ಕಾರವಾರ: ಟ್ಯಾಂಕರ್ ಲಾರಿ ಮೂಲಕ ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿರುವ ಬಗ್ಗೆ ಅನುಮಾನಗೊಂಡ ಅಬಕಾರಿ ಸಿಬ್ಬಂದಿ ತಪಾಸಣೆಗೆ ಮುಂದಾದ ವೇಳೆ ಲಾರಿ ಚಾಲಕ ಪರಾರಿಯಾಗಿದ್ದು, ವಾಹನದಲ್ಲಿದ್ದ 9 ಲಕ್ಷ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿರುವ ಘಟನೆ ಜೋಯಿಡಾ ತಾಲೂಕಿನ ಅನಮೋಡ್ ಚೆಕ್ ಪೋಸ್ಟ್ನಲ್ಲಿ ನಡೆದಿದೆ.
ಹರಿಯಾಣ ನೋಂದಣಿ ಸಂಖ್ಯೆಯನ್ನು ಹೊಂದಿದ ಲಾರಿಯು ಗೋವಾದಿಂದ ಆಗಮಿಸಿದಾಗ ಚೆಕ್ ಪೋಸ್ಟ್ ಬಳಿ ಲಾರಿ ತಡೆದ ಸಿಬ್ಬಂದಿ ತಪಾಸಣೆಗೆ ಮುಂದಾಗಿದ್ದಾರೆ. ಈ ವೇಳೆ ಲಾರಿ ಚಾಲಕ ಓಡಿ ಹೋಗಿದ್ದಾನೆ.
ಇದನ್ನೂ ಓದಿ: 7 ವಿದೇಶಿ ಡ್ರಗ್ಸ್ ಮಾರಾಟಗಾರರ ಬಂಧನ... ಬರೋಬ್ಬರಿ 4 ಕೋಟಿ ಮೌಲ್ಯದ ಮಾದಕ ವಸ್ತು ವಶ
ಬಳಿಕ ಲಾರಿ ತಪಾಸಣೆ ನಡೆಸಿದಾಗ 300 ಬಾಕ್ಸ್ನಲ್ಲಿ ಒಟ್ಟು 2,700 ಲೀಟರ್ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದೆ. ಲಾರಿ ಹಾಗು ಮದ್ಯ ಎರಡನ್ನೂ ವಶಕ್ಕೆ ಪಡೆದ ಅಬಕಾರಿ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.