ಭಟ್ಕಳ: ಅಬಕಾರಿ ಇಲಾಖೆ ಸಿಬ್ಬಂದಿ ಕೊರೊನಾ ವೈರಸ್ ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ ಕೈಗೊಂಡ ಕಾರ್ಯಾಚರಣೆಯಲ್ಲಿ ಹಾಗೂ ಇತರೆ ಸಂದರ್ಭಗಳಲ್ಲಿ ದಾಳಿ ಮಾಡಿ ವಶಪಡಿಸಿಕೊಂಡಿದ್ದ ಅಕ್ರಮ ಮದ್ಯವನ್ನು ಇಲ್ಲಿನ ಸಾಗರ ರಸ್ತೆಯ ಅರಣ್ಯ ಇಲಾಖೆಯ ಜಾಗದಲ್ಲಿ ನಾಶ ಮಾಡಲಾಯಿತು.
ಈ ರೀತಿ ನಾಶ ಮಾಡಿರುವುದರಲ್ಲಿ ಭಾರತೀಯ ಮದ್ಯ, ಬಿಯರ್, ಗೋವಾ ಫೆನ್ನಿ, ಗೋವಾ ಸಾರಾಯಿ, ಕಳ್ಳಭಟ್ಟಿ ಸಾರಾಯಿ, ಗೇರು ಹಣ್ಣಿನ ಸಾರಾಯಿ ಸೇರಿದೆ. ಸುಮಾರು 136 ಲೀಟರ್ ಮದ್ಯದ ಅಂದಾಜು ಮೊತ್ತ 47,500 ರೂ ಎಂಬ ಮಾಹಿತಿ ಇದೆ.