ್ಚಿ ಹೋಗಿ ಅದೃಷ್ಟವಸಾತ್ ಲೈಫ್ ಗಾರ್ಡ್ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ತೆರಳಿ ರಕ್ಷಣೆ ಮಾಡಿರುವ ಘಟನೆ ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಇಂದು ನಡೆದಿದೆ. ಅಲೆಗೆ ಸಿಲುಕಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಮಾರುತಿ (20) ಚಂದನಾ(16) ಮಧುಸೂದನ್ (11) ಎಂಬ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.

ಕುಟುಂಬ ಸಮೇತರಾಗಿ ಗೋಕರ್ಣಕ್ಕೆ ಪ್ರವಾಸಕ್ಕೆ ಆಗಮಿಸಿದ್ದವರು ಸಮುದ್ರದಲ್ಲಿ ಈಜಾಡಲು ತೆರಳಿದಾಗ ಮಹಿಳೆ ಸೇರಿ ಮೂರು ಜನ ಸುಳಿಗೆ ಸಿಲುಕಿ ನೀರು ಪಾಲಾಗುವ ಹಂತದಲ್ಲಿದ್ದರೂ ಇದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಮೋಹನ್ ಅಂಬಿಗ, ಶಿವಪ್ರಸಾದ ಅಂಬಿಗ, ಬೀಚ್ ಸುಪ್ರವೈಸರ್ ರವಿ ನಾಯ್ಕ್, ಪ್ರವಾಸಿ ಮಿತ್ರ ರಘುವೀರ ನಾಯ್ಕ್ ಹಾಗೂ ಗೋಕರ್ಣ ಓಂ ಬೀಚ್ ಟೂರಿಸ್ಟ್ ಬೋಟ್ ಅಸೋಸಿಯೇಷನ್ ಸಿಬ್ಬಂದಿಗಳಾದ ಅಶೋಕ್ ಹೊಸ್ಕಟ್ಟ, ದೀಪಕ್ ಗೌಡ, ಶಶಿಕುಮಾರ್ ಬಿಜಾಪುರ, ಕಮಲಾಕರ ಹೊಸಕಟ್ಟ, ಮಹೇಶ ಹೊಸಕಟ್ಟ, ಸಂದೇಶ ಗಾಬಿತ್, ಚಿದಾನಂದ ಲಕ್ಕುಮನೆ ತಕ್ಷಣ ಸಹಾಯಕ್ಕೆ ತೆರಳಿ ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ.

ಮುರುಡೇಶ್ವರದಲ್ಲಿಯೂ ಕೊಚ್ಚಿ ಹೋಗಿದ್ದ ಯುವಕನ ರಕ್ಷಣೆ: ಇನ್ನು ಮುರುಡೇಶ್ವರದ ಮುಖ್ಯ ಕಡಲತೀರದಲ್ಲಿಯೂ ಕೋಲಾರ ಮೂಲದ ಯುವಕನೊಬ್ಬ ನೀರಿನಲ್ಲಿ ಆಟವಾಡುತ್ತಿದ್ದಾಗ ಅಲೆಗೆ ಕೊಚ್ಚಿ ಹೋಗಿದ್ದ ಘಟನೆ ಶನಿವಾರ ನಡೆದಿದೆ. ಕೋಲಾರದ 19 ವರ್ಷದ‌ ಆದೇಶ ರವೀಂದ್ರ ಕೊಚ್ಚಿ ಹೋಗಿದ್ದ ಯುವಕ. ಕುಟುಂಬಸ್ಥರ ಜೊತೆಗೆ ಪ್ರವಾಸಕ್ಕೆ ಆಗಮಿಸಿ ಸಮುದ್ರದಲ್ಲಿ ಆಟ ಆಡುತ್ತಿರುವಾಗ ಒಮ್ಮೇಲೆ ಬಂದ ಅಲೆಗೆ ಕೊಚ್ಚಿ ಹೋಗುತಿದ್ದ.

ತಕ್ಷಣ ಸ್ಥಳದಲ್ಲಿದ್ದ ಕುಟುಂಬಸ್ಥರು ಕೂಡಿಕೊಂಡಿದ್ದಾರೆ. ಈ ವೇಳೆ, ಸ್ಥಳದಲ್ಲಿದ್ದ ಲೈಫ್ ಗಾರ್ಡ್​ಗಳಾದ ಪ್ರವೀಣ, ಹನುಮಂತ, ವಿಘ್ನೇಶ್, ಶೇಖರ್ ಎಂಬುವವರು ತಕ್ಷಣ ಸಮುದ್ರಕ್ಕೆ ಈಜಾಡುತ್ತಾ ತೆರಳಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ಬಾಲಕ ಇನ್ನೊಂದು ಕ್ಷಣ ತಡವಾಗಿದ್ದು ಅಲೆಗೆ ಕೊಚ್ಚಿ ಹೋಗುತ್ತಿದ್ದ ಸ್ಥಿತಿಯಲ್ಲಿ ಲೈಫ್ ಗಾರ್ಡ್​ಗಳು ಜೀವ ಉಳಿಸಿದ್ದು ಪ್ರವಾಸಿಗರು ಕೃತಜ್ಞತೆ ಸಲ್ಲಿಸಿದ್ದಾರೆ.

ಲೈಫ್ ಗಾರ್ಡ್ ಮಾತು ಧಿಕ್ಕರಿಸುವ ಪ್ರವಾಸಿಗರು: ಇನ್ನು ಜಿಲ್ಲೆಯ ಪ್ರಮುಖ ಕಡಲತೀರಗಳಲ್ಲಿ ಪ್ರವಾಸಿಗರಿಗೆ ಅಪಾಯಕಾರಿ ಸ್ಥಳಗಳಲ್ಲಿ ನೀರಿಗೆ ಇಳಿಯದಂತೆ ಮಾಹಿತಿ ನೀಡಲು ಮತ್ತು ತೊಂದರೆ ಸಿಲುಕಿಕೊಂಡವರ ರಕ್ಷಣೆಗೆ ಲೈಫ್ ಗಾರ್ಡ್ ನೇಮಕ ಮಾಡಲಾಗಿದೆ. ಆದರೆ, ಗೋಕರ್ಣ, ಮುರುಡೇಶ್ವರ, ಕಾರವಾರ ಸೇರಿದಂತೆ ಬಹುತೇಕ ಕಡೆ ಸ್ಥಳದಲ್ಲಿದ್ದ ಪ್ರವಾಸಿಗರಿಗೆ ಅಪಾಯಕಾರಿ ಪ್ರದೇಶಕ್ಕೆ ತೆರಳದಂತೆ ಸೂಚಿಸಿದರು ಪ್ರವಾಸಿಗರು ಲೈಫ್ ಗಾರ್ಡ್ಗಳೊಂದಿಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ.

ಅಲ್ಲದೆ ಎಷ್ಟೇ ಹೇಳಿದರು ವಾಹನಗಳನ್ನು ಬೀಚ್​ಗೆ ಇಳಿಸುತ್ತಿದ್ದಾರೆ. ಇದರಿಂದ ಅದೇಷ್ಟೋ ವಾಹನಗಳು ಸಿಲುಕಿಕೊಂಡು ಪರದಾಡಿದ ಘಟನೆ ಕೂಡ ನಡೆದಿದೆ. ಅಲ್ಲದೆ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದು ಅಪಾಯ ತಂದೊಡ್ಡಿಕೊಳ್ಳುತ್ತಿದ್ದಾರೆ. ಪ್ರವಾಸಿಗರು ನೀರಿನಲ್ಲಿ ಇಳಿದು ಆಟಾಡಲು ನಮ್ಮ ಅಭ್ಯಂತರವಿಲ್ಲ. ಆದರೆ, ನಾವು ಅಪಾಯ ಇದೆ ಎಂದಾಗಲು ಅಲ್ಲಿಗೆ ತೆರಳುತ್ತಾರೆ. ಇದರಿಂದ ಅಪಾಯಕ್ಕೆ ಸಿಲುಕುತ್ತಾರೆ ಎನ್ನುತ್ತಾರೆ ಮುರುಡೇಶ್ವರದ ಲೈಫ್ ಗಾರ್ಡ್ ಶೇಖರ್.

ಒಟ್ಟಾರೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಕಡಲತೀರಗಳಲ್ಲಿ ಪ್ರವಾಸಿಗರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಮತ್ತು ಅವರ ರಕ್ಷಣೆಗೆ ಲೈಫ್ ಗಾರ್ಡ್ ನೇಮಕ ಮಾಡಲಾಗಿದ್ದು ಇದರ ಪ್ರಯೋಜನವನ್ನು ಸರಿಯಾದ ರಿತಿಯಲ್ಲಿ ಪ್ರವಾಸಿಗರು ಪ್ರಯೋಜನ ಪಡೆದುಕೊಳ್ಳಬೇಕಾಗಿದೆ.

ಇದನ್ನೂ ಓದಿ: ಗೋಕರ್ಣದಲ್ಲಿ ಸಿದ್ದೇಶ್ವರ ಶ್ರೀ ಚಿತಾಭಸ್ಮ ವಿಸರ್ಜನೆ.. ವಿಶೇಷ ಪೂಜೆ ಸಲ್ಲಿಸಿದ ಭಕ್ತಗಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.