ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 101 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, 88 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಾರವಾರದಲ್ಲಿ 10, ಅಂಕೋಲಾ 2, ಕುಮಟಾ 5, ಹೊನ್ನಾವರ 11, ಭಟ್ಕಳ 33, ಶಿರಸಿ 19, ಮುಂಡಗೋಡ 6, ಹಳಿಯಾಳ 10 ಹಾಗೂ ಜೊಯಿಡಾದಲ್ಲಿ 5 ಮಂದಿಗೆ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 4,618 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಹಳಿಯಾಳದ 21, ಸಿದ್ದಾಪುರ 1, ಶಿರಸಿ 9, ಹೊನ್ನಾವರ 1, ಭಟ್ಕಳ 22, ಕಾರವಾರ 5, ಕುಮಟಾ 8, ಯಲ್ಲಾಪುರ 4, ಮುಂಡಗೋಡ 11, ಜೊಯಿಡಾ 1, ಅಂಕೋಲಾದ 5 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಇದುವರೆಗೆ 3,434 ಮಂದಿ ಗುಣಮುಖರಾದಂತಾಗಿದೆ.
ಇದುವರೆಗೆ ಜಿಲ್ಲೆಯಲ್ಲಿ ಸೋಂಕಿಗೆ 51 ಮಂದಿ ಸಾವನ್ನಪ್ಪಿದ್ದು, ಇನ್ನು 1133 ಜನರಿಗೆ ಚಿಕಿತ್ಸೆ ಮುಂದುವರಿದಿದೆ.