ETV Bharat / state

ದೇವರ ಆಭರಣ ದೋಚಿದ್ದ ಖದೀಮರು: ಐದು ತಿಂಗಳ ಬಳಿಕ ಮೂವರು ಅರೆಸ್ಟ್​ - ದೇವರ ಆಭರಣ ದೋಚಿದ್ದ ಮೂವರ ಬಂಧನ

ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

3 accused arrested in haliyal
3 accused arrested in haliyal
author img

By

Published : Jul 18, 2021, 12:36 AM IST

ಕಾರವಾರ: ದೇವಸ್ಥಾನದ ಬೀಗ ಮುರಿದು ಆಭರಣ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನ ಐದು ತಿಂಗಳ ಬಳಿಕ ಪೊಲೀಸರು ಹೆಡೆಮುರಿ ಕಟ್ಟಿರುವ ಘಟನೆ ಹಳಿಯಾಳದಲ್ಲಿ ನಡೆದಿದೆ. ತಾಲ್ಲೂಕಿನ ತತ್ವಣಗಿ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಫೆಬ್ರುವರಿ 5 ರಂದು ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ದಾಂಡೇಲಿಯ ಪಟೇಲ ನಗರ ನಿವಾಸಿ ಮೌಲಾಲಿ ಸತ್ತಾರಸಾಬ್ ಜಮಾದಾರ, ಸಾಯಿನಗರ ನಿವಾಸಿ ಮೈಕಲ್ ಅಲಿಯಾಸ್ ಬನ್ನಿ ಅಪ್ಪು ಕಕ್ಕೇರಿ ಹಾಗೂ ಸುಭಾಷನಗರ ನಿವಾಸಿ ರಾಹುಲ್ ಹನುಮಂತ ಕರಗುಪ್ಪಿಕರ ಬಂಧಿತ ಆರೋಪಿಗಳು. ಆರೋಪಿಗಳಿಂದ ಸುಮಾರು 1.45 ಲಕ್ಷ ರೂಪಾಯಿ ಮೌಲ್ಯದ ಬಂಗಾರ ಆಭರಣ ಮತ್ತು ಸುಮಾರು 40 ಸಾವಿರ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ ಹಾಗೂ ಕಳ್ಳತನ ಮಾಡಲು ಬಳಸಿದ್ದ ಮೋಟಾರ್ ಸೈಕಲ್ ಮತ್ತು ಕಬ್ಬಿಣದ ರಾಡ್​ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿರಿ: ವರುಣಾರ್ಭಟಕ್ಕೆ ಕೊಡಗಿನಲ್ಲಿ ಇಬ್ಬರು ಬಲಿ... ಪ್ರಾಣ ಕಳೆದುಕೊಂಡ ಕೂಲಿ ಕಾರ್ಮಿಕರು

ಫೆಬ್ರುವರಿ 5ರ ಮಧ್ಯರಾತ್ರಿ ತತ್ವಣಗಿ ಗ್ರಾಮದ ದುರ್ಗಾದೇವಿ ದೇವಸ್ಥಾನದ ಬಾಗಿಲ ಬೀಗ ಮುರಿದು ದೇವಿಯ ಬಂಗಾರ ಮತ್ತು ಬೆಳ್ಳಿಯ ಆಭರಣ ಹಾಗೂ ನಗದು ಕಳ್ಳತನ ಮಾಡಿರುವುದಾಗಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಪುನ್ನಪ್ಪ ಲಕ್ಷ್ಮಣ ಕೇಳೋಜಿ ದೂರು ನೀಡಿದ್ದರು. ಈ ಸಂಬಂಧ ಐಪಿಸಿ ಸೆಕ್ಷನ್ 457, 380 ಅಡಿಯಲ್ಲಿ ಹಳಿಯಾಳ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಹಳಿಯಾಳ ಸಿಪಿಐ ಮೋತಿಲಾಲ್ ಪವಾರ್ ಇವರ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಹಳಿಯಾಳದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಇದೀಗ ಯಶಸ್ವಿಯಾಗಿದ್ದಾರೆ.ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಶಿವಾನಂದ ನಾವದಗಿ, ಪಿಎಸ್ಐ(ಕಾ&ಸು) ಹಳಿಯಾಳ ಪೊಲೀಸ್ ಠಾಣೆ, ಸತ್ಯಪ್ಪ ಹುಕ್ಕೇರಿ, ಪಿಎಸ್ಐ(ಕ್ರೈಂ), ಎ.ಎಸ್.ಐ. ಸುರೇಶ ಘಾಟಗೆ, ಎ.ಎಸ್.ಐ. ಸಂಜು ಅಣ್ಣಿಕೇರಿ, ಎಎಸ್ಐ ಪಿ.ಎಮ್. ಸೊಲ್ಲಾಪುರಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಈ ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.