ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ 108 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 115 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಪತ್ತೆಯಾದ ಸೋಂಕಿತ ಪ್ರಕರಣಗಳ ಪೈಕಿ ಹಳಿಯಾಳದಲ್ಲಿ 26, ಕಾರವಾರ 18, ಹೊನ್ನಾವರ 16, ಕುಮಟಾ 15, ಭಟ್ಕಳ 9, ಶಿರಸಿ 7, ಯಲ್ಲಾಪುರ, ಮುಂಡಗೋಡ ತಲಾ 6, ಜೊಯಿಡಾ 4, ಅಂಕೋಲಾದ ಓರ್ವನಲ್ಲಿ ಪತ್ತೆಯಾಗಿದೆ.
ಇನ್ನು ಜಿಲ್ಲೆಯ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಹಳಿಯಾಳದ 27, ಅಂಕೋಲಾದ 26, ಶಿರಸಿ 19, ಹೊನ್ನಾವರ, ಕಾರವಾರ ತಲಾ 12, ಭಟ್ಕಳ 11, ಜೊಯಿಡಾ 6 ಹಾಗೂ ಸಿದ್ದಾಪುರದ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ಒಟ್ಟು 3,687 ಪ್ರಕರಣಗಳು ಪತ್ತೆಯಾಗಿದ್ದು, 2,781 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 38 ಮಂದಿ ಸಾವನ್ನಪ್ಪಿದ್ದು, 868 ಜನರಿಗೆ ಚಿಕಿತ್ಸೆ ಮುಂದುವರೆದಿದೆ.