ಉಡುಪಿ: ಜಿಲ್ಲೆಯ ವಕೀಲನೊಬ್ಬ ವಿವಾಹವಾಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆಯನ್ನೂ ನಡೆಸಿ ಇದೀಗ ವಂಚಿಸಿದ್ದಾನೆ ಎಂದು ಸಂತ್ರಸ್ತ ಯುವತಿಯೊಬ್ಬಳು ಆರೋಪಿಸಿದ್ದಾಳೆ.
ಆರೋಪಿ ಸತತ ಐದು ವರ್ಷಗಳ ಕಾಲ ಪ್ರೇಮದ ಹೆಸರಲ್ಲಿ ನಾಟಕವಾಡಿದ್ದಾನೆ. ಬಳಿಕ ದೈಹಿಕವಾಗಿ ತನ್ನನ್ನು ಬಳಸಿಕೊಂಡು ಇದೀಗ ಬೀದಿಗೆ ತಳ್ಳಿದ್ದಾನೆ ಎಂದು ನೊಂದ ಯುವತಿ ಅಲವತ್ತುಕೊಂಡಿದ್ದಾಳೆ.
'ಆರೋಪಿ ವಕೀಲನ ಹೆಸರು ಸುಕುಮಾರ್ ಶೆಟ್ಟಿ. ಈತ ಜಿಲ್ಲೆಯ ಕುಂದಾಪುರ ತಾಲೂಕಿನ ಕಾವಡಿ ಗ್ರಾಮದ ನಿವಾಸಿ. ಕುಂದಾಪುರ ತಾಲೂಕಿನಲ್ಲಿ ವಕೀಲನಾಗಿರುವ ಈತನಿಗೆ ಯುವತಿಯರು, ಮಹಿಳೆಯರನ್ನು ಪ್ರೀತಿ, ಪ್ರೇಮದ ಹೆಸರಲ್ಲಿ ವಂಚಿಸೋದೇ ಚಾಳಿಯಾಗಿದೆ' ಎಂದು ಯುವತಿ ಆಕ್ರೋಶ ವ್ಯಕ್ತಪಡಿಸಿದಳು.
'2020ರ ಏಪ್ರಿಲ್ ತಿಂಗಳಲ್ಲಿ ಮದುವೆ ಆಗುತ್ತೇನೆಂದು ಸತತ ಐದು ವರ್ಷ ತನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ. ಬಳಿಕ ಈಗ ಮದುವೆ ಸಾಧ್ಯವಿಲ್ಲ, ಮದುವೆ ಆದ್ರೆ ಹೆತ್ತವರನ್ನು ನಾನು ಕಳೆದುಕೊಳ್ಳುತ್ತೇನೆ. ನಮ್ಮ ಮದುವೆಗೆ ಜಾತಿ ಕೂಡ ಸಮಸ್ಯೆ ತೊಡಕಾಗಿದೆ ಎಂದೆಲ್ಲ ಸಬೂಬು ಹೇಳುತ್ತಿದ್ದಾನೆ. ಮದುವೆಗೆ ಒತ್ತಾಯಿಸಿದ ತನ್ನ ಮೇಲೂ ಹಲ್ಲೆ ನಡೆಸಿದ್ದಾನೆ' ಎಂದು ಯುವತಿ ಹೇಳುತ್ತಾಳೆ.
ಓದಿ: ಬಾಲ್ಯ ವಿವಾಹಿತೆ ಜೊತೆ ಪ್ರೀತಿ, ಅಪ್ಪ - ಅಮ್ಮನಿಗಾಗಿ 2ನೇ ಮದುವೆ : ನ್ಯಾಯಕ್ಕಾಗಿ ಯುವತಿಯ ಆಗ್ರಹ