ETV Bharat / state

ಮಲ್ಪೆ ಬೀಚ್​ನಲ್ಲಿ ಕಯಾಕ್​ ಸಾಹಸ.. ಅಲೆಗಳ ಮೇಲೆ ಹುಟ್ಟು ಹಾಕಿ ಮುನ್ನುಗ್ಗಿದ ಗಟ್ಟಿಗಿತ್ತಿಯರು - malpe beach

ವಿಶ್ವ ಮಹಿಳಾ ದಿನದಂದು ಯುವಜನ ಸಬಲೀಕರಣ ಕ್ರೀಡಾ ಇಲಾಖೆ ಮಹಿಳೆಯರಿಗಾಗಿ ಮಲ್ಪೆಯಲ್ಲಿ ಸಾಗರಯಾನ ಸಾಹಸಕ್ರೀಡೆ ಆಯೋಜಿಸಿತ್ತು. ಕಯಾಕ್ (ಇಬ್ಬರು ಕುಳಿತು ಹುಟ್ಟುಹಾಕುವ ಸಣ್ಣ ದೋಣಿ) ಮೂಲಕ ಯುವತಿಯರು ಹುಟ್ಟುಹಾಕಿ ಸಂಭ್ರಮಿಸಿದರು.

young-girls-kayak-adventure-at-mulpe-beach
ಅಲೆಗಳ ಮೇಲೆ ತೇಲಾಡಿದ ಗಟ್ಟಿಗಿತ್ತಿಯರು
author img

By

Published : Mar 9, 2021, 7:26 PM IST

ಉಡುಪಿ: ಮಹಿಳೆ ಮನಸ್ಸು ಮಾಡಿದರೆ ಯಾವ ಸಾಧನೆ ಬೇಕಾದರೆ ಮಾಡುತ್ತಾಳೆ. ಇದು ಸಾಕಷ್ಟು ಬಾರಿ ಸಾಬೀತು ಕೂಡ ಆಗಿದೆ. ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆ ಉಡುಪಿಯಲ್ಲಿ 50 ಮಂದಿ ಕಾಲೇಜು ಯುವತಿಯರು ಸಮುದ್ರಕ್ಕೆ ಹುಟ್ಟುಹಾಕಿ ಸಾಹಸ ಮೆರೆದಿದ್ದಾರೆ.

ವಿಶ್ವ ಮಹಿಳಾ ದಿನದಂದು ಯುವಜನ ಸಬಲೀಕರಣ ಕ್ರೀಡಾ ಇಲಾಖೆ ಮಹಿಳೆಯರಿಗಾಗಿ ಮಲ್ಪೆಯಲ್ಲಿ ಸಾಗರಯಾನ ಸಾಹಸಕ್ರೀಡೆ ಆಯೋಜಿಸಿತ್ತು. ಕಯಾಕ್ (ಇಬ್ಬರು ಕುಳಿತು ಹುಟ್ಟುಹಾಕುವ ಸಣ್ಣ ದೋಣಿ) ಮೂಲಕ ಯುವತಿಯರು ಸಾಗರದ ಮಧ್ಯ ಭಾಗದವರೆಗೂ ಹುಟ್ಟುಹಾಕಿದ್ದಾರೆ.

ಮಲ್ಪೆ ಬೀಚ್​ನಲ್ಲಿ ಯುವತಿಯರ ಸಾಹಸ

ಸಾಮಾನ್ಯವಾಗಿ ನದಿಯಲ್ಲಿ, ಹಿನ್ನೀರಿನಲ್ಲಿ ಕಯಾಕ್ ದೋಣಿ ಏರಿ ಸಾಹಸ ಮೆರೆಯಲಾಗುತ್ತದೆ. ಪ್ರವಾಸಿಗರನ್ನು ಕರಾವಳಿ ತೀರಕ್ಕೆ ಸೆಳೆಯಲು ಬಳಸಲಾಗುತ್ತದೆ. ಸಮುದ್ರದ ಅಲೆಗಳನ್ನು ಸೀಳಿ, ಬೀಸುವ ಗಾಳಿಗೆ ವಿರುದ್ಧವಾಗಿ ಕಯಾಕಿಂಗ್ ನಡೆಸೋದು ಬಹಳ ಕಷ್ಟ.

ಆದರೆ ಈ ಸಾಹಸ ಕ್ರೀಡೆಗಾಗಿ ಕ್ರೀಡಾಪಟುಗಳಿಗೆ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಎರಡು ದಿನ ತರಬೇತಿ ನೀಡಿತ್ತು. ತರಬೇತಿ ಪಡೆದಿರುವ ಯುವತಿಯರು ಜಿದ್ದಿಗೆ ಬಿದ್ದವರಂತೆ ಸಾಗರದಲೆಗಳನ್ನು ಹಿಮ್ಮೆಟ್ಟಿಸಿ ಸೈಂಟ್ ಮೇರೀಸ್ ತಲುಪಿ ಸಾಹಸ ಮಾಡಿದ್ದಾರೆ.

ಇದನ್ನೂ ಓದಿ: ಮಲ್ಪೆಯಲ್ಲಿ ಗಮನಸೆಳೆದ 'ವಿ ಆರ್​ ದಿ ಪವರ್' ಮರಳು ಕಲಾಕೃತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.