ETV Bharat / state

ಕಾರವಾರ: ಮಣ್ಣಿನ ಮುದ್ದೆ ಕೈಯಲ್ಲಿಡಿದು ಬಾವಿ ಬಳಿ ಹೋದ 3 ವರ್ಷದ ಬಾಲಕಿ ಆಯತಪ್ಪಿ ಬಿದ್ದು ಸಾವು - ಈಟಿವಿ ಭಾರತ್​ ಕನ್ನಡ ನ್ಯೂಸ್​

ಕಾರವಾರದ ಹರಿದೇವ ನಗರದಲ್ಲಿ ಮೂರು ವರ್ಷದ ಕಂದಮ್ಮ ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾಳೆ.

ಕಾರವಾರದಲ್ಲಿ ಮೃತಪಟ್ಟ 3 ವರ್ಷದ ಮಗು
ಕಾರವಾರದಲ್ಲಿ ಮೃತಪಟ್ಟ 3 ವರ್ಷದ ಮಗು
author img

By ETV Bharat Karnataka Team

Published : Aug 27, 2023, 7:51 PM IST

ಕಾರವಾರ (ಉತ್ತರ ಕನ್ನಡ) : ಮಣ್ಣಿನ ಗಣಪತಿ ಎಂದು ಮಣ್ಣಿನ ಮುದ್ದೆಯನ್ನು ಹಿಡಿದು ಅದನ್ನು ಎಸೆಯಲು ತೆರಳಿದ ಮೂರು ವರ್ಷದ ಬಾಲಕಿಯೊಬ್ಬಳು ಆಯತಪ್ಪಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಕಾರವಾರದ ಹರಿದೇವ ನಗರದಲ್ಲಿ ನಡೆದಿದೆ. ಹರಿದೇವ ನಗರದ ಸೂರಜ್ ಬಂಟ್ ಎನ್ನುವವರ ಮಗಳಾದ ಮೂರು ವರ್ಷದ ಸ್ಥುತಿ ಮೃತಪಟ್ಟ ಬಾಲಕಿ.

ಮನೆಯ ಬಳಿಯೇ ಆಟವಾಡುತ್ತಿದ್ದ ಮಗು ಗಣಪತಿ ಹಬ್ಬ ಸಮೀಪಿಸಿದ್ದ ಹಿನ್ನೆಲೆಯಲ್ಲಿ ಮನೆಯ ಬಳಿ ಗಣಪತಿ ಮೂರ್ತಿ ಮಾಡುತ್ತಿದ್ದಲ್ಲಿಗೆ ತೆರಳಿ ಮಣ್ಣನ್ನು ತೆಗೆದುಕೊಂಡು ತಾನೂ ಮೂರ್ತಿ ತಯಾರಿಸುತ್ತ ಆಟವಾಡುತ್ತಿದ್ದಳು. ಮಣ್ಣಿನ ಮುದ್ದೆಯಲ್ಲೇ ಗಣಪನನ್ನು ಕಂಡುಕೊಂಡಿದ್ದ ಮಗು, ಕೆಲ ಹೊತ್ತಿನ ಬಳಿಕ ಮನೆಯಿಂದ ನೂರು ಮೀಟರ್ ದೂರದಲ್ಲಿರುವ ನಗರಸಭೆಯ ಬಾವಿಗೆ ತೆರಳಿದ್ದಳು. ಬಾವಿಯ ಕಟ್ಟೆ ಮೊಣಕಾಲಿನುದ್ದದಷ್ಟಿದ್ದು, ಅದೇ ಬಾವಿಗೆ ತೆರಳಿದ್ದ ಬಾಲಕಿ ಮಣ್ಣಿನ ಜೊತೆಗೆ ತಾನೂ ಕಾಲು ಜಾರಿ ಬಾವಿಗೆ ಬಿದ್ದಿದ್ದಾಳೆ.

ಭಾನುವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಮಗು ಕಾಣದಿದ್ದಾಗ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿ ಪೊಲೀಸರು ಸ್ಥಳೀಯರೊಂದಿಗೆ ಸುಮಾರು 2 ತಾಸುಗಳ ಕಾಲ ಹುಡುಕಾಡಿದ್ದಾರೆ. ಎಲ್ಲಿಯೂ ಬಾಲಕಿಯ ಸುಳಿವು ಸಿಗದಾದಾಗ ವಾಟ್ಸಪ್‌ಗಳಲ್ಲಿ ಮಗುವಿನ ಫೋಟೋ ಹರಿಬಿಟ್ಟು, ಎಲ್ಲಿಯಾದರೂ ಕಂಡಲ್ಲಿ ಮಾಹಿತಿ ನೀಡಲು ಕೋರಿದ್ದಾರೆ. ಆದರೆ ಸುಮಾರು ಮಧ್ಯಾಹ್ನ 2- 2.30ರ ಹೊತ್ತಿಗೆ ಸಾರ್ವಜನಿಕ ಬಾವಿಯಲ್ಲೊಮ್ಮೆ ನೋಡೋಣವೆಂದು ಸ್ಥಳೀಯರೊಬ್ಬರು ಇಳಿದಾಗ ಆಳದಲ್ಲಿ ಮಗುವಿನ ಮೃತದೇಹ ದೊರೆತಿದೆ.

ಮಗುವಿನ ತಾಯಿಗೆ ಈಗಾಗಲೇ ಒಂದು ವರ್ಷದ ಮತ್ತೊಂದು ಮಗು ಇದೆ. ತಂದೆ ಕೊರಿಯರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಬೆಳಗ್ಗೆ ಹೋದವರು ವಾಪಸ್​ ಬಂದಿರಲಿಲ್ಲ. ತಾಯಿ ಚಿಕ್ಕ ಮಗುವಿಗೆ ಹಾಲುಣಿಸಿ ಮಲಗಿಸಿ ಬರುವಷ್ಟರಲ್ಲಿ ಈ ಘಟನೆ ನಡೆದಿದ್ದು, ಇದೀಗ ಊರಿಗೇ ಊರೇ ಶೋಕಾಚರಣೆಯಲ್ಲಿ ಮುಳುಗಿದೆ.

ಇದನ್ನೂ ಓದಿ : ಗಂಡು ಮಗುವಾಗದ ಕೊರಗು, ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ತಾಯಿ; ಮೂವರು ಮಕ್ಕಳು ಸಾವು

ಇನ್ನು, ಈ ಬಗ್ಗೆ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆ ಶಾಂತಿ ಸೇಠ್ ಅವರು,​ ಅತಿಹೆಚ್ಚು ಜನರಿರುವ ಪ್ರದೇಶದಲ್ಲಿ ಬಾವಿಗಳ ಕಟ್ಟೆಗಳು ಮೊಣಕಾಲಿನಷ್ಟು ಎತ್ತರಕ್ಕಿದೆ. ಒಂದು ಬಾವಿಗೆ ಸ್ಥಳೀಯರ ದೂರಿನ ಮೇರೆಗೆ ಕಟ್ಟೆಗಳನ್ನು ಎತ್ತರಕ್ಕೆ ಕಟ್ಟಿ ಯಾವುದೇ ಅಪಾಯ ಎದುರಾಗದಂತೆ ಮಾಡಲಾಗಿದೆ. ಆದರೆ ಮತ್ತೊಂದು ಬಾವಿಯನ್ನು ಹಾಗೇ ಬಿಡಲಾಗಿದೆ. ಬಾವಿಗೆ ಕಟ್ಟೆ ಕಟ್ಟಿ ಗ್ರಿಲ್ಸ್ ಅಳವಡಿಸಲು ಸಿಮೆಂಟ್, ಮರಳನ್ನು ವರ್ಷಗಳ ಹಿಂದೆ ತಂದು ಬಾವಿಯ ಬಳಿ ಇಡಲಾಗಿದೆ. ಆದರೆ ನಗರಸಭೆಯ ಗ್ರಿಲ್ಸ್ ಅಥವಾ ಕಟ್ಟೆ ಕಟ್ಟುವ ಕಾರ್ಯ ಮಾತ್ರ ಆಗಿರಲಿಲ್ಲ. ಇದೀಗ ಇದೇ ನಿರ್ಲಕ್ಷ್ಯಕ್ಕೆ ಮಗುವೊಂದರ ಪ್ರಾಣವೇ ಹೋಗುವಂತಾಗಿದ್ದು, ಸ್ಥಳೀಯರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಒಂದೇ ಕುಟುಂಬದ ನಾಲ್ವರ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆ.. ಮೈಸೂರಿನಲ್ಲಿ ಹೃದಯ ವಿದ್ರಾವಕ ಘಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.