ETV Bharat / state

30 ವರ್ಷಗಳಿಂದ ವಾಸವಿದ್ದರೂ ಒಕ್ಕಲೆಬ್ಬಿಸುವ ಭೀತಿ: 200ಕ್ಕೂ ಹೆಚ್ಚು ಕುಟುಂಬಗಳಿಗೆ ಶುರುವಾದ ಆತಂಕ - ಭೂಮಿಯನ್ನು ಅರಣ್ಯೇತರ ಭೂಮಿಯನ್ನಾಗಿ ಮಾಡಿ ನಿವೇಶನ

ಮನೆಗಳನ್ನು ಒಕ್ಕಲೆಬ್ಬಿಸುವಂತೆ ಗ್ರಾಮಸ್ಥರಿಗೆ ನೋಟಿಸ್​ - ಸರ್ಕಾರ ಇದೇ ಜಾಗವನ್ನು ಸಕ್ರಮ ಮಾಡಿಕೊಡಬೇಕು ಎಂದು ಗ್ರಾಮಸ್ಥರಿಂದ ಆಗ್ರಹ - ಒಂದು ವಾರದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ

30-years-of-residence-but-fear-of-moving-in-more-than-200-families-are-worried
30 ವರ್ಷಗಳಿಂದ ವಾಸವಿದ್ದರೂ ಒಕ್ಕಲೆಬ್ಬಿಸುವ ಭೀತಿ: 200ಕ್ಕೂ ಹೆಚ್ಚು ಕುಟುಂಬಗಳಿಗೆ ಶುರುವಾದ ಆತಂಕ
author img

By

Published : Jan 19, 2023, 4:20 PM IST

30 ವರ್ಷಗಳಿಂದ ವಾಸವಿದ್ದರೂ ಒಕ್ಕಲೆಬ್ಬಿಸುವ ಭೀತಿ: 200ಕ್ಕೂ ಹೆಚ್ಚು ಕುಟುಂಬಗಳಿಗೆ ಶುರುವಾದ ಆತಂಕ

ಕಾರವಾರ: ಸುಮಾರು 30 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ನೂರಾರು ಕುಟುಂಬಗಳಿಗೆ ಮನೆ ತೆರವು ಮಾಡುವಂತೆ ಸರ್ಕಾರ ನೋಟಿಸ್​ ನೀಡಿದ್ದು, ತಮ್ಮ ಮನೆ ಹಾಗೂ ಭೂಮಿ ಕಳೆದುಕೊಳ್ಳುತ್ತೇವೆ ಎಂಬ ಆತಂಕದಿಂದ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡ ಗ್ರಾಮದ ಬಂಗಾರಪ್ಪ ಬಡವಾಣೆ ನಿವಾಸಿಗಳು ಸುಮಾರು 30 ವರ್ಷಗಳ ಹಿಂದೆ 200ಕ್ಕೂ ಅಧಿಕ ಕುಟುಂಬಗಳು ಬಂದು ಸಣ್ಣ ಸಣ್ಣ ಮನೆಗಳನ್ನು ಮಾಡಿಕೊಂಡು ನೆಲೆಸಿದ್ದರು.

ಮೂಲಭೂತ ಸೌಕರ್ಯ ವಂಚಿತ ಗ್ರಾಮವಾದರು, ಸರ್ಕಾರ ಮನೆಗಳಲ್ಲಿ ಇರುವ ಜನರಿಗೆ ಈಗಿರುವ ವಿಳಾಸಕ್ಕೆ ಆಧಾರ ಕಾರ್ಡ್, ರೇಷನ್ ಕಾರ್ಡ್, ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ ಎಲ್ಲಾ ವ್ಯವಸ್ಥೆಗಳನ್ನ ಕಲ್ಪಿಸಿದೆ. ಬಹುತೇಕ ಕೂಲಿ ನಾಲಿ ಮಾಡುವ ಬಡ ವರ್ಗದವರೇ ಬಡಾವಣೆಯಲ್ಲಿ ನೆಲೆಸಿದ್ದು ಇಷ್ಟು ವರ್ಷಗಳ ಕಾಲ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಆದರೆ ಇದೀಗ ಇಲ್ಲಿನ ಜನರಿಗೆ ತಮ್ಮ ಮನೆಗಳನ್ನು ಒಕ್ಕಲೆಬ್ಬಿಸುವ ಆತಂಕ ಪ್ರಾರಂಭವಾಗಿದೆ. ನಾವು ಇಲ್ಲಿ ಹುಟ್ಟಿ ಬೆಳೆದು ಮದುವೆಯನ್ನು ಆಗಿ ಮಕ್ಕಳು ಮೊಮ್ಮಕ್ಕಳನ್ನು ಕಂಡಿದ್ದೇವೆ. ಇರುವ ಚಿಕ್ಕ ಜಾಗದಲ್ಲೇ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಇದು ಬಂದರು ನಿರಾಶ್ರೀತರಿಗೆ ನೀಡಿದ ಜಾಗವಾಗಿದೆ.

ಸಕ್ರಮ ಮಾಡಿಕೊಡುವಂತೆ ಆಗ್ರಹ: ಆದರೆ 30 ವರ್ಷಗಳ ಬಳಿಕ ಇದೀಗ ಮನೆಗಳನ್ನು ಕಾಲಿ ಮಾಡುವಂತೆ ಕೆಲವರಿಗೆ ನೋಟಿಸ್ ನೀಡಲಾಗಿದೆ. ಈಗ ನಾವು ಎಲ್ಲಿಗೆ ಹೋಗಬೇಕು. ಇದೇ ಕಾರಣಕ್ಕೆ ಗ್ರಾಮದ ಜನರು ಮನೆಗಳನ್ನು ತೆರವು ಮಾಡದಂತೆ ಪ್ರತಿಭಟನೆ ಮಾಡುತ್ತಿದ್ದು, ಸರ್ಕಾರ ಇದೇ ಜಾಗವನ್ನು ಸಕ್ರಮ ಮಾಡಿಕೊಡಬೇಕು. ಇಲ್ಲವೇ ಬದಲಿಯಾಗಿ ಸ್ಥಳವಕಾಶ ನೀಡಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಗ್ರಾಮದ ಮಹಿಳೆ ಲಕ್ಷ್ಮಿ ವಡ್ಡರ್ ಆಗ್ರಹಿಸಿದ್ದಾರೆ.

ಇನ್ನು ಕಾರವಾರ ತಾಲೂಕಿನ ಬೈತಖೋಲ್ ಬಂದರನ್ನು ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಅಲ್ಲಿನ ಜನರನ್ನು ಬೇರೆ ಕಡೆ ಸ್ಥಳಾಂತರ ಮಾಡಲು ಶಿರವಾಡ ಗ್ರಾಮದಲ್ಲಿ ಭೂಮಿಯನ್ನು ನೀಡಿದ್ದರು. ಆದರೆ, ಬೈತಖೋಲದ ಜನರು ಶಿರವಾಡಕ್ಕೆ ತೆರಳಿರಲಿಲ್ಲ. ಇದೇ ವೇಳೆ, 1992 ರಲ್ಲಿ ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಬಡವರಿಗೆ ನಿವೇಶನಗಳನ್ನು ನೀಡಲು ಇದೇ ಶಿರವಾಡ ಭಾಗದಲ್ಲಿ ಅರಣ್ಯ ಭೂಮಿಯನ್ನು ಅರಣ್ಯೇತರ ಭೂಮಿಯನ್ನಾಗಿ ಮಾಡಿ ನಿವೇಶನಗಳನ್ನ ಮಾಡಿ ಹಂಚಲು ಮುಂದಾಗಿತ್ತು.

ನಿರಾಶ್ರಿತರಿಗೆ ನೀಡಿದ ಜಾಗದಲ್ಲಿಯೇ ನೆಲೆಸಿದ್ದರು: ಈ ವೇಳೆಯಲ್ಲಿ ಶಿರವಾಡ ಗ್ರಾಮಕ್ಕೆ ಬಂದ ಜನರು ಎಲ್ಲಿ ನೆಲೆಬೇಕು ಎಂದು ತಿಳಿಯದೇ ಬೈತ್ಕೋಲ ನಿರಾಶ್ರಿತರಿಗೆ ನೀಡಿದ ಜಾಗದಲ್ಲಿಯೇ ನೆಲೆಸಿದ್ದರು. ಇಷ್ಟು ವರ್ಷಗಳ ಕಾಲ ಮನೆ ಮಾಡಿಕೊಂಡವರನ್ನು ಸ್ಥಳಾಂತರ ಮಾಡಲು ಯಾರು ಮುಂದಾಗಿಲ್ಲ. ಇದೀಗ ಏಕಾಏಕಿ ಸ್ಥಳಾಂತರ ಮಾಡುತ್ತಾರೆ ಎನ್ನುವ ಆತಂಕ ಜನರಲ್ಲಿ ಕಾಡ ತೊಡಗಿದೆ.

ಸರ್ಕಾರ ನಮಗೆ ಇದೀಗ ಇರುವ ಜಾಗದಲ್ಲಿಯೇ ಮನೆಗಳಿಗೆ ಹಕ್ಕು ಪತ್ರ ಕೊಡಬೇಕು. ಇಲ್ಲದಿದ್ದರೇ ಬೇರೆ ಕಡೆ ಎಲ್ಲಾದರು ನಿವೇಶವನ್ನಾದರು ಕೊಡಬೇಕು. ಏಕಾಏಕಿ ಬೀದಿಗೆ ಹಾಕುವ ಕೆಲಸ ಮಾಡಬಾರದು ಎಂದು ಸ್ಥಳೀಯ ಹೋರಾಟಗಾರರಾದ ಎಲಿಷಾ ಎಲಕಪಾಟಿ ಆಗ್ರಹಿಸಿದ್ದಾರೆ.

ಇನ್ನು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್ ವಿ ದೇಶಪಾಂಡೆಯಿಂದ ಹಿಡಿದು ಎಲ್ಲಾ ರಾಜಕಾರಣಿಗಳಿಗೂ ತಮಗೆ ಹಕ್ಕುಪತ್ರ ಕೊಡುವಂತೆ ಶಿರವಾಡ ಬಂಗಾರಪ್ಪ ಬಡವಾಣೆಯ ನಿವಾಸಿಗಳು ಪಟ್ಟು ಹಿಡಿದಿದ್ದರು, ಇದರ ಬಗ್ಗೆ ಯಾರು ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನ್ಯಾಯಕ್ಕಾಗಿ ಹೋರಾಟವನ್ನ ಗ್ರಾಮಸ್ಥರು ನಡೆಸುತ್ತಿದ್ದು ಇನ್ನಾದರೂ ಸರ್ಕಾರ ಬಡಜನರ ಹೋರಾಟದತ್ತ ಮುಖ ಮಾಡಿ ಜನರಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡಬೇಕಾಗಿದೆ.

ಇದನ್ನೂ ಓದಿ: ಗೋಕರ್ಣ: ರಸ್ತೆ ಬದಿ ಪಿಟೀಲು ನುಡಿಸಿ ವಿದೇಶಿ ಮಹಿಳೆಯಿಂದ ಹಣ ಗಳಿಕೆ

For All Latest Updates

TAGGED:

Pkg karwar
ETV Bharat Logo

Copyright © 2024 Ushodaya Enterprises Pvt. Ltd., All Rights Reserved.