ETV Bharat / state

ಮಧ್ಯಪ್ರದೇಶದಲ್ಲಿ ಸಿಲುಕಿದ್ದ 19 ವಿದ್ಯಾರ್ಥಿಗಳು ರಾಜ್ಯಕ್ಕೆ ವಾಪಾಸ್ !

ಲಾಕ್​ಡೌನ್​ ಹಿನ್ನೆಲೆ ಮಧ್ಯಪ್ರದೇಶದ ನವೋದಯ ಶಾಲೆಯೊಂದರಲ್ಲಿ ಸಿಲುಕಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ನವೋದಯ ಶಾಲೆಯ 19 ವಿದ್ಯಾರ್ಥಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್​ ಅವರು ಸುರಕ್ಷಿತವಾಗಿ ಮರಳಿ ಮನೆಗೆ ಸೇರಿಸಿದ್ದಾರೆ.

Sirasi
ನವೋದಯ ಶಾಲೆ
author img

By

Published : May 2, 2020, 8:09 PM IST

ಶಿರಸಿ : ಕರೊನಾ ಲಾಕ್​​​​​ಡೌನ್ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶದ ನವೋದಯ ಶಾಲೆಯೊಂದರಲ್ಲಿ ಸಿಲುಕಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ನವೋದಯ ಶಾಲೆಯ 19 ವಿದ್ಯಾರ್ಥಿಗಳು ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ಮರಳಿ ಗೂಡು ಸೇರಿದ್ದಾರೆ.

ಮಧ್ಯಪ್ರದೇಶದಲ್ಲಿ ಸಿಲುಕಿ ಕೊಂಡಿದ್ದ 19 ವಿದ್ಯಾರ್ಥಿಗಳು ವಾಪಾಸ್

ಒಂದು ವರ್ಷದ ಅಧ್ಯಯನಕ್ಕಾಗಿ ಮುಂಡಗೋಡ ತಾಲೂಕಿನ ನವೋದಯ ಶಾಲೆಯಿಂದ ಮಧ್ಯ ಪ್ರದೇಶದ ನವೋದಯ ಶಾಲೆಗೆ ತೆರಳಿದ್ದ 19 ವಿದ್ಯಾರ್ಥಿಗಳು ಲಾಕ್ ಡೌನ್ ನಿಂದಾಗಿ ಅಲ್ಲೇ ಉಳಿಯುವ ಪರಿಸ್ಥಿತಿ ಎದುರಾಗಿತ್ತು. ಮೂರು ಬಾರಿ ಊರಿಗೆ ಬರಲು ರಿಸರ್ವೇಶನ್ ಮಾಡಿಸಿದರೂ ಸಹ ಲಾಕ್ ಡೌನ್ ನಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ, ವಿದ್ಯಾರ್ಥಿಗಳಲ್ಲಿನ ಒಬ್ಬರ ತಾಯಿ ಸಚಿವ ಶಿವರಾಮ ಹೆಬ್ಬಾರ್ ಬಳಿ ಸಮಸ್ಯೆ ಹೇಳಿಕೊಂಡ ಪರಿಣಾಮ ಅವರನ್ನು ಕರೆ ತರಲು ವ್ಯವಸ್ಥೆ ಮಾಡಲಾಯಿತು. ಇಂದು ಬೆಳಗ್ಗೆ ವಿದ್ಯಾರ್ಥಿಗಳು ಜಿಲ್ಲೆಗೆ ಆಗಮಿಸಿದ್ದು, ವಿಶೇಷ ಬಸ್ ಮೂಲಕ ಅವರನ್ನು ಕರೆ ತರುವ ಕಾರ್ಯ ಮಾಡಲಾಗಿದೆ.

ಒಂದೂವರೆ ತಿಂಗಳು ಒದ್ದಾಟ:

ಒಂದೂವರೆ ತಿಂಗಳು ಮನೆ ಕಾಣದೇ ಮಧ್ಯ ಪ್ರದೇಶದಲ್ಲಿ ಸಿಲುಕಿ ಕೊಂಡಿದ್ದರೂ ಸಹ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗಿದೆ. ಊಟ, ವಸತಿ ವ್ಯವಸ್ಥೆಯನ್ನು ಮಾಡಿ, ಆರೋಗ್ಯದ ಕಡೆಗೂ ಲಕ್ಷ್ಯ ವಹಿಸಲಾಗಿದೆ. ಆದರೆ ಮನೆಗೆ ತೆರಳುವ ಬಯಕೆ ಹೆಚ್ಚಾದ ಪರಿಣಾಮ ಎರಡೂ ರಾಜ್ಯಗಳ ಮುತವರ್ಜಿಯಿಂದ ಮಹತ್ತರ ಕಾರ್ಯ ನಡೆದಿದೆ. ಈಗ ಆಗಮಿಸಿರುವ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಿ ಮನೆಗಳಿಗೆ ಕಳಿಸುವುದಾಗಿ ಶಾಲೆಯವರು ಭರವಸೆ ನೀಡಿದ್ದಾರೆ.

ಮನೆಯನ್ನು ಕಾಣದೇ ಅತಂತ್ರ ಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದ ವಿದ್ಯಾರ್ಥಿಗಳನ್ನು ಕರೆತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಉಸ್ತುವಾರಿ ಸಚಿವರ ಮುತವರ್ಜಿಯಿಂದ ಮಕ್ಕಳು ಮನೆ ಸೇರಿದ್ದಾರೆ.‌ ಈ ಹಿನ್ನೆಲೆಯಲ್ಲಿ ಸ್ವತಃ ಸಚಿವ ‌ಹೆಬ್ಬಾರ್ ಶಾಲೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯವನ್ನೂ ವಿಚಾರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.