ಭಟ್ಕಳ: ತಾಲೂಕಿನಲ್ಲಿ 13 ಸೋಂಕಿತರು ಪತ್ತೆಯಾಗಿದ್ದು, ವೃದ್ಧನೋರ್ವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ತಾಲೂಕಿನ 43, 56 ವರ್ಷದ ಮಹಿಳೆಯರು, 24, 25 ವರ್ಷದ ಯುವತಿಯರು, 13, 9, 13 ವರ್ಷದ ಬಾಲಕಿಯರು, 5, 6 ವರ್ಷದ ಬಾಲಕರು, 24 ವರ್ಷದ ಯುವಕ, 62 ವರ್ಷದ ವೃದ್ಧನಿಗೆ ಸೋಂಕು ತಗುಲಿದೆ.
ಅಲ್ಲದೆ ಒಂದು ವರ್ಷದ ಗಂಡು ಮಗು ಹಾಗೂ ಪೊಲೀಸ್ ಕಾನ್ಸ್ಟೇಬಲ್ವೊಬ್ಬರ 26 ವರ್ಷದ ಪತ್ನಿಗೆ ಸೋಂಕಿರುವುದು ಪತ್ತೆಯಾಗಿದೆ. ಖಾಸಗಿ ಆಸ್ಪತ್ರೆಯ ನರ್ಸ್ನಿಂದ ಸೋಂಕು ತಗುಲಿರಬಹುದೆಂಬ ಮಾಹಿತಿ ಇದೆ.
ಇಂದು ಸೋಂಕು ಪತ್ತೆಯಾದ 62 ವರ್ಷದ ವೃದ್ಧ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ. ಭಟ್ಕಳದಲ್ಲಿ ಈವರೆಗೂ ಪತ್ತೆಯಾದ 208 ಸೋಂಕಿತರ ಪೈಕಿ 58 ಮಂದಿ ಗುಣಮುಖರಾಗಿದ್ದಾರೆ. 149 ಸಕ್ರಿಯ ಪ್ರಕರಣಗಳಿವೆ.